ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಜನಪ್ರಿಯ ನಾಯಕರ ಅಪ್ಪುಗೆ, ಫೇಸ್ಬುಕ್ ಜನಕನ ಮೆಚ್ಚುಗೆ

By Mahesh
|
Google Oneindia Kannada News

ನವದೆಹಲಿ, ಜ.26: ಭಾರತ ಪ್ರವಾಸ ನಿರತ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಅವರ ಪತ್ನಿ ಮಿಶೆಲ್ ಅವರು ಪಾಲಂ ವಿಮಾನ ನಿಲ್ದಾಣಕ್ಕೆ ಕಾಲಿಟ್ಟಾಗ ಸಿಕ್ಕ ಸ್ವಾಗತ ಐತಿಹಾಸಿಕ ದಾಖಲೆ ಬರೆದಿದೆ.

ಶಿಷ್ಟಾಚಾರ ಮರೆತ ಪ್ರಧಾನಿ ನರೇಂದ್ರ ಮೋದಿ ಅವರು ಒಬಾಮಾರನ್ನು ಆಲಿಂಗನ ಮಾಡಿದ್ದು ಫೇಸ್ ಬುಕ್ ಜನಕ ಮಾರ್ಕ್ ಮೆಚ್ಚುಗೆಗೂ ಪಾತ್ರವಾಗಿದೆ. ಮಾರ್ಕ್ ಈ ಐತಿಹಾಸಿಕ ಚಿತ್ರಕ್ಕೆ ಲೈಕ್ ಒತ್ತುತ್ತಿದ್ದಂತೆ ಲಕ್ಷಾಂತರ ಮಂದಿ ಮುಗಿ ಬಿದ್ದು ಲೈಕ್, ಕಾಮೆಂಟ್, ಶೇರ್ ಮಾಡತೊಡಗಿದ್ದಾರೆ. ಒಂದು ದಿನ ಕಳೆಯುವುದರೊಳಗೆ 14 ಲಕ್ಷ ಲೈಕ್ ದಾಟಿದ್ದ ಈ ಚಿತ್ರ ಈಗ ಬರೋಬ್ಬರಿ 20 ಲಕ್ಷ ಲೈಕ್ ಪಡೆಯುವ ಹೊಸ್ತಿಲಲ್ಲಿದೆ.

Mark Zuckerberg 'likes' Modi-Obama epic hug photo on Facebook

ನರೇಂದ್ರ ಮೋದಿ ಅವರು ಒಬಾಮಾ ಅವರನ್ನು ಸ್ವಾಗತಿಸಿ, ಆಲಂಗಿಸಿದ ಫೋಟೋವನ್ನು ಪ್ರಧಾನಿ ಮೋದಿ ಅವರ ಅಧಿಕೃತ ಫೇಸ್‍ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದರು. 46 ಸಾವಿರ ಮಂದಿ ಕಮೆಂಟ್ ಮಾಡಿದ್ದಾರೆ. 70 ಸಾವಿರಕ್ಕೂ ಅಧಿಕ ಮಂದಿ ಈ ಫೋಟೋವನ್ನು ಶೇರ್ ಮಾಡಿದ್ದಾರೆ. [ಭಾರತದಲ್ಲಿ ಒಬಾಮಾ ಮೊದಲ ದಿನದ ಚಿತ್ರ ಸಂಪುಟ]

ಅತಿಥಿ ದೇವೋ ಭವ ಹಾಗೂ ವೆಲ್‍ಕಮ್ ಟು ಇಂಡಿಯಾ ಕಾಮೆಂಟ್ ಗಳು ಹೆಚ್ಚಾಗಿದೆ. ಇದಲ್ಲದೆ, ಹೈದರಾಬಾದ್ ಹೌಸ್ ಜಂಟಿ ಸುದ್ದಿಗೋಷ್ಠಿ ಚಿತ್ರ ಕೂಡಾ 4.7 ಲಕ್ಷ ಲೈಕ್ಸ್ ಪಡೆದುಕೊಂಡಿದ್ದರೆ, ಗಾರ್ಡನ್ ನಲ್ಲಿ ಚಾಹ್ ಪೆ ಚರ್ಚಾ ಗೂ ಮುನ್ನ ಇಬ್ಬರು ನಾಯಕರು ಏಕಾಂತವಾಗಿ ಸಮಾಲೋಚನೆ ನಡೆಸಿದ ಚಿತ್ರ 8 ಲಕ್ಷ ಲೈಕ್ಸ್ ಪಡೆದುಕೊಂಡಿದೆ. ನಂತರ ಚಾಹ್ ಪೆ ಚರ್ಚಾದ ಚಿತ್ರಗಳು 7 ಲಕ್ಷ ಲೈಕ್ಸ್ ಹೊಂದಿವೆ.

ಒಟ್ಟಾರೆ ಫೇಸ್ ಬುಕ್ ನಲ್ಲಿ ಮೋದಿ ಹಾಗೂ ಒಬಾಮಾ ಚಿತ್ರಗಳು ಭರ್ಜರಿಯಾಗಿ ಜನಮೆಚ್ಚುಗೆ ಪಡೆದುಕೊಂಡಿವೆ. ಟ್ವಿಟ್ಟರ್ ನಲ್ಲಂತೂ ನಿನ್ನೆಯಿಂದ #obamaindia ಟ್ಯಾಗ್ ಓಡುತ್ತಲೇ ಇದೆ. [ಬರಾಕ್ ಒಬಾಮಾ ಮೊದಲ ದಿನದ ಸುದ್ದಿ ಅಪ್ಡೇಟ್ಸ್ ]

English summary
The warm hug photo between the Indian Prime Minister and the US President just as the former embarked from Air Force One on Sunday has become epic. Nearly 11.5 lakh users have already liked this Modi-Obama Facebook photo and first among them is Mark Zuckerberg, the company's founder.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X