ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಸೂದ್ ಅಜರ್ ಜಾಗತಿಕ ಉಗ್ರ ಪಟ್ಟಕ್ಕೆ ಪಾಕ್ ಪ್ರತಿಕ್ರಿಯೆ ಏನು?

|
Google Oneindia Kannada News

ನವದೆಹಲಿ, ಮೇ 2: ಜೈಷ್-ಎ-ಮೊಹಮ್ಮದ್ ಉಗ್ರ ಮಸೂದ್ ಅಜರ್‌ಗೆ ವಿಶ್ವಸಂಸ್ಥೆಯು ಜಾಗತಿಕ ಉಗ್ರ ಎಂಬ ಪಟ್ಟ ನೀಡುತ್ತಿದ್ದಂತೆ ಪಾಕಿಸ್ತಾನ ಪೇಚಿಗೆ ಸಿಲುಕಿದೆ.

ಜೈಷ್‌-ಎ-ಮೊಹಮ್ಮದ್ ಮಸೂದ್ ಅಜರ್ ಹಾಗೂ ಇನ್ನಿತರೆ ಉಗ್ರ ಸಂಘಟನೆಗಳನ್ನು ರಕ್ಷಿಸಿಕೊಳ್ಳುತ್ತಿದ್ದ ಪಾಕಿಸ್ತಾನಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂಬುದೇ ತಿಳಿಯದಾಗಿದೆ.

ಲೋಕಸಭಾ ಚುನಾವಣೆ ವಿಶೇಷ ಪುಟ

ಚೀನಾ ಕೂಡ ಪಾಕಿಸ್ತಾನದ ಜೊತೆ ನಿಲ್ಲದ ಕಾರಣದಿಂದ ಉಗ್ರ ಮಸೂದ್ ಅಜರ್ ಬಗ್ಗೆ ಪಾಕಿಸ್ತಾನ ತನ್ನ ಹೇಳಿಕೆಯನ್ನು ಬದಲಿಸಿ ವಿಶ್ವಸಂಸ್ಥೆಯ ನಿರ್ಬಂಧದ ಅನುಗುಣವಾಗಿ ಯಾವ ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳಲಿದೆ ಎಂದಷ್ಟೇ ಹೇಳಿಕೊಂಡಿದೆ.

ಭಾರತಕ್ಕೆ ಜಯ, ಪಾಕಿಸ್ತಾನಕ್ಕೆ ಮುಖಭಂಗ: ಮಸೂದ್ ಅಜರ್ ಜಾಗತಿಕ ಉಗ್ರ ಭಾರತಕ್ಕೆ ಜಯ, ಪಾಕಿಸ್ತಾನಕ್ಕೆ ಮುಖಭಂಗ: ಮಸೂದ್ ಅಜರ್ ಜಾಗತಿಕ ಉಗ್ರ

ಪಾಕಿಸ್ತಾನದ ವಿದೇಶಾಂಗ ಇಲಾಖೆ ವಕ್ತಾರ ಪ್ರತಿಕ್ರಿಯೆ ಪ್ರಕಾರ ವಿಶ್ವಸಂಸ್ಥೆಯ ನಿರ್ಧಾರದಂತೆ ನಡೆಸುಕೊಳ್ಳಲಾಗುವುದು, ಪಾಕಿಸ್ತಾನ ಸರ್ಕಾರವು ಭಯೋತ್ಪಾದನೆ ಹಾಗೂ ಉಗ್ರ ಸಂಘಟನೆಗಳ ವಿರುದ್ಧ ಮೊದಲಿನಂದಲೂ ಕ್ರಮ ತೆಗೆದುಕೊಂಡಿದೆ.

Masood as global terrorist How under-pressure Pakistan reacted

ಹೊಸ ಸರ್ಕಾರದ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಯಾವುದೇ ಉಗ್ರ ಸಂಘಟನೆಗಳ ಚಟುವಟಿಕೆಗಳಿಗೆ ಅವಕಾಶವೇ ಇಲ್ಲ ಎಂಬ ಹಳೆಯ ಹೇಳಿಕೆಯನ್ನು ಮುಂದುವರೆಸಿದ್ದಾರೆ. ಪುಲ್ವಾಮಾ ದಾಳಿ ಬಳಿಕವೂ ಇದೇ ರೀತಿ ಹೇಳಿಕೆ ನೀಡಿ ಜೈಷ್ ಸಂಘಟನೆ ಅಸ್ತಿತ್ವ ಹಾಗೂ ಉಗ್ರ ಮಸೂದ್ ಅಜರ್‌ನ ಚಟುವಟಿಕೆಗಳ ಬಗ್ಗೆ ಇದೇ ರೀತಿಯ ಸುಳ್ಳುಗಳನ್ನು ಪಾಕಿಸ್ತಾನ ಹೇಳಿತ್ತು.

ಮಸೂದ್ ಜಾಗತಿಕ ಉಗ್ರ: ಭಾರತದ ಗೆಲುವು ಎಂದ ಪ್ರಧಾನಿ ಮೋದಿಮಸೂದ್ ಜಾಗತಿಕ ಉಗ್ರ: ಭಾರತದ ಗೆಲುವು ಎಂದ ಪ್ರಧಾನಿ ಮೋದಿ

ಜೈಷ್ ಎ ಮೊಹಮ್ಮದ್ ಸಂಘಟನೆ ಶಿಕ್ಷಣ ಸಂಸ್ಥೆಗಳನ್ನು ಮಾತ್ರ ನಡೆಸುತ್ತದೆ ಎಂದು ಜಾಗತಿಕ ಮಾಧ್ಯಮಗಳಿಗೆ ತಿಳಿಸುವ ಪ್ರಯತ್ನವನ್ನೂ ಮಾಡಿತ್ತು. ಪಾಕಿಸ್ತಾನಿ ಮೂಲದ ಉಗ್ರ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಘೋಷಿಸಿದೆ.

ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ನಾಯಕ ಮಸೂದ್ ಅಜರ್, ಫೆಬ್ರವರಿ 14 ರಂದು ನಡೆದ ಪುಲ್ವಾಮಾ ದಾಳಿಯ ಸಂಚುಕೋರನಾಗಿದ್ದ ಎಂಬುದು ತಿಳಿಯುತ್ತಿದ್ದಂತೆಯೇ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಿ, ಆತನನ್ನು ಜಾಗತಿಕ ಉಗ್ರ ಎಂದು ಘೋಷಿಸುವಂತೆ ವಿಶ್ವಸಂಸ್ಥೆಗೆ ಮನವಿ ಮಾಡಿತ್ತು.

English summary
India has always maintained - with credible proof - that Masood Azhar is a notorious terrorist guilty of targeting innocent lives by masterminding dastardly attacks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X