ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆನ್ಮಾರ್ಕ್‌ಗೆ ತೆರಳಲು ಕೇಜ್ರಿವಾಲ್‌ಗೆ ಅನುಮತಿ ನಿರಾಕರಿಸಿದ ಕೇಂದ್ರ

|
Google Oneindia Kannada News

ನವದೆಹಲಿ, ಅಕ್ಟೋಬರ್ 8: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಅ.9ರಿಂದ ಪ್ರಾರಂಭವಾಗಲಿರುವ ಸಿ40 ಹವಾಮಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಡೆನ್ಮಾರ್ಕ್‌ನ ಕೋಪನ್‌ಹೆಗಾನ್‌ಗೆ ತೆರಳಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ.

ಸುಪ್ರೀಂಕೋರ್ಟ್, ದೆಹಲಿ ಸಿಎಂ ಕೇಜ್ರಿವಾಲ್ ಕಿವಿಹಿಂಡಿದ್ದು ಈ ಕಾರಣಕ್ಕೆ!ಸುಪ್ರೀಂಕೋರ್ಟ್, ದೆಹಲಿ ಸಿಎಂ ಕೇಜ್ರಿವಾಲ್ ಕಿವಿಹಿಂಡಿದ್ದು ಈ ಕಾರಣಕ್ಕೆ!

ಕೇಜ್ರಿವಾಲ್ ಅವರಿಗೆ ಡೆನ್ಮಾರ್ಕ್ ಪ್ರವಾಸಕ್ಕೆ ಅನುಮತಿ ನೀಡಲು ವಿದೇಶಾಂಗ ಸಚಿವಾಲಯ ನಿರಾಕರಿಸಿದೆ. ಆದರೆ ಅನುಮತಿ ನಿರಾಕರಣೆಗೆ ಇದುವರೆಗೂ ಕಾರಣ ನೀಡಿಲ್ಲ.

ಸಂಚಾರಿ ನಿಯಮ ಉಲ್ಲಂಘನೆಗೆ ಭಾರೀ ದಂಡ: ಬೆಂಬಲಿಸಿದ ಕೇಜ್ರಿವಾಲ್ಸಂಚಾರಿ ನಿಯಮ ಉಲ್ಲಂಘನೆಗೆ ಭಾರೀ ದಂಡ: ಬೆಂಬಲಿಸಿದ ಕೇಜ್ರಿವಾಲ್

ಕೇಜ್ರಿವಾಲ್ ಅವರು ಸಮ್ಮೇಳನದಲ್ಲಿ ಇಂಗಾಲದ ವಿಸರ್ಜನೆ ಕುರಿತಾದ ಚರ್ಚೆಯಲ್ಲಿ ಪಾಲ್ಗೊಂಡು ಪ್ರಮುಖ ಭಾಷಣ ಮಾಡಬೇಕಿತ್ತು. ಈಗ ಅವರ ಪ್ರವಾಸಕ್ಕೆ ಸಚಿವಾಲಯ ಅನುಮತಿ ನೀಡದೆ ಇರುವುದರಿಂದ ಅ. 9-12ರವರೆಗೆ ನಡೆಯಲಿರುವ ಸಮ್ಮೇಳನದಲ್ಲಿ ಅವರು ಪಾಲ್ಗೊಳ್ಳುವುದಿಲ್ಲ.

MEA Denies Permission Arvind Kejriwal Attend C40 Climate Summit Denmark

ಸಮ್ಮೇಳನದಲ್ಲಿ ಕೇಜ್ರಿವಾಲ್ ಅವರು ನ್ಯೂಯಾರ್ಕ್, ಲಂಡನ್, ಲಾಸ್ ಏಂಜಲಿಸ್, ಬರ್ಲಿನ್ ನಗರಗಳ ಮೇಯರ್‌ಗಳೊಂದಿಗೆ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಚರ್ಚಿಸುವ ಸಾಧ್ಯತೆ ಇತ್ತು. ಜತೆಗೆ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಪ್ರಸ್ತಾಪಿಸುವ ನಿರೀಕ್ಷೆಯಿತ್ತು.

ಕೇಜ್ರಿವಾಲರಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ: ಮಾಜಿ ಸ್ಪೀಕರ್ ರಮೇಶ್ ಶ್ಲಾಘನೆಕೇಜ್ರಿವಾಲರಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ: ಮಾಜಿ ಸ್ಪೀಕರ್ ರಮೇಶ್ ಶ್ಲಾಘನೆ

ಶಿಷ್ಟಾಚಾರದಂತೆ ಕೇಜ್ರಿವಾಲ್ ಅವರು ವಿದೇಶಾಂಗ ಸಚಿವಾಲಯದಿಂದ ಅನುಮತಿ ಕೋರಿದ್ದರು.

English summary
Central government has denied permission to Delhi CM Arvind Kejriwal to participate in C40 clamate summit in Denmark.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X