ಮಾರ್ಚ್ 31ರವರೆಗೆ ದೆಹಲಿಯ ಸರ್ಕಾರಿ, ಖಾಸಗಿ ಪ್ರಾಥಮಿಕ ಶಾಲೆಗಳಿಗೆ ರಜೆ
ನವದೆಹಲಿ, ಮಾರ್ಚ್ 5: ಕೊರೊನಾ ಭೀತಿ ಬೇರೆ ದೇಶಗಳಿಂದ ಇದೀಗ ಭಾರತಕ್ಕೂ ಆವರಿಸಿದೆ.
ಕೊರೊನಾ ಭಯ ಹಿನ್ನೆಲೆಯಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಶಾಲೆಗಳಿಗೆ ಮಾರ್ಚ್ 31ರವರೆಗೆ ದೆಹಲಿ ಸರ್ಕಾರ ರಜೆ ಘೋಷಿಸಿದೆ.
24 ಗಂಟೆಗಳಲ್ಲಿ ಕೊರೊನಾ ವೈರಸ್ ಗೆ 15 ಬಲಿ; ಇದು ಚೀನಾ ಕಥೆಯಲ್ಲ
ಮಾರಕ ವೈರಸ್ ಕೊರೊನಾ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
ದೆಹಲಿಯ ಮಯೂರ ವಿಹಾರ ಎಂಬ ಪ್ರದೇಶದ ವ್ಯಕ್ತಿಯೊಬ್ಬನಿಗೆ ಮೊದಲ ಬಾರಿ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ಇದು ಆಗ್ರಾದಲ್ಲಿರುವ ಆತನ ಕುಟುಂಬದ 5 ಮಂದಿಗೂ ಸೋಂಕು ತಗುಲಲು ಕಾರಣವಾಗಿತ್ತು. ಸೋಂಕು ತಗುಲಿದ ವ್ಯಕ್ತಿಯ ಜತೆ ವ್ಯವಹಾರವಿರಿಸಿಕೊಂಡಿದ್ದ 88 ಮಂದಿಗೂ ತಪಾಸಣೆ ನಡೆಸಲಾಗಿದ್ದು, ಅವರ ಮೇಲೆ ನಿಗಾ ವಹಿಸಲಾಗಿದೆ ಎಂದು ದೆಹಲಿ ಸರ್ಕಾರ ತಿಳಿಸಿದೆ.
As a precautionary measure to prevent the possibility of spread of COVID-19 amongst our children, Delhi Government has directed immediate closure of all primary schools (Govt/ aided/ private/MCD/NDMC) till 31/3/20
— Manish Sisodia (@msisodia) March 5, 2020
ಈ ಮೊದಲು ದೆಹಲಿ ಸರ್ಕಾರವು ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೆ ಬಯೋಮೆಟ್ರಿಕ್ ಹಾಜರಾತಿಯನ್ನು ರದ್ದುಗೊಳಿಸುವಂತೆ ಸಲಹೆ ನೀಡಿತ್ತು. ಈ ಬಗ್ಗೆ ಸಂಸ್ಥೆಗಳು ಅಧಿಕಾರಿಗಳಿಗೆ, ಕಾರ್ಯದರ್ಶಿಗಳಿಗೆ ಹಾಗೂ ಪಾಲಿಕೆಗೆ ಪತ್ರ ಬರೆದು ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ಸದ್ಯದ ಮಟ್ಟಿಗೆ ರದ್ದುಗೊಳಿಸಬೇಕೆಂದು ತಿಳಿಸಲಾಗಿತ್ತು.