ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವದೆಹಲಿ To ಜಾರ್ಖಂಡ್ ತೆರಳಲು 4,000 ರೂಪಾಯಿ!

|
Google Oneindia Kannada News

ನವದೆಹಲಿ, ಮೇ.21: ಭಾರತ ಲಾಕ್ ಡೌನ್ 4.0 ವಿಸ್ತರಣೆ ಬಳಿಕ ಅತಂತ್ರ ಸ್ಥಿತಿಯಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ತಮ್ಮೂರುಗಳಿಗೆ ಕಳುಹಿಸಿ ಕೊಡಲು ನವದೆಹಲಿಯಲ್ಲಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಡಲಾಗಿದೆ.

ನವದೆಹಲಿಯಲ್ಲಿರುವ ವಲಸೆ ಕಾರ್ಮಿಕರಿಗಾಗಿ ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರ ಮತ್ತು ಪಶ್ಚಿಮ ಬಂಗಾಳಕ್ಕೆ ಬಸ್ ಸಂಚಾರ ಆರಂಭಿಸಲಾಗಿದೆ. ನವದೆಹಲಿ-ಘಜಿಪುರ್ ಗಡಿ ಹಾಗೂ ನವದೆಹಲಿ-ನೋಯ್ಡಾ ಪ್ರದೇಶದಿಂದ ಸೋಮವಾರದಿಂದಲೇ ಬಸ್ ಸಂಚಾರ ಆರಂಭಿಸಲಾಗಿದೆ.

ಶ್ರಮಿಕ್ ರೈಲಿನಲ್ಲಿ ಹೊರಟ ಕಾರ್ಮಿಕರಿಗೆ ಕೊರೊನಾ ಅಂಟಲು ಇಷ್ಟೇ ಸಾಕು!ಶ್ರಮಿಕ್ ರೈಲಿನಲ್ಲಿ ಹೊರಟ ಕಾರ್ಮಿಕರಿಗೆ ಕೊರೊನಾ ಅಂಟಲು ಇಷ್ಟೇ ಸಾಕು!

ಬುಧವಾರ ರಾತ್ರಿ ನವದೆಹಲಿ-ಘಜಿಪುರ್ ಗಡಿಯಲ್ಲಿ ತಮ್ಮೂರಿಗೆ ತಲುಪಲು ಸಾವಿರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ನೆರೆದಿದ್ದರು. ಈ ವೇಳೆ ಬಸ್ ಟಿಕೆಟ್ ದರದ ಬಗ್ಗೆ ವಲಸೆ ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 Immigrant Workers Boarded buses from New Delhi-Ghazipur Area To Reach Home State

ಟಿಕೆಟ್ ದರದ ಬಗ್ಗೆ ಅಸಮಾಧಾನ:

ರಾಮ್ ದೇವ್ ಶರ್ಮಾ ಎಂಬುವವರು ತಾವು ಜಾರ್ಖಂಡ್ ಗೆ ತೆರಳವುದಕ್ಕೆ 4,000 ರೂಪಾಯಿ ಚಾರ್ಜ್ ಮಾಡಲಾಗಿದೆ ಎಂದಿದ್ದಾರೆ. ಇನ್ನು, ಬಸ್ ನಲ್ಲಿ ಸಾಮಾಜಿಕ ಅಂತರವನ್ನು ಗಾಳಿಗೆ ತೂರಲಾಗಿತ್ತು.

ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ:

ಒಂದು ಬಸ್ ನಲ್ಲಿ ಇಂತಿಷ್ಟು ಪ್ರಯಾಣಿಕರಷ್ಟೇ ಇರಬೇಕು ಎಂಬ ಬಗ್ಗೆ ಸರ್ಕಾರದಿಂದ ಯಾವುದೇ ಮಾರ್ಗಸೂಚಿ ಬಂದಿಲ್ಲ. ಈ ಹಿನ್ನೆಲೆ ಬಸ್ ನಲ್ಲಿ ಹೆಚ್ಚಿನ ಪ್ರಯಾಣಿಕರು ಇರಬಹುದು. ಸರ್ಕಾರದಿಂದ ನಿರ್ದಿಷ್ಟ ಸೂಚನೆ ಬಂದಲ್ಲಿ, ಹೆಚ್ಚುವರಿ ಪ್ರಯಾಣಿಕರನ್ನು ಬಸ್ ನಲ್ಲಿ ಕೂರಿಸುವುದಿಲ್ಲ ಎಂದು ಬಸ್ ಚಾಲಕ ಸಂತೋಷ್ ತಿಳಿಸಿದ್ದಾರೆ.

English summary
Immigrant Workers Boarded buses from New Delhi-Ghazipur Area To Reach Home State.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X