ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯರಾತ್ರಿ ಮುಸುಕುಧಾರಿಗಳಿಂದ ಪತ್ರಕರ್ತೆ ಮೇಲೆ ಗುಂಡಿನ ದಾಳಿ

|
Google Oneindia Kannada News

ನವದೆಹಲಿ, ಜೂನ್ 23: ಮುಖವಾಡ ಧರಿಸಿದ ದುಷ್ಕರ್ಮಿಗಳು ಪತ್ರೆಕರ್ತೆಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಪತ್ರಕರ್ತೆ ಮೈಥಿಲಿ ಚಾಂದೋಲಾ ಎಂಬುವವರು ರಾತ್ರಿ 12.30ರ ಸುಮಾರಿಗೆ ಕಾರು ಡ್ರೈವ್ ಮಾಡಿಕೊಂಡು ಹೋಗುತ್ತಿರುವಾಗ ವಸುಂಧರಾ ಪ್ರದೇಶದಲ್ಲಿ ಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ.

ಶಿರಸಿಯಲ್ಲಿ ಮಗನ ಮೇಲೆ ಗುಂಡು ಹಾರಿಸಿದ ಕುಡುಕ ತಂದೆ

ಸದ್ಯ ದೆಹಲಿಯ ಧರ್ಮಶಾಲಾ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

Masked men fire shots woman journalist

ಪತ್ರಕರ್ತೆ ನೊಯ್ಡಾ ನಿವಾಸಿಯಾಗಿದ್ದಾರೆ. ಹಲ್ಲೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ತಮ್ಮ ಕಾರನ್ನು ಸ್ವತಃ ಡ್ರೈವ್​ ಮಾಡಿಕೊಂಡು ಹೋಗುತ್ತಿದ್ದಾಗ ಮಾರುತಿ ಸ್ವಿಫ್ಟ್​ನಲ್ಲಿ ಬಂದ ಮುಸುಕುಧಾರಿಗಳು ತನ್ನ ಮೇಲೆ ಎರಡು ಗುಂಡುಗಳನ್ನು ಹಾರಿಸಿದರು.

ಕಾರಿನ ಮುಂಭಾಗದಿಂದ ಬಂದ ಒಂದು ಗುಂಡು ಗಾಜನ್ನು ಒಡೆದಿದೆ. ಇನ್ನೊಂದು ಗುಂಡು ತನ್ನ ಕೈಗೆ ತಗುಲಿದೆ. ನಂತರ ಮುಸುಕುಧಾರಿ ಅಪರಿಚಿತರು ಅಲ್ಲಿಂದ ಹೊರಡುವಾಗ ತನ್ನ ಕಾರಿನ ಮೇಲೆ ಮೊಟ್ಟೆಗಳನ್ನು ಎಸೆದಿದ್ದಾರೆ ಎಂದು ತಿಳಿಸಿದ್ದಾರೆ.

ಇದು ಕೌಟುಂಬಿಕ ವಿವಾದಕ್ಕೆ ಸಂಬಂಧಪಟ್ಟಂತೆ ಆದ ಹಲ್ಲೆ ಎಂದು ಪ್ರಾಥಮಿಕ ತನಿಖೆಯಲ್ಲೇ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

English summary
Masked men fire shots woman journalist in Delhi's Vasundhara area. he woman journalist Mitali Chandola, who is working with a media organisation in Noida.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X