ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಊರಿನಿಂದ ನಗರದ ಕಡೆ ವಾಪಸ್ ಬರ್ತಿದ್ದಾರೆ ವಲಸೆ ಕಾರ್ಮಿಕರು

|
Google Oneindia Kannada News

ದೆಹಲಿ, ಜೂನ್ 27: ಕೊರೊನಾ ವೈರಸ್ ಲಾಕ್‌ಡೌನ್ ಕಾರಣದಿಂದ ಸ್ವಂತ ಊರುಗಳಿಗೆ ತೆರಳಿದ್ದ ವಲಸೆ ಕಾರ್ಮಿಕರು, ಈಗ ಮತ್ತೆ ಕೆಲಸಗಳಿಗೆ ಮರಳುತ್ತಿದ್ದಾರೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.

Recommended Video

ನ್ಯಾಯ ಕೊಡಿಸಬೇಕಾದ ಅವರೇ ಅನ್ಯಾಯ ಮಾಡುತ್ತಿದ್ದಾರೆ | Davangere | Lady pleads for Justice | Oneindia Kannada

ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್ ಶುಕ್ರವಾರ ಮಾತನಾಡಿದ್ದು "ಊರುಗಳಿಗೆ ತೆರಳಿದ್ದ ವಲಸೆ ಕಾರ್ಮಿಕರು ಸಾಮಾನ್ಯ ರೈಲುಗಳ ಮೂಲಕ ಮತ್ತೆ ವಾಪಸ್ ಬರುತ್ತಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.

ವಿಮಾನ, ರೈಲು ಸಂಚಾರ ನಿರ್ಬಂಧಿಸಿ: ಮೋದಿಗೆ ಒಡಿಶಾ ಸಿಎಂ ಮನವಿವಿಮಾನ, ರೈಲು ಸಂಚಾರ ನಿರ್ಬಂಧಿಸಿ: ಮೋದಿಗೆ ಒಡಿಶಾ ಸಿಎಂ ಮನವಿ

ವಲಸೆ ಕಾರ್ಮಿಕರನ್ನು ಊರುಗಳಿಗೆ ಕಳುಹಿಸಿಕೊಡಲು ಆರಂಭಿಸಿದ್ದ ಶ್ರಮಿಕ್ ರೈಲುಗಳಲ್ಲಿ ಶೇಕಡಾ 70ರಷ್ಟು ಜನರು ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಹೋಗಿದ್ದರು. ಇದೀಗ, ಅಲ್ಲಿಂದ ಮುಂಬೈ, ಅಹಮದಬಾದ್, ಗುಜರಾತ್‌ ಕಡೆಗೆ ವಾಪಸ್ ಆಗುತ್ತಿದ್ದಾರೆ ಎಂದು ಯಾದವ್ ಹೇಳಿದ್ದಾರೆ.

Migrant Workers Returning To Work Place Said Railway Chairman

ಪ್ರಸ್ತುತ 230 ವಿಶೇಷ ಪ್ಯಾಸೆಂಜರ್ ರೈಲುಗಳು ಸಂಚಾರ ಮಾಡುತ್ತಿದ್ದು, ಕಾರ್ಮಿಕರ ಚಲನವಲನ ಗಮನಿಸುತ್ತಿರುವ ಭಾರತೀಯ ರೈಲ್ವೆ ಮತ್ತಷ್ಟು ರೈಲು ಹೆಚ್ಚಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಇನ್ನು "ಉತ್ತರ ಪ್ರದೇಶ, ಬಿಹಾರದ ಜನರು ಮುಂಬೈ ಮತ್ತು ಬೆಂಗಳೂರು ಕಡೆಗೆ ಹೋಗುತ್ತಿರುವುದು ಬಹಳ ಪ್ರೋತ್ಸಾಹದಾಯಕವಾಗಿದೆ" ಎಂದು ಯಾದವ್ ಹೇಳಿದ್ದಾರೆ.

ಕೊರೊನಾ ವೈರಸ್ ಲಾಕ್‌ಡೌನ್‌ ಕಾರಣದಿಂದ ರಾಷ್ಟ್ರವ್ಯಾಪಿ ಸುಮಾರು 12,000ಕ್ಕೂ ಹೆಚ್ಚು ಪ್ಯಾಸೆಂಜರ್ ರೈಲುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ, ಲಾಕ್‌ಡೌನ್‌ನಲ್ಲಿ ವಿನಾಯಿತಿ ಘೋಷಿಸಿದ ಬಳಿಕ ಜೂನ್ 1 ರಿಂದ ಸುಮಾರು 200 ಎಕ್ಸ್‌ಪ್ರೆಸ್ ರೈಲುಗಳು ಕಾರ್ಯಾಚರಣೆಯನ್ನು ಸಂಚಾರಕ್ಕೆ ಅನುಮತಿ ನೀಡಿದೆ.

English summary
Migrant workers who had returned to their homes amid the coronavirus lockdown have started returning to their work place said Railway Board chairman
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X