ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ ಫೋಟೊ ಹತ್ರಾಸ್ ಸಂತ್ರಸ್ತೆಯದ್ದಲ್ಲ ನನ್ನ ಪತ್ನಿಯದ್ದು: ಹೈಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 16: ದೇಶಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಹತ್ರಾಸ್ ಸಂತ್ರಸ್ತೆ ಎಂದು ಬಿತ್ತರವಾಗುತ್ತಿರುವ ಫೋಟೊ ನನ್ನ ಪತ್ನಿಯದ್ದು ಎಂದು ಹೇಳಿ ವ್ಯಕ್ತಿಯೊಬ್ಬ ನ್ಯಾಯಾಲಾಯದ ಮೆಟ್ಟಿಲೇರಿದ್ದಾರೆ.

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಘಟನೆಯ ಸಂತ್ರಸ್ತೆಯದ್ದು ಎಂದು ಹೇಳಿಕೊಂಡು ಕೆಲವೊಂದು ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಂಡು ಸಂತಾಪ ಸೂಚಿಸುವ ಭರದಲ್ಲಿ ಸಾಕಷ್ಟು ರಾದ್ಧಾಂತವೇ ನಡೆದಿವೆ.

ಹತ್ರಾಸ್ ಅತ್ಯಾಚಾರ ಪ್ರಕರಣ: ಸುಪ್ರೀಂನಲ್ಲಿ ಹೊಸ ಪಿಐಎಲ್ ದಾಖಲು ಹತ್ರಾಸ್ ಅತ್ಯಾಚಾರ ಪ್ರಕರಣ: ಸುಪ್ರೀಂನಲ್ಲಿ ಹೊಸ ಪಿಐಎಲ್ ದಾಖಲು

ಹತ್ರಾಸ್ ಸಂತ್ರಸ್ತೆ ಎಂದು ಹೇಳಿಕೊಂಡು ಬಿತ್ತರ ಮಾಡಲಾಗುತ್ತಿರುವ ಚಿತ್ರ ಮೃತಪಟ್ಟಿರುವ ತನ್ನ ಮಡದಿಯದ್ದು ಎಂದು ಹೇಳಿರುವ ವ್ಯಕ್ತಿಯೊಬ್ಬರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

Man Claims Wifes Photo Being Circulated As Hathras Victim

ಈ ಕುರಿತು ಗಮನ ಹರಿಸಲು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಮಂತ್ರಾಲಯಕ್ಕೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ.

ಒಂದು ವೇಳೆ ಈ ವ್ಯಕ್ತಿ ಹೇಳುತ್ತಿರುವ ಮಾತಿನಲ್ಲಿ ನಿಜಾಂಶ ಕಂಡುಬಂದರೆ, ಸಾಮಾಜಿಕ ಜಾಲತಾಣಗಳಿಗೆ ಈ ಸಂಬಂಧ ಅಗತ್ಯ ನಿರ್ದೇಶನಗಳನ್ನು ತ್ವರಿತವಾಗಿ ನೀಡಬೇಕೆಂದು ಕೋರ್ಟ್ ಇದೇ ವೇಳೆ ತಿಳಿಸಿದೆ.

ಭಾರತೀಯ ದಂಡಸಂಹಿತೆಯ 228ಎ ವಿಧಿ ಅನುಸಾರ ಅತ್ಯಾಚಾರ ಸಂತ್ರಸ್ತೆ ಎಂದು ಹೇಳಲಾದ ವ್ಯಕ್ತಿಯ ಹೆಸರನ್ನಾಗಲಿ, ಚಿತ್ರವನ್ನಾಗಲಿ ಎಲ್ಲೂ ಬಿತ್ತರ ಮಾಡುವಂತಿಲ್ಲ, ಆದರೂ ಕೂಡ ಈ ಬಗ್ಗೆ ಕ್ಯಾರೇ ಎನ್ನದೆ ಬಿತ್ತರ ಮಾಡಿಬಿಟ್ಟಿದೆ.

ಸೆಪ್ಟೆಂಬರ್ 14 ರಂದು 19 ವರ್ಷದ ಯುವತಿ ತನ್ನ ತಾಯಿ ಜೊತೆಯಲ್ಲಿ ಹೊಲಕ್ಕೆ ಹುಲ್ಲು ತರಲು ಹೋಗಿದ್ದಾಗ ನಾಲ್ವರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

English summary
The Delhi High Court has directed the Centre to look into the complaint of a man who claimed that a photograph of his dead wife is being circulated on social media platforms wrongly depicting her as the victim of UP's Hathras rape case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X