ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣರಾಜ್ಯೋತ್ಸವ:ಮಮತಾ ಸರ್ಕಾರದ ಸ್ತಬ್ಧ ಚಿತ್ರವನ್ನು ಕೇಂದ್ರ ತಿರಸ್ಕರಿಸಿದ್ದೇಕೆ?

|
Google Oneindia Kannada News

ನವದೆಹಲಿ, ಜನವರಿ 2: ಕೇಂದ್ರ ಹಾಗೂ ಪಶ್ಚಿಮ ಬಂಗಾಳ ಸರ್ಕಾರದ ನಡುವೆ ಹಗ್ಗಜಗ್ಗಾಟ ತಾರಕಕ್ಕೇರಿರುವ ಬೆನ್ನಲ್ಲೇ ಗಣರಾಜ್ಯೋತ್ಸವ ದಿನದ ಸ್ತಬ್ಧ ಚಿತ್ರಗಳ ಮೆರವಣಿಗೆ ಈಗ ವಿವಾದಕ್ಕೀಡು ಮಾಡಿದೆ.

ಗಣರಾಜ್ಯೋತ್ಸವ ಪೆರೇಡ್‌ಗಾಗಿ ಪಶ್ಚಿಮ ಬಂಗಾಳ ಸರ್ಕಾರ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದ ಸ್ತಬ್ಧ ಚಿತ್ರವನ್ನು ಕೇಂದ್ರ ಆಯ್ಕೆ ಸಮಿತಿ ತಿರಸ್ಕರಿಸಿದೆ.

ಪಶ್ಚಿಮ ಬಂಗಾಳ ಸರ್ಕಾರ ಕಳುಹಿಸಿಕೊಟ್ಟಿರುವ ಸ್ತಬ್ಧ ಚಿತ್ರವನ್ನು ಎರಡು ಬಾರಿ ಪರಿಶೀಲಿಸಿದೆ. ಆದರೆ ಮಾರ್ಗಸೂಚಿಗೆ ಇದು ಪೂರಕವಾಗಿಲ್ಲ ಎಂದು ಸ್ತಬ್ಧ ಚಿತ್ರವನ್ನು ಆಯ್ಕೆ ಸಮಿತಿ ತಿರಸ್ಕರಿಸಿದೆ.

mamata

ಇದರಿಂದ 2020ರ ಗಣರಾಜ್ಯೋತ್ಸವಕ್ಕೆ ಪಶ್ಚಿಮ ಬಂಗಾಳದಿಂದ ಯಾವುದೇ ಸ್ತಬ್ಧ ಚಿತ್ರಗಳ ಮೆರವಣಿಗೆ ಇರುವುದಿಲ್ಲ.

ಸ್ತಬ್ಧ ಚಿತ್ರದಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಕನ್ಯಶ್ರೀ ಯೋಜನೆ ಬಗ್ಗೆ ವಿವರಣೆ ನೀಡಲಾಗಿತ್ತು. ಈ ಯೋಜನೆಯ ಸಮಾಜದಲ್ಲಿ ಹಿಂದುಳಿದ ಬಾಲಕಿಯರಿಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಯೋಜನೆಯಾಗಿದೆ.

ಈ ಯೋಜನೆಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ತಜ್ಞರ ಸಮಿತಿಯು ಸ್ತಬ್ಧ ಚಿತ್ರದ ಬಗ್ಗೆ ಕೆಲ ಸ್ಪಷ್ಟನೆಯನ್ನು ಕೇಳಲು ಪಶ್ಚಿಮ ಬಂಗಾಳದ ಅಧಿಕಾರಿಗಳನ್ನು ಆಹ್ವಾನಿಸಿದ್ದರೂ ಕೂಡ ಸಭೆಗೆ ಹಾಜರಾಗಿರಲಿಲ್ಲ.

ಹೀಗಾಗಿ ಅನಿವಾರ್ಯವಾಗಿ ಸ್ತಬ್ಧ ಚಿತ್ರ ತಿರಸ್ಕರಿಸಬೇಕಾಗಿದೆ ಎಂದು ಕೇಂದ್ರ ಸಮಿತಿ ಹೇಳಿಕೊಂಡಿದೆ.

2015ರ ಬಳಿಕ ಮೂರನೇ ಬಾರಿಗೆ ಇಂತಹ ನಿರ್ಧಾರಗಳು ಆಗುತ್ತಿವೆ. 2015ರಲ್ಲಿ ಕನ್ಯಶ್ರೀ ಯೋಜನೆಯನ್ನೇ ಪ್ರದರ್ಶಿಸುವ ಪ್ರಯತ್ನವಾಗಿತ್ತು.

2018ರಲ್ಲಿ ಏಕತಾ ಈ ಸಂಪ್ರೀತಿ ಎನ್ನುವ ಸ್ತಬ್ಧ ಚಿತ್ರವನ್ನು ತಯಾರಿಸಲಾಗಿತ್ತು. ಆದರೆ ಎರಡೂ ಬಾರಿ ಆಯ್ಕೆ ಸಮಿತಿಯು ಪ್ರಾಥಮಿಕ ಸುತ್ತಿನ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದ್ದರೂ ಅಂತಿಮ ಪರೀಕ್ಷೆಯಲ್ಲಿ ತಿರಸ್ಕಾರಕ್ಕೊಳಗಾಗಿದ್ದವು.

2014ರಲ್ಲಿ ಪಶ್ಚಿಮ ಬಂಗಾಳದ ಸ್ತಬ್ಧಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿತ್ತು ಎನ್ನುವುದು ಗಮನಾರ್ಹ ವಿಷಯವಾಗಿದೆ. ಒಟ್ಟಾರೆ ಈ ಬಾರಿಯ ಗಣರಾಜ್ಯೋತ್ಸವ ಪೆರೇಡ್‌ಗೆ 22 ಸ್ತಬ್ಧಚಿತ್ರ ಮೆರವಣಿಗೆಗಳನ್ನು ಅಂತಿಮಗೊಳಿಸಲಾಗಿದೆ.
ಇದರಲ್ಲಿ 16 ಸ್ತಬ್ಧ ಚಿತ್ರಗಳು ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಸೇರಿದ್ದಾಗಿದ್ದರೆ ಉಳಿದ ಆರು ಕೇಂದ್ರ ಸಚಿವಾಲಯಗಳದ್ದಾಗಿದೆ. ಒಟ್ಟು ಈ ಬಾರಿ ಅಯ್ಕೆ ಸಮಿತಿ ಮುಂದೆ 56 ಪ್ರಸ್ತಾಪಗಳು ಬಂದಿದ್ದವು.

English summary
Mamata Government Tableau Has Been Rejected By Central Expert Commitee,The proposals of 16 states/Union Territories and six ministries/departments have been shortlisted for taking part in this year’s Republic Day parade, but the tableau pitch made by West Bengal did not make the cut.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X