ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಕು ಹಿಡಿದು ಕೇರಳ ಸಿಎಂ ಕಡೆಗೆ ನಗ್ಗಲು ಯತ್ನಿಸಿದವನ ಬಂಧನ

By Manjunatha
|
Google Oneindia Kannada News

ನವದೆಹಲಿ, ಆಗಸ್ಟ್‌ 04: ಕೇರಳ ಸಿಎಂ ಪಿಣರಾಯಿ ವಿಜಯನ್ ಇರುವಾಗಲೇ ಆಯುಧದೊಂದಿಗೆ ಕೇರಳ ಹೌಸ್‌ಗೆ ನುಗ್ಗಿದ್ದ ವ್ಯಕ್ತಿಯೊಬ್ಬನನ್ನು ಭದ್ರತಾ ಸಿಬ್ಬಂದಿ ಬಂಧಿಸಿ ವಶಕ್ಕೆ ಪಡೆದಿದ್ದಾರೆ.

ಚೂರಿ ಹಿಡಿದು ಕೇರಳ ಭವನ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯ ಬಂಧನಚೂರಿ ಹಿಡಿದು ಕೇರಳ ಭವನ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯ ಬಂಧನ

ನವದೆಹಲಿಯಲ್ಲಿ ಕೇರಳ ಹೌಸ್‌ ಬಳಿ ಸಿಎಂ ಪಿಣರಾಯಿ ವಿಜಯನ್ ಅವರು ಮಾಧ್ಯದವರೊಂದಿಗೆ ಮಾತನಾಡುತ್ತಿದ್ದಾಗ ಯುವಕನೊಬ್ಬ ಚಾಕು ಹಿಡಿದು ಏಕಾಏಕಿ ಕೇರಳ ಹೌಸ್‌ಗೆ ನುಗ್ಗಿ ಪಿಣರಾಯಿ ವಿಜಯನ್ ಅವರ ಬಳಿ ತೆರಳಲು ಯತ್ನಿಸಿದ್ದಾನೆ.

ಮೀನು ಮಾರಿ ಟ್ರೋಲ್ ಆದ ಕೇರಳದ ಹುಡುಗಿಯ ಕರುಣಾಜನಕ ಕತೆ ಕೇಳಿ... ಮೀನು ಮಾರಿ ಟ್ರೋಲ್ ಆದ ಕೇರಳದ ಹುಡುಗಿಯ ಕರುಣಾಜನಕ ಕತೆ ಕೇಳಿ...

ಕೂಡಲೇ ಅಲ್ಲಿಯೇ ಇದ್ದ ವಿಜಯನ್ ಅವರ ಭದ್ರತಾ ಸಿಬ್ಬಂದಿ ಆತನ ಬಳಿ ಆಯುಧ ಕಂಡು ಮಾತಿನ ಮೂಲಕ ಮನವೊಲಿಸಲು ಯತ್ನಿಸಿದ್ದಾರೆ. ನಂತರ ಉಪಾಯದಿಂದ ಆತನನ್ನು ಹಿಂದಿನಿಂದ ಹಿಡಿದು ನೆಲಕ್ಕೆ ಕೆಡವಿ ಆತನ ಬಳಿಯಿಂದ ಆಯುಧ ಕಿತ್ತುಕೊಳ್ಳಲಾಗಿದೆ.

Man detained who triend to attack Kerala CM Pinarayi Vijayan

ಸಿಎಂ ಮೇಲೆ ದಾಳಿಗೆ ಯತ್ನಿಸಿದವನನ್ನು ವಿಮಲ್ ಎಂದು ಗುರುತಿಸಲಾಗಿದ್ದು, 'ನಾನು ಸಾಯುತ್ತೇನೆ, ಸಿಎಂ ನನ್ನನ್ನು ಬದುಕಲು ಬಿಡುತ್ತಿಲ್ಲ, ನನಗೆ ಕೆಲಸ ಮಾಡಲು ಅವಕಾಶ ಕೊಡಬೇಕು, ನನ್ನ ನೋವಿಗೆ ಮುಖ್ಯಮಂತ್ರಿ ಸ್ಪಂದಿಸಿಲ್ಲ' ಎಂದು ವಿಮಲ್ ಬಂಧನಕ್ಕೊಳಗಾದಾಗ ಹೇಳುತ್ತಿದ್ದ ಎಂದು ಸಮೀಪ ದರ್ಶಿಗಳು ಹೇಳಿದ್ದಾರೆ.

English summary
A young man tried to attack Kerala CM Pinarayi Vijayan in New Delhi's Kerala house. CM's security personal has detained the man. He tried to attack CM with a knife.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X