ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ: ಕಿರಾರಿ ಪ್ರದೇಶದಲ್ಲಿ ಬೆಂಕಿ ಅನಾಹುತಕ್ಕೆ 9 ಮಂದಿ ಸಾವು

|
Google Oneindia Kannada News

ನವದೆಹಲಿ, ಡಿಸೆಂಬರ್ 23: ದೆಹಲಿಯ ವಾಯುವ್ಯ ಭಾಗದ ಕಿರಾರಿ ಪ್ರದೇಶದಲ್ಲಿ ಸೋಮವಾರದಂದು ಭಾರಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಬೆಂಕಿ ಅನಾಹುತಕ್ಕೆ 9 ಮಂದಿ ಮೃತರಾಗಿದ್ದು, 10ಕ್ಕೂ ಅಧಿಕ ಮಂದಿಗೆ ತೀವ್ರಗಾಯಗಳಾಗಿವೆ.

ಬಟ್ಟೆಗಳನ್ನು ದಾಸ್ತಾನು ಮಾಡಿದ್ದ ವೇರ್ ಹೌಸ್ ನಲ್ಲಿ ತಡರಾತ್ರಿ 1 ಗಂಟೆ ನಂತರ ಬೆಂಕಿ ಕಾಣಿಸಿಕೊಂಡಿದೆ. ಮೂರಂಸ್ತಿನ ಕಟ್ಟಡದ ನೆಲ ಮಹಡಿಯಲ್ಲಿ ಬೆಂಕಿ ಮೊದಲಿಗೆ ಕಂಡು ಬಂದಿದ್ದು, ಬೆಂಕಿ ನಂದಿಸಲು ಯಾವುದೇ ಸಾಧನಗಳನ್ನು ವೇರ್ ಹೌಸ್ ಹೊಂದಿರಲಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೆ, ತುರ್ತು ನಿರ್ಗಮನ ವ್ಯವಸ್ಥೆಯೂ ಇಲ್ಲದೆ, ಒಂದೇ ಕಡೆ ಮೆಟ್ಟಿಲುಗಳಿರುವುದು ಕಂಡು ಬಂದಿದೆ.

ಈ ಘಟನೆಯಲ್ಲಿ ಗಾಯಗೊಂಡವರನ್ನು ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ.

9 Dead, Several Injured After Fire Breaks Out At Cloth Warehouse In Northwest Delhi

ಇತ್ತೀಚೆಗೆ ಉತ್ತರ ದೆಹಲಿಯಲ್ಲಿ ಉತ್ಪಾದನಾ ಘಟಕವೊಂದರಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 43ಕ್ಕೂ ಅಧಿಕ ಮಂದಿ ಮೃತಪಟ್ಟ ಘಟನೆ ನಡೆದಿತ್ತು.

ಮುಂಬೈನಲ್ಲಿ ಅಗ್ನಿ ಅವಘಡ
ಮುಂಬೈನಲ್ಲಿ ಲಾಭ್ ಶ್ರೀವಳ್ಳಿ ಹೆಸರಿನ ಬಹುಮಹಡಿ ಕಟ್ಟಡದ 7 ಹಾಗೂ 8ನೇ ಮಹಡಿಯಲ್ಲಿ ಭಾನುವಾರ ರಾತ್ರಿ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಅಪಾಯದಲ್ಲಿ ಸಿಲುಕಿದ್ದ ನಾಲ್ವರನ್ನು ರಕ್ಷಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

English summary
Nine people were killed and 10 injured after a fire broke out in a cloth warehouse in Northwest Delhi's Kirari area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X