ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿಗೆ ಭಾರೀ ಹಿನ್ನಡೆ: ಮತ್ತೆ ಶುರು ನಾಗರಿಕತ್ವದ ಸಂಕಟ!

|
Google Oneindia Kannada News

Recommended Video

ರಾಹುಲ್ ಗಾಂಧಿಗೆ ಮತ್ತೆ ಶುರುವಾಯ್ತು ನಾಗರಿಕತ್ವದ ಸಂಕಟ | Oneindia Kannada

ನವದೆಹಲಿ, ಏಪ್ರಿಲ್ 30: ರಾಹುಲ್ ಗಾಂಧಿ ನಾಗರಿಕತ್ವಕ್ಕೆ ಸಂಬಂಧಿಸಿದಂತೆ ಗೃಹ ಸಚಿವಾಲಯ ಅವರಿಗೆ ನೋಟೀಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಭಾರೀ ಹಿನ್ನಡೆ ಉಂಟಾಗಿದೆ.

ಲೋಕಸಭಾ ಚುನಾವಣೆ ವಿಶೇಷ ಪುಟ

ಬಿಜೆಪಿ ರಾಜ್ಯ ಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರ ದೂರಿನ ಮೇರೆಗೆ ಗೃಹ ಸಚಿವಾಲಯ ನೋಟೀಸ್ ಜಾರಿಗೊಳಿಸಿದ್ದು, ಅವರ ನಾಗರಿಕತ್ವಕ್ಕೆ ಸಂಬಂಧಿಸಿದಂತೆ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಆದೇಶಿಸಿದೆ.

ಚೌಕಿದಾರ್ ಚೋರ್ ಹೈ ಘೋಷಣೆ: ರಾಹುಲ್ ಗಾಂಧಿ ವಿರುದ್ಧ ಪ್ರಕರಣಚೌಕಿದಾರ್ ಚೋರ್ ಹೈ ಘೋಷಣೆ: ರಾಹುಲ್ ಗಾಂಧಿ ವಿರುದ್ಧ ಪ್ರಕರಣ

"ಇಂಗ್ಲೆಂಡ್ ನಲ್ಲಿ 2003 ರಲ್ಲಿಬ್ಯಾಕಾಪ್ಸ್ ಲಿ. ಎಂಬ ಹೆಸರಿನಲ್ಲಿ ಕಂಪನಿಯೊಂದನ್ನು ರಿಜಿಸ್ಟರ್ ಮಾಡಲಾಗಿದೆ. ಆ ಕಂಪನಿಗೆ ನೀವು ಸಹ ಒಬ್ಬ ನಿರ್ದೇಶಕರು ಮತ್ತು ಕಾರ್ಯದರ್ಶಿ. ನೀವು ಕಂಪನಿಗೆ ನೀಡಿದ ಜನ್ಮ ವಿವರದಲ್ಲಿ ನಿಮ್ಮ ರಾಷ್ಟ್ರೀಯತೆಯನ್ನು 'ಬ್ರಿಟಿಶ್' ಎಂದು ಘೋಷಿಸಿದ್ದೀರಿ. 17/02/2009 ರ ಈ ಕಂಪನಿಯ ದಾಖಲೆಗಳಲ್ಲೂ ನಿಮ್ಮದು ಬ್ರಿಟಿಶ್ ನಾಗರಿಕತ್ವ ಎಂದೇ ಉಲ್ಲೇಖಿಸಲಾಗಿದೆ. ಈ ಕುರಿತು ಎರಡು ವಾರಗಳೊಳಗೆ ಸ್ಪಷ್ಟೀಕರಣ ನೀಡಿ" ಎಂದು ಗೃಹ ಸಚಿವಾಲಯ ಆದೇಶಿಸಿದೆ.

MHA issues notice to Rahul Gandhi over citizenship

ರಾಹುಲ್ ಗಾಂಧಿ ಅವರು ಆ ಕಂಪನಿಗೆ ನೀಡಿದ ಜನ್ಮ ವಿವರಗಳಿಗೂ ಮತ್ತು ಅಮೇಥಿಯಲ್ಲಿ ನಾಮಪತ್ರ ಸಲ್ಲಿಸುವಾಗ ನೀಡಿದ ಅಫಿಡವಿಟ್ ನಲ್ಲಿರುವ ವಿದ್ಯಾರ್ಹತೆಯ ವಿವರಕ್ಕೂ ಹೊಂದಾಣಿಕೆಯಾಗುತ್ತಿಲ್ಲ ಎಂದು ಅಮೇಥಿಯಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿಯೊಬ್ಬರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಆದರೆ ಈ ದೂರನ್ನು ಅಮೇಥಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಜಾಗೊಳಿಸಿದ್ದರಿಂದ ಅವರ ಸ್ಪರ್ಧೆಯನ್ನು ಮಾನ್ಯ ಮಾಡಲಾಗಿತ್ತು.

English summary
According to reliable sources, Ministry of Home Affairs on Tuesday issued a notice to Congress president Rahul Gandhi over his Indian citizenship,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X