ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2025ರ ವೇಳೆಗೆ ಮೆಟ್ರೋ ಸೇವೆಗಳು 25ಕ್ಕೂ ಹೆಚ್ಚು ನಗರಗಳನ್ನು ತಲುಪಲಿದೆ: ನರೇಂದ್ರ ಮೋದಿ

|
Google Oneindia Kannada News

ನವದೆಹಲಿ, ಡಿಸೆಂಬರ್ 28: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಪ್ರಪ್ರಥಮ ಚಾಲಕ ರಹಿತ ಮೆಟ್ರೋ ಕಾರ್ಯಾಚರಣೆಯನ್ನು ಉದ್ಘಾಟಿಸಿ, ದೆಹಲಿ ಮೆಟ್ರೋದ ಏರ್ ಪೋರ್ಟ್ ಎಕ್ಸ್ ಪ್ರೆಸ್ ಮಾರ್ಗದಲ್ಲಿ ರಾಷ್ಟ್ರೀಯ ಸಮಾನ ಸಾರಿಗೆ ಕಾರ್ಡ್ ಗೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಪ್ರಧಾನಿ 2025ರ ವೇಳೆಗೆ ದೇಶದ 25 ನಗರಗಳಲ್ಲಿ ಮೆಟ್ರೋ ಸೇವೆ ದೊರೆಯಲಿದೆ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ದೇಶದ ಮೊಟ್ಟಮೊದಲ ಚಾಲಕ ರಹಿತ ಮೆಟ್ರೋ ಉದ್ಘಾಟಿಸಿದ ಅವರು ಆನ್‌ಲೈನ್ ಮೂಲಕ ಹಸಿರು ನಿಶಾನೆ ತೋರಿಸಿದರು.

ಅಭಿವೃದ್ಧಿಗಾಗಿ ಸುಧಾರಣೆ ಅಗತ್ಯ, ಹಳೆಯ ಕಾನೂನುಗಳು ಹೊರೆಯಾಗುತ್ತಿವೆ: ಪ್ರಧಾನಿ ಮೋದಿಅಭಿವೃದ್ಧಿಗಾಗಿ ಸುಧಾರಣೆ ಅಗತ್ಯ, ಹಳೆಯ ಕಾನೂನುಗಳು ಹೊರೆಯಾಗುತ್ತಿವೆ: ಪ್ರಧಾನಿ ಮೋದಿ

ಪೂರ್ಣ ಆಟೋಮ್ಯಾಟಿಕ್ ಚಾಲಕರಹಿತ ರೈಲು ಜನಕಪುರಿ ವೆಸ್ಟ್‌ನಿಂದ ಬೊಟಾನಿಕಲ್ ಗಾರ್ಡ್‌ನವರೆಗೆ 37 ಕಿ.ಮೀ. ನೀಲಿ ಮಾರ್ಗದಲ್ಲಿ ಸಂಚರಿಸಲಿದೆ. ವಿಶ್ವದ ಶೇಕಡಾ 7ರಷ್ಟು ಮೆಟ್ರೋ ರೈಲು ಜಾಲದಲ್ಲಿ ಇಂತಹ ಚಾಲಕರಹಿತ ರೈಲು ಸೇವೆಯಿದ್ದು, ಇದೀಗ ದೆಹಲಿ ಮೆಟ್ರೋ ರೈಲು ನಿಗಮವು ಈ ಗುಂಪಿಗೆ ಸೇರಿದೆ.

Metro Service To Reach Over 25 Cities By 2025: PM Narendra Modi

''ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ದೆಹಲಿ ಮೆಟ್ರೋ ರೈಲು ಸಂಚಾರ ಆರಂಭಗೊಂಡಿತ್ತು. 2014ರವರೆಗೆ ಕೇವಲ ಐದು ನಗರಗಳಲ್ಲಿ ಇದ್ದ ಮೆಟ್ರೋ ಸೌಲಭ್ಯವು 2020ರಲ್ಲಿ 18 ನಗರಗಳಿಗೆ ತಲುಪಿದೆ. 2025ರೊಳಗೆ 25ಕ್ಕೂ ಅಧಿಕ ನಗರಗಳಿಗೆ ಮೆಟ್ರೋ ಸೇವೆಯನ್ನು ವಿಸ್ತರಿಸಲಿದ್ದೇವೆ'' ಎಂದು ಮೋದಿ ಹೇಳಿದರು.

ದೆಹಲಿ ಒಂದು ಹಳೆಯ ಪ್ರವಾಸಿ ತಾಣವಾಗಿರುವುದರಿಂದ ನಗರವನ್ನು 21ನೇ ಶತಮಾನದ ಆಕರ್ಷಣೆಯಾಗಿ ಅಭವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ದೆಹಲಿ ಅಂತಾರಾಷ್ಟ್ರೀಯ ಸಮಾವೇಶ, ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮತ್ತು ಅಂತಾರಾಷ್ಟ್ರೀಯ ವಾಣಿಜ್ಯ ಪ್ರವಾಸೋದ್ಯಮಗಳಿಗೆ ನೆಚ್ಚಿನ ತಾಣವಾಗಿದ್ದು, ರಾಜಧಾನಿಯ ದ್ವಾರಕಾ ಬಡಾವಣೆಯಲ್ಲಿ ದೇಶದ ಬೃಹತ್ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ ಎಂದರು.

ಅಂತೆಯೇ, ನೂತನ ಸಂಸತ್ ಭವನದ ಕಾಮಗಾರಿಯನ್ನು ಅತಿ ದೊಡ್ಡ ಭಾರತ್ ವಂದನಾ ಉದ್ಯಾನವನದೊಂದಿಗೆ ಪ್ರಾರಂಭಿಸಲಾಗಿದೆ. ಇದು ದೆಹಲಿಯ ಸಾವಿರಾರು ಜನರಿಗೆ ಉದ್ಯೋಗವನ್ನು ನೀಡುವುದಲ್ಲದೆ ನಗರದ ಚಿತ್ರಣವನ್ನೂ ಬದಲಾಯಿಸುತ್ತದೆ ಎಂದರು.

English summary
PM Narendra Modi said that by 2025, metro train services will be available in 25 cities across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X