ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಎಡ' 'ಕೈ' ಜೊತೆ ದೀದಿ ದೋಸ್ತಿ, ಮೋದಿ ಜೊತೆ ಭಾರೀ ಕುಸ್ತಿ!

|
Google Oneindia Kannada News

ನವದೆಹಲಿ, ಫೆಬ್ರವರಿ 14: ಈ ಬಾರಿಯ ಲೋಕಸಭಾ ಚುನಾವಣೆ ಏನಾಗಬಹುದು ಎಂದು ನಿರೀಕ್ಷೆಯನ್ನೂ ಮಾಡಲಾಗದ ಮಟ್ಟಿಗೆ ಕುತೂಹಲ ಕೆರಳಿಸಿದೆ.

ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತವಾಗುವವರ ಪಟ್ಟಿ ದೊಡ್ಡದಿರುವುದರಿಂದ ಚುನಾವಣೆಗೂ ಮುನ್ನವೇ ಮಹಾಘಟಬಂಧನದಲ್ಲಿ ಬಿರುಕು ಮೂಡಬಹುದು ಎಂಬ ಲೆಕ್ಕಾಚಾರವಿದ್ದರೂ, ಇದೀಗ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಮತ್ತು ಎಡಪಕ್ಷಗಳ ಜೊತೆ ಕೈಜೋಡಿಸುವುದಾಗಿ ಖಚಿತ ಪಡಿಸಿದ ಮೇಲೆ ಎನ್ ಡಿಎ ಸರ್ಕಾರಕ್ಕೆ ಆತಂಕ ಆರಂಭವಾಗಿದೆ.

ಮೋದಿ ಹೊಗಳಿದ ಮುಲಾಯಂ ಸಿಂಗ್ : ಇದರ ಹಿಂದೆ ಹೀಗೊಂದು ರಾಜಕೀಯ ಲೆಕ್ಕಾಚಾರಮೋದಿ ಹೊಗಳಿದ ಮುಲಾಯಂ ಸಿಂಗ್ : ಇದರ ಹಿಂದೆ ಹೀಗೊಂದು ರಾಜಕೀಯ ಲೆಕ್ಕಾಚಾರ

ಬುಧವಾರ ದೆಹಲಿಯಲ್ಲಿ ಆಯೋಜಿಸಲಾಗಿದ್ದ ವಿಪಕ್ಷಗಳ ಸಮಾವೇಶದಲ್ಲಿ ಮಾತನಾಡುತ್ತಿದ್ದ ದೀದಿ, ತಾವು ಎಡಪಕ್ಷ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವುದಾಗಿ ಖಚಿತ ಪಡಿಸಿದರು. ಆದರೆ ಪಶ್ಚಿಮ ಬಂಗಾಳದಲ್ಲಿ ಮಾತ್ರ ಕಾಂಗ್ರೆಸ್ ನಮ್ಮ ವಿಪಕ್ಷವಾಗಿಯೇ ಇರಲಿದೆ, ರಾಷ್ಟ್ರ ಮಟ್ಟದಲ್ಲಿ ಮಾತ್ರ ಮೈತ್ರಿ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಒಪ್ಪುತ್ತಾರಾ?

ರಾಹುಲ್ ಗಾಂಧಿ ಒಪ್ಪುತ್ತಾರಾ?

ಜನವರಿ ತಿಂಗಳಿನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಗವಹಿಸದೆ ಕೇವಲ ಪತ್ರವನ್ನು ಕಳಿಸಿ, ನಮ್ಮ ಬೆಂಬಲ ನಿಮಗಿದೆ ಎಂದಿದ್ದರು. ಈ ಬೆಳವಣಿಗೆ ಸಾಕಷ್ಟು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿತ್ತು. ಮಮತಾ ದೀದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಕೆಲವು ನಾಯಕರು ಬಿಂಬಿಸಿದ್ದು ರಾಹುಲ್ ಗಾಂಧಿ ಅವರಿಗೆ ಇರಿಸುಮುರಿಸುಂಟು ಮಾಡಿದೆ ಎನ್ನಲಾಗಿತ್ತು. ಇದೀಗ ಮೈತ್ರಿ ಮಾಡಿಕೊಂಡರೂ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಎದ್ದಾಗ ಉಭಯ ನಾಯಕರ ನಡುವಲ್ಲಿ ಭಿನ್ನಾಭಿಪ್ರಾಯ ಎದ್ದರೆ ಅಚ್ಚರಿಯಿಲ್ಲ.

ರಾಜ್ಯದಲ್ಲಿ ವಿಪಕ್ಷ, ರಾಷ್ಟ್ರದಲ್ಲಿ ಮಿತ್ರಪಕ್ಷ!

ರಾಜ್ಯದಲ್ಲಿ ವಿಪಕ್ಷ, ರಾಷ್ಟ್ರದಲ್ಲಿ ಮಿತ್ರಪಕ್ಷ!

ಕೇವಲ ರಾಷ್ಟ್ರ ರಾಜಕಾರಣದ ವಿಷಯ ಬಂದಾಗ ಮಾತ್ರ ನಾವು ಕಾಂಗ್ರೆಸ್ ಮತ್ತು ಎಡಪಕ್ಷಗೊಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ. ಮಿಕ್ಕಂತೆ ರಾಜ್ಯ ರಾಜಕಾರಣದ ವಿಷಯ ಬಂದಾಗ ಆ ಎರಡು ಪಕ್ಷಗಳೂ ನಮಗೆ ವಿರೋಧ ಪಕ್ಷವೇ ಎಂದು ದೀದಿ ಖಚಿತಪಡಿಸಿದ್ದಾರೆ.

ದೆಹಲಿಯಲ್ಲಿ ರಣಕಹಳೆ ಮೊಳಗಿಸಲಿರುವ ಮಮತಾ ಬ್ಯಾನರ್ಜಿದೆಹಲಿಯಲ್ಲಿ ರಣಕಹಳೆ ಮೊಳಗಿಸಲಿರುವ ಮಮತಾ ಬ್ಯಾನರ್ಜಿ

ಮಾಯಾವತಿ ನಿಲುವೇನು?

ಮಾಯಾವತಿ ನಿಲುವೇನು?

ಮಹಾಘಟಬಂಧನದಲ್ಲಿ ಕಾಂಗ್ರೆಸ್ ಸಹ ಭಾಗವಾಗುವುದಾದರೆ ನಾನು ಬೆಂಬಲ ನೀಡುವುದಿಲ್ಲ ಎಂದು ಹಲವು ಬಾರಿ ಉಚ್ಚರಿಸಿರುವ ಬಿಎಸ್ಪಿ ನಾಯಕಿ ಮಾಯಾವತಿ ದೀದಿ ನಿಲುವನ್ನು ಸ್ವಾಗತಿಸುತ್ತಾರಾ? ಇದೀಗ ಮಹಾಘಟಬಂಧನಕ್ಕೆ ಕಾಂಗ್ರೆಸ್ ಅನ್ನೂ ದೀದಿ ಸೇರಿಕೊಂಡಿದ್ದರಿಂದ ಮಾಯಾವತಿ ಅದರ ಭಾಗವಾಗದೆ ದೂರವೇ ಉಳಿಯುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಮುಲಾಯಂ ಅಚ್ಚರಿಯ ಮಾತು

ಮುಲಾಯಂ ಅಚ್ಚರಿಯ ಮಾತು

'ಮೋದಿ ಮತ್ತೊಮ್ಮೆ' ಎಂದು ಪುನರುಚ್ಚರಿಸುವ ಮೂಲಕ ವಿರೋಧ ಪಕ್ಷಗಳಿಗೆ ಇರಿಸುಮುರಿಸುಂಟು ಮಾಡಿದ ಮುಲಾಯಂ ಸಿಂಗ್ ಯಾದವ್ ಅವರ ನಡೆ ಏನು? ಸಂಸತ್ತಿನಲ್ಲಿ ಸೋನಿಯಾ ಗಾಂಧಿ ಪಕ್ಕವೇ ಕುಳಿತು, ಮೋದಿ ಅವರಿಗೆ ನನ್ನ ಅಭಿನಂದನೆ, ಅವರು ಮತ್ತೊಮ್ಮೆ ಪ್ರಧಾನಿಯಾಗಲಿ ಎನ್ನುವ ಧೈರ್ಯವನ್ನು ಮುಲಾಯಂ ಸಿಂಗ್ ತೋರುತ್ತಾರೆ ಎಂದರೆ ತರಾಜಕೀಯ ಲೆಕ್ಕಾಚಾರ ಬೇರೆಯೇ ಇದ್ದೀತು ಎಂಬ ಅನುಮಾನ ಕಾಡುವುದು ದಿಟ.

ಮೋದಿ ಸರ್ಕಾರ ಕಿತ್ತೆಸೆಯಲು ಗಾಂಧೀಜಿ ಬಳಿ ದೀದಿ ಪ್ರಾರ್ಥನೆ!ಮೋದಿ ಸರ್ಕಾರ ಕಿತ್ತೆಸೆಯಲು ಗಾಂಧೀಜಿ ಬಳಿ ದೀದಿ ಪ್ರಾರ್ಥನೆ!

English summary
West Bengal Chief Minister and Trinamool Congress supremo on Wednesday declared that she would fight alongside the Congress and the Left to take on Prime Minister Narendra Modi for the upcoming Lok Sabha Elections
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X