ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2016ರ ಆರಂಭಕ್ಕೆ ಮಾರುತಿ ಸುಜುಕಿ ಕಾರಿನ ಬೆಲೆ ಏರಿಕೆ ಬಿಸಿ!

By Mahesh
|
Google Oneindia Kannada News

ಬೆಂಗಳೂರು, ಡಿ.10: ಭಾರತದ ಅತಿದೊಡ್ಡ ಕಾರು ನಿರ್ಮಾಣ ಸಂಸ್ಥೆ ಮಾರುತಿ ಸುಜುಕಿ ಕೂಡಾ ಬೆಲೆ ಸಮರಕ್ಕಿಳಿದಿದೆ. ಜನವರಿ 2016ರಿಂದ ಎಲ್ಲಾ ಮಾದರಿಯ ಕಾರಿನ ಬೆಲೆಯನ್ನು ಏರಿಕೆ ಮಾಡುತ್ತಿರುವುದಾಗಿ ಶುಕ್ರವಾರ ಮಾರುತಿ ಸುಜುಕಿ ಘೋಷಿಸಿದೆ.

ವರ್ಷಾರಂಭಕ್ಕೆ ಮಾರುತಿ ಸುಜುಕಿ ಕಾರಿನ ಬೆಲೆ ಸುಮಾರು 20,000 ರು ತನಕ ಏರಿಕೆಯಾಗಲಿದೆ. ಬೆಲೆ ಏರಿಕೆ ಮಾಡಲು ರುಪಾಯಿ vs ಡಾಲರ್ ಸಮರವೂ ಕಾರಣ ಎನ್ನಲಾಗಿದೆ. ಡಾಲರ್ ಎದುರು ರುಪಾಯಿ ಚೇತರಿಕೆ ಕಾಣದಿರುವುದರಿಂದ ಈ ರೀತಿ ನಿರ್ಧಾರ ಅನಿವಾರ್ಯ ಎಂದು ಮಾರುತಿ ಸುಜುಕಿ ಇಂಡಿಯಾ ವಕ್ತಾರರು ಹೇಳಿದ್ದಾರೆ.

Maruti Suzuki to hike prices across models by up to Rs 20,000 from January

ಎಂಟ್ರಿ ಲೆವೆಲ್ ಪುಟ್ಟ ಕಾರು ಆಲ್ಟೋ 800 ನಿಂದ ಎಸ್ ಕ್ರಾಸ್ ಕಾರಿನ ತನಕ ವೈವಿಧ್ಯಮಯ ಕಾರುಗಳನ್ನು ಮಾರುತಿ ಸುಜುಕಿ ಮಾರಾಟ ಮಾಡುತ್ತಿದೆ. ಬೆಲೆ ದರ 2.53 ಲಕ್ಷ ರು ನಿಂದ 13.74 ಲಕ್ಷ ರು ರೇಂಜ್ ನಷ್ಟಿದೆ.

ಬುಧವಾರದಂದು ಹ್ಯುಂಡೈ ಮೋಟಾರ್ಸ್ ಇಂಡಿಯಾ ತನ್ನ ಎಲ್ಲಾ ಕಾರು ಮಾದರಿಯನ್ನು ಮುಂದಿನ ತಿಂಗಳಿನಿಂದ 30,000 ರು ನಂತೆ ಏರಿಕೆ ಮಾಡುವುದಾಗಿ ಪ್ರಕಟಿಸಿತ್ತು.

ಈಗಾಗಲೇ ಟೋಯೊಟಾ, ಮರ್ಸಿಡೀಜ್ ಬೆಂಜ್, ಬಿಎಂಡಬ್ಲ್ಯೂ ಕೂಡಾ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿವೆ. ಒಟ್ಟಾರೆ ಹೊಸ ವರ್ಷಕ್ಕೆ ಗ್ರಾಹಕರ ಜೇಬಿಗೆ ಭರ್ಜರಿ ಕತ್ತರಿ ಬೀಳಲಿದೆ. (ಪಿಟಿಐ)

English summary
Country's largest carmaker Maruti Suzuki India will hike prices of its vehicles across models by up to Rs 20,000 from January to offset impact of rising costs and weakening of rupee against dollar, joining rivals in making such a move.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X