ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಿಚಾರದಲ್ಲಿ ಮಾಧ್ಯಮದವರು ತಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಿ

|
Google Oneindia Kannada News

ದೆಹಲಿ, ಏಪ್ರಿಲ್ 22: ಚೆನ್ನೈನಲ್ಲಿನ ಮಾಧ್ಯಮ ಸಂಸ್ಥೆಯೊಂದರ 27 ಉದ್ಯೋಗಿಗಳಿಗೆ ಕೊರೊನಾ ಸೋಂಕು ತಗುಲಿದೆ. ಸೋಂಕಿನ ಭೀತಿಯಿಂದ ಮಾಧ್ಯಮ ಸಂಸ್ಥೆಗೆ ಬೀಗ ಹಾಕಲಾಗಿದೆ. ದೆಹಲಿಯಲ್ಲಿ ಹಲವು ಪತ್ರಕರ್ತರಿಗೆ ಸೋಂಕು ತಗುಲಿದೆ.

Recommended Video

ಬಾಗಲಕೋಟೆಯ ಲೋಕಾಪುರದಲ್ಲಿ ಜನಮರುಳೋ ಜಾತ್ರೆ ಮರುಳೋ | Bagalkot Market | Oneindia Kannada

ಹಾಗಾಗಿ, ದೆಹಲಿಯಲ್ಲಿ ಪತ್ರಕರ್ತರಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ರಾಜ್ಯದಲ್ಲೂ ಪತ್ರಕರ್ತರು ಕೊರೊನಾದಿಂದ ಜಾಗೃತರಾಗಿರಬೇಕು ಮತ್ತು ತಪಾಸಣೆಗೆ ಒಳಪಡಿ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದರು.

ಸೇಫ್ ಎಂದುಕೊಂಡಿದ್ದ ಕೇರಳಕ್ಕೆ ಮತ್ತೆ ಆಘಾತ ನೀಡಿದ ಕೊರೊನಾಸೇಫ್ ಎಂದುಕೊಂಡಿದ್ದ ಕೇರಳಕ್ಕೆ ಮತ್ತೆ ಆಘಾತ ನೀಡಿದ ಕೊರೊನಾ

ಅಂದ್ಹಾಗೆ, ದೇಶಾದ್ಯಂತ 20 ಸಾವಿರ ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಇದರಲ್ಲಿ ಪತ್ರಕರ್ತರು ಇದ್ದಾರೆ ಎನ್ನುವುದನ್ನು ಮರೆಯುವಂತಿಲ್ಲ. ತಮ್ಮ ಕೆಲಸ, ಕರ್ತವ್ಯ ಎಂದು ಸುದ್ದಿ ಮಾಡುವ ಭರದಲ್ಲಿ ಸೋಂಕು ಅಂಟಿಕೊಂಡಿರುವ ಉದಾಹರಣೆಗಳಿವೆ.

Media Persons May Take Health Precautions While During COVID19 Duties

ಆದ್ದರಿಂದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾಧ್ಯಮ ಸಂಸ್ಥೆಗಳಿಗೆ ಸಲಹೆ ನೀಡಿದೆ. ''ಕೆಲಸ ಮಾಡುವ ಉದ್ದೇಶದಿಂದ ಹಾಟ್‌ಸ್ಪಾಟ್, ಕಂಟೋನ್‌ಮೆಂಟ್ ಝೋನ್ ಸೇರಿದಂತೆ ಹಲವು ಕಡೆ ಸಂಚಾರ ಮಾಡುವ ವರದಿಗಾರರು ತಮ್ಮ ಆರೋಗ್ಯ ಮೇಲೆ ನಿಗಾ ವಹಿಸಬೇಕಾಗುತ್ತದೆ. ಕರ್ತವ್ಯ ನಿರ್ವಹಿಸುವಾಗ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದೆ.

ಕೋವಿಡ್-19 ಬಗ್ಗೆ ಇಂಚಿಂಚು ಮಾಹಿತಿ ಕೊಡುವ ಲವ್ ಅಗರ್ವಾಲ್ ಯಾರು?ಕೋವಿಡ್-19 ಬಗ್ಗೆ ಇಂಚಿಂಚು ಮಾಹಿತಿ ಕೊಡುವ ಲವ್ ಅಗರ್ವಾಲ್ ಯಾರು?

ಕೊರೊನಾ ವಿರುದ್ಧ ಹೋರಾಡುತ್ತಿರುವವರ ಪೈಕಿ ಪತ್ರಕರ್ತರ ಪಾತ್ರವೂ ಇದೆ ಎಂದು ಸ್ವತಃ ದೇಶದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಜನರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸ ಮಾಡುತ್ತಿರುವ ಮಾಧ್ಯಮದವರಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದೆ.

ಲಾಕ್‌ಡೌನ್‌ನಿಂದ ವಿನಾಯಿತಿ ಸಿಕ್ಕರೂ, ಕೊರೊನಾದಿಂದ ವಿನಾಯಿತಿ ಸಿಗುವುದು ಕಷ್ಟ. ಹಾಗಾಗಿ, ಮಾಧ್ಯಮ ಸಿಬ್ಬಂದಿ ತಮ್ಮ ಆರೋಗ್ಯದ ಬಗ್ಗೆ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡು ಕೆಲಸ ಮಾಡಬೇಕಿದೆ.

English summary
Media persons may take health & related precautions while performing COVID19 duties: Ministry of Information & Broadcasting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X