ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಮಧ್ಯಂತರ ಸ್ಪೀಕರ್ ಮನೇಕಾ ಗಾಂಧಿ

|
Google Oneindia Kannada News

ನವದೆಹಲಿ, ಮೇ 30: ಮನೇಕಾ ಗಾಂಧಿ ಅವರು ಲೋಕಸಭೆಯ ಮಧ್ಯಂತರ ಸ್ಪೀಕರ್ ಆಗಲಿದ್ದಾರೆ. ಈ ಬಾರಿಯ ನರೇಂದ್ರ ಮೋದಿ ಸರಕಾರದಲ್ಲಿ ಅರವತ್ತೆರಡು ವರ್ಷದ ಮನೇಕಾ ಗಾಂಧಿ ಅವರಿಗೆ ಸಚಿವೆ ಸ್ಥಾನ ಸಿಕ್ಕಿಲ್ಲ. ರಾಷ್ಟ್ರಪತಿ ಭವನದಲ್ಲಿ ನಡೆದ ಸಚಿವರ ಪ್ರಮಾಣ ವಚನ ಸಮಾರಂಭದ ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ.

ಮೋದಿ ಸರ್ಕಾರ್ 2 : ಕೇಂದ್ರ ಸಚಿವ ಸಂಪುಟದ ನೂತನ ಸದಸ್ಯರುಮೋದಿ ಸರ್ಕಾರ್ 2 : ಕೇಂದ್ರ ಸಚಿವ ಸಂಪುಟದ ನೂತನ ಸದಸ್ಯರು

ಮನೇಕಾ ಗಾಂಧಿ ಅವರು ಲೋಕಸಭೆ ಮಧ್ಯಂತರ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಇದೀಗ ಆಯ್ಕೆಯಾಗಿರುವ ಸಂಸದರಿಗೆ ಪ್ರಮಾಣ ವಚನ ಬೋಧಿಸುವ ಕೆಲಸಕ್ಕೆ ಅವರದೇ ಜವಾಬ್ದಾರಿ. ಜತೆಗೆ ಲೋಕಸಭೆಯ ಮೊದಲ ಸಭೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಆ ಸಭೆಯಲ್ಲಿ ಸ್ಪೀಕರ್ ರನ್ನು ಆರಿಸಲಾಗುತ್ತದೆ.

Maneka to be pro term speaker of Lok sabha

ಮಧ್ಯಂತರ ಸ್ಪೀಕರ್ ಆಗಿ ಸಂತೋಷ್ ಗಂಗ್ವಾರ್ ಅಥವಾ ಮನೇಕಾ ಗಾಂಧಿ ಆಗಬೇಕಿತ್ತು. ಅವರಿಬ್ಬರು ಲೋಕಸಭೆಯ ಅತ್ಯಂತ ಹಿರಿಯ ಸದಸ್ಯರು. ಮನೇಕಾ ಗಾಂಧಿ ಅವರು ಉತ್ತರಪ್ರದೇಶದ ಸುಲ್ತಾನ್ ಪುರ್ ಕ್ಷೇತ್ರದಿಂದ ಜಯಿಸಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಮನೇಕಾ ಗಾಂಧಿ ಅವರು ಮುಸ್ಲಿಮರ ಬಗ್ಗೆ ನೀಡಿದ ಹೇಳಿಕೆ ವಿವಾದಕ್ಕೆ ಕಾರಣ ಆಗಿತ್ತು.

English summary
Maneka to be pro term speaker of Lok Sabha. She is not included in Narendra Modi's cabinet on Thursday. So, there is anticipation about her, as speaker. She elected from Sultanpur, Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X