ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಗೆ ಸ್ಪರ್ಧಿಸದಿದ್ದರೇನಂತೆ, ಮಾಯಾವತಿ ಪ್ರಧಾನಿಯಾಗಬಹುದು!

|
Google Oneindia Kannada News

ನವದೆಹಲಿ, ಮಾರ್ಚ್ 21: 'ಮಾಯಾವತಿ ಅವರು ಪ್ರಧಾನಿಯಾಗಬೇಕು' ಎಂದು ಕನಸು ಕಾಣುತ್ತಿದ್ದ ಬಹುಜನ ಸಮಾಜ ಪಕ್ಷದ ಅವರ ಹಲವು ಬೆಂಬಲಿಗರಿಗೆ ಬುಧವಾರ ಭ್ರಮನಿರಸನವಾಗಿತ್ತು. ಯಾಕಂದ್ರೆ 'ತಾವು ಚುನಾವಣೆಗೆ ಸ್ಪರ್ಧಿಸೋಲ್ಲ, ಬದಲಾಗಿ ಪಕ್ಷದ ಪ್ರಚಾರದಕ್ಕೇ ಹೆಚ್ಚಿನ ಒತ್ತು ನೀಡುತ್ತೇನೆ' ಎಂದು ಮಾಯಾವತಿ ಅಚ್ಚರಿಯ ಹೇಳಿಕೆ ನೀಡಿಬಿಟ್ಟರು.

ಆದರೆ ಬೆಂಬಲಿಗರ ಕಾಳಜಿಯನ್ನು ಅರಿತುಕೊಂಡ ಮಾಯಾವತಿ, ತಾವು ಚುನಾವಣೆಗೆ ಸ್ಪರ್ಧಿಸದಿದ್ದರೂ, ಪ್ರಧಾನಿಯಾಗುವುದಕ್ಕೆ ಸಾಧ್ಯ ಎಂದಿದ್ದಾರೆ.

ಲೋಕಸಭಾ ಚುನಾವಣೆ ಸ್ಪರ್ಧಿಸೋಲ್ಲ, ಮಾಯಾವತಿ ಅಚ್ಚರಿಯ ಹೇಳಿಕೆ!ಲೋಕಸಭಾ ಚುನಾವಣೆ ಸ್ಪರ್ಧಿಸೋಲ್ಲ, ಮಾಯಾವತಿ ಅಚ್ಚರಿಯ ಹೇಳಿಕೆ!

ಅಕಸ್ಮಾತ್ ಮಹಾಘಟಬಂಧನ ಅಸ್ತಿತ್ವಕ್ಕೆ ಬಂದರೆ ಮಾಯಾವತಿ ಅವರಿಗೂ ಪ್ರಧಾನಿಯಾಗುವ ಅವಕಾಶ ಸಿಗಬಹುದು. ಮಹಾಘಟಬಂಧನಕ್ಕೆ ಬಿಎಸ್ಪಿ ಬೆಂಬಲ ನೀಡಿದ್ದೇ ಆದಲ್ಲಿ, ಮಾಯಾವತಿ ಅವರ ಬೇಡಿಕೆಯೂ ಅದೇ ಆಗಿರುತ್ತದೆ. ಆದರೆ ಚುನಾವಣೆಗೇ ಸ್ಪರ್ಧಿಸದ ಮಾಯಾವತಿ ಪ್ರಧಾನಿಯಾಗೋಕೆ ಸಾಧ್ಯವೇ? ಸಾಧ್ಯವಿದೆ, ಹೇಗೆ ಎಂಬುದನ್ನು ಅವರೇ ಹೇಳಿದ್ದಾರೆ, ಕೇಳಿ.

ಪ್ರಧಾನಿಯಾದ ಮೇಲೆ ಚುನಾವಣೆಗೆ ಸ್ಪರ್ಧೆ!

ಪ್ರಧಾನಿಯಾದ ಮೇಲೆ ಚುನಾವಣೆಗೆ ಸ್ಪರ್ಧೆ!

"ನಾನು 1995 ರಲ್ಲಿ ಮೊದಲ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದಾಗ ಉತ್ತರ ಪ್ರದೇಶ ವಿಧಾನಸಭೆಗಾಗಲೀ, ವಿಧಾನಪರಿಷತ್ತಿಗಾಗಲೀ ಸದಸ್ಯೆಯಾಗಿರಲಿಲ್ಲ. ಆದರೆ ಮುಖ್ಯಮಂತ್ರಿಯಾಗಿ ಸರ್ವಾನುಮತದಿಂದ ಆಯ್ಕೆಯಾದ ನಂತರ ಆರು ತಿಂಗಳೊಳಗೆ ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯರಾದರೆ ಸಾಕು ಎಂಬ ನಿಯಮವಿದೆ. ಅಂತೆಯೇ ಪ್ರಧಾನಿಯಾಗುವುದಕ್ಕೂ ಆನು ಈಗಲೇ ಚುನಾವಣೆಗೆ ಸ್ಪರ್ಧಿಸುವ ಅಗತ್ಯವೇನಿಲ್ಲ. ಪ್ರಧಾನಿಯಾಗಿ ಆಯ್ಕೆಯಾದರೆ, ನಂತರ ರಾಜ್ಯಸಭೆ ಅಥವಾ ಲೋಕಸಭೆಯ ಸದಸ್ಯರಾಗಿ ಆರು ತಿಂಗಳೊಳಗೆ ಆಯ್ಕೆಯಾಗಬೇಕು ಅಷ್ಟೆ ಎಂದು ಮಾಯಾವತಿ ಹೇಳಿದರು"

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಮತ್ತೆ ಮಾಯಾವತಿ ಮಂಗಳಾರತಿಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಮತ್ತೆ ಮಾಯಾವತಿ ಮಂಗಳಾರತಿ

ಕೊನೆಯ ಕ್ಷಣದ ಬದಲಾವಣೆ ಹೊರತುಪಡಿಸಿ...

ಕೊನೆಯ ಕ್ಷಣದ ಬದಲಾವಣೆ ಹೊರತುಪಡಿಸಿ...

ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವಾಗ ಒಂದು ಸೀಟನ್ನು ಬಿಟ್ಟು ಸೀಟು ಹಂಚಿಕೆ ಮಾಡುತ್ತೇನೆ. ಕೊನೆಯ ಕ್ಷಣದಲ್ಲಿ ಚುನಾವಣೆಗೆ ಸ್ಪರ್ಧಸುವ ಅಗತ್ಯವಿದ್ದರೆ ಸ್ಪರ್ಧಿಸುತ್ತೇನೆ. ಆದರೆ ನನಗೆ ಪಕ್ಷವನ್ನು ಗೆಲ್ಲಿಸುವ ಗುರಿಯಿದೆ. ನಾನು ಚುನಾವಣೆಗೆ ಸ್ಪರ್ಧಿಸಿದರೆ ನಾನು ಕಣಕ್ಕಿಳಿಯುವ ಕ್ಷೇತ್ರವನ್ನು ಬಿಟ್ಟು ಬೇರೆಡೆಗೆ ಗಮನ ಹರಿಸುವುದಕ್ಕೆ ಸಾಧ್ಯವಾಗದೆ ಇರಬಹುದು. ಆದ್ದರಿಂದ ಈ ನಿರ್ಧಾರ ಎಂದು ಮಾಯಾವತಿ ಹೇಳಿದ್ದಾರೆ.

ಅಖಿಲೇಶ್, ಮಾಯಾವತಿ ಲೋಕ ಚುನಾವಣೆಗೆ ಸ್ಪರ್ಧಿಸಲ್ಲ, ಏಕೆ ಗೊತ್ತೆ?ಅಖಿಲೇಶ್, ಮಾಯಾವತಿ ಲೋಕ ಚುನಾವಣೆಗೆ ಸ್ಪರ್ಧಿಸಲ್ಲ, ಏಕೆ ಗೊತ್ತೆ?

ಅಖಿಲೇಶ್ ಸ್ಪರ್ಧೆಯೂ ಇಲ್ಲ!

ಅಖಿಲೇಶ್ ಸ್ಪರ್ಧೆಯೂ ಇಲ್ಲ!

ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಎಸ್ಪಿ ನಾಯಕ ಅಖಿಲೇಶ್ ಯಾದವ್ ಅವರೂ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇಲ್ಲ. ಅವರು ಸಹ ಪಕ್ಷದ ಗೆಲುವಿಗೆ ಶ್ರಮಿಸುವ ಅಗತ್ಯ ಇರುವುದರಿಂದ ತಮ್ಮನ್ನು ತಾವು ಯಾವುದೋ ಒಂದು ಕ್ಷೇತ್ರಕ್ಕೆ ಸೀಮಿತಗೊಳಿಸಿಕೊಳ್ಳಲು ಸಿದ್ಧರಿಲ್ಲ.

ಬಿಜೆಪಿಗೆ ಲಾಭವಾದೀತು!

ಬಿಜೆಪಿಗೆ ಲಾಭವಾದೀತು!

ಕಾಂಗ್ರೆಸ್ ಅನ್ನು ಹೊರಗಿಟ್ಟು ಎಸ್ಪಿ ಬಿಎಸ್ಪಿ ಮೈತ್ರಿ ಮಾಡಿಕೊಂಡಿರುವುದು ಬಿಜೆಪಿಗೆ ಲಾಭವಾಗುವ ಸಾಧ್ಯತೆ ಹೆಚ್ಚು. ಆದರೆ ಫಲಿತಾಂಶದ ನಂತರ ಬಹುಮತಕ್ಕೆ ಕೆಲವೇ ಸಂಖ್ಯೆಯ ಅಗತ್ಯ ಬಂದರೆ, ವಿಪಕ್ಷಗಳು ಆಗ ಮೈತ್ರಿ ಮಾಡಿಕೊಂಡರೆ ಅಚ್ಚರಿಯಿಲ್ಲ.

English summary
Even though Mayawati is not contesting Lok Sabha elections 2019, she can become Prime Miister. Here she explains how it can be possible.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X