ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ. 15 ರಂದು ರಾಹುಲ್ ಗಾಂಧಿ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ

|
Google Oneindia Kannada News

ನವದೆಹಹಲಿ, ಏಪ್ರಿಲ್ 12: ರಫೇಲ್ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೀಡಿದ ಹೇಳಿಕೆ ಅವರನ್ನು ಸುಪ್ರೀಂ ಕೋರ್ಟ್ ಮೆಟ್ಟಿಲನ್ನು ಹತ್ತಿಸಲಿದೆ!

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ಅವರ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯ ವಿರುದ್ಧ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾರೆ. ಈ ಕುರಿತು ಏಪ್ರಿಲ್ 15 ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.

ರಫೇಲ್ ತೀರ್ಪು: ಮತ್ತೊಮ್ಮೆ 'ಚೌಕಿದಾರ್ ಚೋರ್' ಎಂದ ರಾಹುಲ್ ಗಾಂಧಿರಫೇಲ್ ತೀರ್ಪು: ಮತ್ತೊಮ್ಮೆ 'ಚೌಕಿದಾರ್ ಚೋರ್' ಎಂದ ರಾಹುಲ್ ಗಾಂಧಿ

"ರಫೇಲ್ ವಿವಾದದ ಕುರಿತ ದಾಖಲೆಗಳನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಇಂದು ನೀಡಿದ ತೀರ್ಪಿನಿಂದ ಚೌಕಿದಾರ ಚೋರ ಎಂಬುದು ಸಾಬೀತಾಗಿದೆ. ಇದರಿಂದಾಗಿ ಮತ್ತಷ್ಟು ಭ್ರಷ್ಟಾಚಾರದ ಪ್ರಕರಣಗಳು ಹೊರಬರಲಿವೆ. ಇದು ನ್ಯಾಯದ ಗೆಲುವು. ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಇದು ಅತ್ಯಂತ ಪ್ರಮುಖ ದಿನ" ಎಂದು ರಾಹುಲ್ ಗಾಂಧಿ ಹೇಳಿದ್ದರು.

Meenakshi Lekhi filed contempt petition in SC against Rahul Gandhi

"ನೀವು ಭ್ರಷ್ಟಾಚಾರ ಮಾಡಿದ್ದೀರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನಾನು ಈಗಲೂ ಮೋದಿಯವರಿಗೆ ಸವಾಲೆಸೆಯುತ್ತೇನೆ. ನನ್ನೊಂದಿಗೆ ಚರ್ಚೆಗೆ ಬನ್ನಿ. ಪ್ರೀತಿಯಿಂದ ಚರ್ಚಿಸೋಣ. ಈ ದೇಶದ ಜನರಿಗೆ ರಫೇಲ್ ಬಗ್ಗೆ ತಿಳಿಯಬೇಕಿದೆ. ಭ್ರಷ್ಟಾಚಾರದ ಬಗ್ಗೆ ತಿಳಿಯಬೇಕಿದೆ. ಅಪನಗದೀಕರಣದ ಬಗ್ಗೆ ತಿಳಿಯಬೇಕಿದೆ" ಎಂದು ರಾಹುಲ್ ಗಾಂಧಿ ಸವಾಲೆಸೆದಿದ್ದರು.

ಜಾಮೀನಿನ ಮೇಲಿರುವ ರಾಹುಲ್‌ಗೆ ಯಾವ ಹಕ್ಕಿದೆ?: ನಿರ್ಮಲಾ ಕಿಡಿಜಾಮೀನಿನ ಮೇಲಿರುವ ರಾಹುಲ್‌ಗೆ ಯಾವ ಹಕ್ಕಿದೆ?: ನಿರ್ಮಲಾ ಕಿಡಿ

ರಫೇಲ್ ಗೆ ಸಂಬಂಧಿಸಿದ 'ಕಳುವಾದ' ದಾಖಲೆಗಳನ್ನು ಪರಾಮರ್ಶೆಗಾಗಿ ಬಳಸಿಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಬುಧವಾರ ತೀರ್ಪು ನೀಡಿತ್ತು. ಇದರಿಂದ ಸೋರಿಕೆಯಾದ ದಾಖಲೆಗಳನ್ನು ತೀರ್ಪು ಮರುಪರಿಶೀಲನೆಗೆ ಬಳಸಿಕೊಳ್ಳುವಂತೆ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಪ್ರಾಥಮಿಕ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿತ್ತು.

English summary
BJP MP Meenakshi Lekhi has filed a contempt petition against Congress president Rahul Gandhi for his controversial remark against PM Narendra Modi. Supreme Court to hear the case on April 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X