ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್‌ನಿಂದ ಮೆಟ್ರೋ ರೈಲು ಸಂಚಾರ ಆರಂಭ?

|
Google Oneindia Kannada News

ನವದೆಹಲಿ, ಆಗಸ್ಟ್ 21: ಕೊರೊನಾ ವೈರಸ್ ಹಾವಳಿ ಶುರುವಾದ ಸಂದರ್ಭದಿಂದಲೂ ಸ್ಥಗಿತಗೊಂಡಿರುವ ಮೆಟ್ರೋ ರೈಲು ಸಂಚಾರ ದೇಶದಾದ್ಯಂತ ಹಲವು ನಿಬಂಧನೆಗಳಿಗೆ ಒಳಪಟ್ಟು ಮತ್ತೆ ಆರಂಭವಾಗಲಿದೆ.

ಸೆಪ್ಟೆಂಬರ್ ತಿಂಗಳಿನಿಂದ ದೇಶದಾದ್ಯಂತ ಮೆಟ್ರೋ ಸೇವೆ ಆರಂಭವಾಗುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ. ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಮೆಟ್ರೋ ರೈಲು ಸೇವೆ ಸ್ಥಗಿತಗೊಂಡು 150ಕ್ಕೂ ಹೆಚ್ಚು ದಿನಗಳೇ ಕಳೆದಿವೆ. ಅನ್‌ಲಾಕ್ 4ರ ಮೊದಲ 15 ದಿನಗಳವರೆಗೆ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ. ಆರಂಭದ ಹಂತದಲ್ಲಿ ಸರ್ಕಾರದ ತುರ್ತು ಸೇವೆಗಳು ಸೇರಿದಂತೆ ಕೆಲವೇ ಆಯ್ದ ವಿಭಾಗಗಳ ಜನರಿಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ.

ಬೆಂಗಳೂರಿಗರಿಗೆ ಶುಭ ಸುದ್ದಿ ಕೊಟ್ಟ ಬಿಎಂಆರ್‌ಸಿಎಲ್ಬೆಂಗಳೂರಿಗರಿಗೆ ಶುಭ ಸುದ್ದಿ ಕೊಟ್ಟ ಬಿಎಂಆರ್‌ಸಿಎಲ್

ಮೆಟ್ರೋ ಸಂಚಾರ ಆರಂಭಿಸಲು ಪ್ರಮಾಣಿತ ಕಾರ್ಯಾಚರಣೆ ನಿಯಮ (ಎಸ್‌ಒಪಿ) ಈಗಾಗಲೇ ಸಿದ್ಧವಾಗಿದೆ. ಮೆಟ್ರೋ ರೈಲುಗಳಲ್ಲಿ ಓಡಾಡುವ ಪ್ರಯಾಣಿಕರಿಗೆ ಕೆಲವು ಷರತ್ತುಗಳ ಅಡಿಯಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗುತ್ತದೆ. ಇಡೀ ಒಂದು ಕೋಚ್‌ಗೆ 50 ಜನರು ಮಾತ್ರವೇ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ.

 Metro Services Across The Country To Resume From September

ದೆಹಲಿಯ ಡಿಎಂಆರ್‌ಸಿ ಮುಖ್ಯಸ್ಥ ಮಂಗು ಸಿಂಗ್, ರಾಜೀವ್ ಚೌಕ್ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿ ಕಾರ್ಯಾಚರಣೆ ವ್ಯವಸ್ಥೆಗಳು ಹಾಗೂ ನಿರ್ವಹಣಾ ಚಟುವಟಿಕೆಗಳನ್ನು ಗುರುವಾರ ಪರಿಶೀಲಿಸಿದ್ದಾರೆ. ಇದು ಮೆಟ್ರೋ ಸೇವೆಗಳು ಶೀಘ್ರವೇ ಶುರುವಾಗುವ ಸುಳಿವು ನೀಡಿದೆ. ಆದರೆ ದೆಹಲಿ ಮೆಟ್ರೋ ರೈಲು ನಿಗಮ ಇದು ಮಾಮೂಲಿ ಪರಿಶೀಲನೆ ಎಂದು ತಿಳಿಸಿದೆ.

ಮಾಗಡಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಡಾ. ರಾಜ್ ಹೆಸರಿಡಿ: ಎಎಪಿಮಾಗಡಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಡಾ. ರಾಜ್ ಹೆಸರಿಡಿ: ಎಎಪಿ

ಕಳೆದ ಮಾರ್ಚ್ ತಿಂಗಳಲ್ಲಿ ಮೆಟ್ರೋ ಸಂಚಾರ ನಿಂತ ಸಂದರ್ಭದಿಂದ ದೆಹಲಿ ಮೆಟ್ರೋ ಸುಮಾರು 1,300 ಕೋಟಿ ರೂ ನಷ್ಟ ಅನುಭವಿಸಿದೆ. ತಿಂಗಳಿಗೆ 25 ಕೋಟಿಯಂತೆ ಬೆಂಗಳೂರಿನ ನಮ್ಮ ಮೆಟ್ರೋ ಕೂಡ 100 ಕೋಟಿಗೂ ಅಧಿಕ ನಷ್ಟ ಅನುಭವಿಸಿದೆ.

English summary
Sources said, Metro services across the country are likely to resume from Semptember.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X