• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲೈಂಗಿಕ ಕಿರುಕುಳ ಆರೋಪ : ರಾಷ್ಟ್ರೀಯ ದಿನಪತ್ರಿಕೆ ಸಂಪಾದಕ ರಾಜೀನಾಮೆ

|

ನವದೆಹಲಿ, ಅಕ್ಟೋಬರ್ 08: ಪ್ರಮುಖ ರಾಷ್ಟ್ರೀಯ ದೈನಿಕ ಹಿಂದೂಸ್ತಾನ್ ಟೈಮ್ಸ್ ನ ರಾಜಕೀಯ ವಿಭಾಗದ ಸಂಪಾದಕ, ಮುಖ್ಯ ಬ್ಯೂರೋ ಪ್ರಶಾಂತ್ ಝಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಶಾಂತ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿತ್ತು.

ಮಾಜಿ ಉದ್ಯೋಗಿಯೊಬ್ಬರು ತಮ್ಮಿಬ್ಬರ ನಡುವೆ ನಡೆದ ವಾಟ್ಸಾಪ್ ಸಂಭಾಷಣೆಗಳ ಸ್ಕ್ರೀನ್ ಶಾಟ್ ಗಳನ್ನು ಟ್ವೀಟ್ ಮಾಡಿದ್ದರು. ಟೈಮ್ಸ್ ಆಫ್ ಇಂಡಿಯಾದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಪ್ರಕರಣದ ನಂತರ ಈ ಪ್ರಕರಣ ಬೆಳಕಿಗೆ ಬಂದಿತ್ತು.

ಲೈಂಗಿಕ ದೌರ್ಜನ್ಯದ ದೂರು ನೀಡುವುದಕ್ಕೆ ಸಮಯದ ಮಿತಿಯಿಲ್ಲ: ಮನೇಕಾ ಗಾಂಧಿ

ಆರೋಪ ಕೇಳಿ ಬಂದ ನಂತರ ಪ್ರಶಾಂತ್ ಅವರನ್ನು ಪ್ರಮುಖ ಹುದ್ದೆಯಿಂದ ಕೆಳಗಿಳಿಸಿ, ಸಾಮಾನ್ಯ ವರದಿಗಾರನ ಸ್ಥಾನ ನೀಡಲಾಗಿದೆ. ಸುಕುಮಾರ್ ಅವರು ಸದ್ಯ ಎಡಿಟರ್ ಇನ್ ಛೀಫ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಹೇಳಿದೆ.

'How The BJP Wins' and 'Battles of The New Republic: A Contemporary History of Nepal'. ಎಂಬ ಕೃತಿಗಳನ್ನು ಕೂಡಾ ಪ್ರಶಾಂತ್ ರಚಿಸಿದ್ದಾರೆ.

2017ರಲ್ಲಿ ಸಂತ್ರಸ್ತ ಪತ್ರಕರ್ತೆ ಹಾಗೂ ಪ್ರಶಾಂತ್ ನಡುವೆ ವಾಟ್ಸಾಪ್ ಚಾಟ್ ನಲ್ಲಿ ನಡೆದ ಸಂಭಾಷಣೆಗಳ ಸ್ಕ್ರೀನ್ ಶಾಟ್ ಟ್ವೀಟ್ ಮಾಡಲಾಗಿದೆ. ನಾನು ಈ ಸಂಭಾಷಣೆ ನಡೆಸಿದಾಗ ಹಿಂದೂಸ್ತಾನ್ ಟೈಮ್ಸ್ ನ ಉದ್ಯೋಗಿಯಾಗಿರಲಿಲ್ಲ. ಹಾಗಾಗಿ ಇಂಟರ್ನಲ್ ಕಂಪ್ಲೈಟ್ಸ್ ಕಮಿಟಿ (ಲೈಂಗಿಕ ಕಿರುಕುಳ ಪ್ರಕರಣಗಳನ್ನು ವಿಚಾರಣೆ ನಡೆಸುವ ಆಂತರಿಕ ಸಮಿತಿ) ಗೆ ದೂರು ಸಲ್ಲಿಸಿರಲಿಲ್ಲ ಎಂದಿದ್ದಾರೆ.

ನಾನಾ ಪಾಟೇಕರ್, ಗಣೇಶ್ ವಿರುದ್ಧ ದೂರು ನೀಡಿದ ತನುಶ್ರೀ ದತ್ತಾ

ಇನ್ನೊಂದೆಡೆ, ಎಲ್ಲರನ್ನು ಹಾಸ್ಯಮಾಡುತ್ತಿದ್ದ ಅಲ್ ಇಂಡಿಯಾ ಬ್ಯಾಕ್ ಚೊಡ್ ಚಾನೆಲ್ ನವರು ತಮ್ಮ ತಂಡದಿಂದ ಸ್ಥಾಪಕ ಸದಸ್ಯ ತನ್ಮಯ್ ಭಟ್ ಹಾಗೂ ಗುರ್ ಸಿಮ್ರಾನ್ ಖಂಬಾ ಅವರು ಹೊರ ನಡೆದಿದ್ದಾರೆ ಎಂದು ಪ್ರಕಟಿಸಿದೆ.

ಮಾಧ್ಯಮ ಲೋಕದಲ್ಲಿ ತಲ್ಲಣ: ಹೈದರಾಬಾದಿನ ಟೈಮ್ಸ್ ಆಫ್ ಇಂಡಿಯಾ ಎಡಿಟರ್ ಕೆಆರ್ ಶ್ರೀನಿವಾಸನ್ ವಿರುದ್ಧ ಪತ್ರಕರ್ತೆ ಸಂಧ್ಯಾ ಮೆನನ್ ಏಳು ಮಂದಿ ಮಹಿಳೆಯರು ಆರೋಪಿಸಿದ್ದಾರೆ.

ಹೆಸರಾಂತ ಲೇಖಕ ಚೇತನ್ ಭಗತ್ ತಪ್ಪಿಗೆ ಕ್ಷಮೆ ಕೇಳಿದರೂ ಚರ್ಚೆ ನಿಂತಿಲ್ಲ

ನಾನಾ ಪಾಟೇಕರ್, ಚಿತ್ರಕರ್ಮಿ ವಿಕಾಸ್ ಬೆಹ್ಲ್, ಲೇಖಕ ಚೇತನ್ ಭಗತ್, ಕಾಮಿಕ್ ಉತ್ಸವ್ ಚಕ್ರವರ್ತಿ, ನಟ ರಜತ್ ಕಪೂರ್ ಅವರಿಗೆ #metoo ಅಭಿಯಾನದ ಬಿಸಿ ತಟ್ಟಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prashant Jha stepped down as the Chief of Bureau and Political Editor of national daily Hindustan Times with immediate effect following allegations of sexual misconduct by a former employee of the organisation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more