ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಮಹಾನಗರ ಪಾಲಿಕೆ ಉಪ ಚುನಾವಣೆಯಲ್ಲಿ ಎಎಪಿಗೆ ಗೆಲುವು

|
Google Oneindia Kannada News

ನವದೆಹಲಿ, ಮಾರ್ಚ್ 03: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ತನ್ನ ಪ್ರಾಬಲ್ಯ ಮುಂದುವರೆಸಿದೆ.

ಬುಧವಾರ ಪ್ರಕಟವಾದ ಐದು ವಾರ್ಡ್‌ಗಳ ಫಲಿತಾಂಶದಲ್ಲಿ, ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ಐದು ವಾರ್ಡ್‌ಗಳಲ್ಲಿ ಆಮ್ ಆದ್ಮಿ ಪಕ್ಷದ ನಾಲ್ವರು ಅಭ್ಯರ್ಥಿಗಳು ಗೆದ್ದಿದ್ದರೆ, ಕಾಂಗ್ರೆಸ್‌ನಿಂದ ಓರ್ವ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಈ ಹಿಂದೆ ಎಎಪಿ ನಾಲ್ಕು ಹಾಗೂ ಬಿಜೆಪಿ ಒಂದು ಸ್ಥಾನವನ್ನು ಹೊಂದಿತ್ತು, ಫಲಿತಾಂಶದ ಬಳಿಕ ದೆಹಲಿಯ ಆಪ್ ಕಾರ್ಯಕರ್ತರು, 'ಹೋಗಯಾ ಕಾಂ ಜೈ ಶ್ರೀರಾಮ್' ಎಂದು ಘೋಷಣೆ ಕೂಗುತ್ತಿದ್ದಾರೆ.

ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ರವಾನಿಸುತ್ತಿದ್ದಾರೆ, ದೆಹಲಿಯ ರೋಹಿಣಿ-ಸಿ, ತ್ರಿಲೋಕ್‌ಪುರಿ, ಕಲ್ಯಾಣಪುರಿ, ಶಾಲಿಮಾರ್ ಬಾಗ್ ಹಾಗೂ ಚೌಹಾಣ್ ಬಂಗೇರ್ ನಲ್ಲಿ ವಾರ್ಡ್‌ಗೆ ಉಪ ಚುನಾವಣೆ ನಡೆದಿತ್ತು.

MCD Bypolls: AAP Wins In 4 Wards, Congress Secures Chauhan Banger

ಈ ಚುನಾವಣಾ ಫಲಿತಾಂಶವು ಮುಂದಿನ ವರ್ಷ ದೆಹಲಿಯಲ್ಲಿ ನಡೆಯಲಿರುವ, ಮಹಾನಗರ ಪಾಲಿಕೆ ಚುನಾವಣೆಯ ದಿಕ್ಸೂಚಿ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೊಡಿಯಾ ಹೇಳಿದ್ದಾರೆ.

ಮುಂದಿನ ಬಾರಿ ದೆಹಲಿಯಲ್ಲಿ ಬಿಜೆಪಿ ವಿಳಾಸವಿಲ್ಲದಂತೆ ಆಗುತ್ತದೆ. 2017ರಲ್ಲಿ ನಡೆದಿದ್ದ ಚುನಾವಣೆಯಲ್ಲಿ 272 ಕ್ಷೇತ್ರಗಳ ಪೈಕಿ ಬಿಜೆಪಿ 184 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಸತತ ಎರಡು ಬಾರಿ ದೆಹಲಿ ವಿಧಾನಸಭೆಯ ಚುನಾವಣೆಯಲ್ಲಿ ಗೆಲುವುದು ಸಾಧಿಸಿದ್ದರೂ ಎಎಪಿಗೆ ಮಹಾನಗರ ಪಾಲಿಕೆ ಗಗನ ಕುಸುಮವಾಗಿದೆ.

English summary
The ruling Aam Aadmi Party bagged four seats in Municipal Corporations of Delhi (MCD) bypolls on Tuesday. Following the sweeping victory, the AAP convener and Delhi chief minister, Arvind Kejriwal took to Twitter congratulate on the win.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X