ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಹುದ್ದೆ ಮೇಲೆ ದೀದಿ ಕಣ್ಣು! ಸಾಕ್ಷಿಯಾದ TMC ಪ್ರಣಾಳಿಕೆ

|
Google Oneindia Kannada News

ನವದೆಹಲಿ, ಮಾರ್ಚ್ 28:ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದೇ ತಮ್ಮ ಮುಖ್ಯ ಧ್ಯೇಯ ಎನ್ನುವ ಸಾಲನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸುವ ಮೂಲಕ ಪ್ರಧಾನಿ ಹುದ್ದೆಯ ಕಣ್ಣಿಟ್ಟಿದ್ದಾರೆ ಮಮತಾ ಬ್ಯಾನರ್ಜಿ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಲೋಕಸಭಾ ಚುನಾವಣೆಗೆ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡಗಡೆ ಮಾಡಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪ್ರಣಾಳಿಕೆಯ ಮೂಲಕ ತಾವು ರಾಷ್ಟ್ರರಾಜಕಾರಣದತ್ತ ಒಲವು ಹೊಂದಿರುವುದನ್ನು ಮಮತಾ ಬ್ಯಾನರ್ಜಿ ಸಾಬೀತುಪಡಿಸಿದ್ದಾರೆ. ಪ್ರಣಾಳಿಕೆಯಲ್ಲಿ ಪಶ್ಚಿಮ ಬಂಗಾಳಕ್ಕಿಂತ ಹೆಚ್ಚಾಗಿ ಜಮ್ಮು ಮತ್ತು ಕಾಶ್ಮೀರ, ನರೇಂದ್ರ ಮೋದಿ, ಅಪನಗದೀಕರಣ ಎಂಬ ಶಬ್ದಗಳೇ ರಾರಾಜಿಸುತ್ತಿವೆ.

ರಾಹುಲ್ ಗಾಂಧಿಗೆ ಮಮತಾ ಬ್ಯಾನರ್ಜಿಯಿಂದ ಮಹಾಮಂಗಳಾರತಿ!ರಾಹುಲ್ ಗಾಂಧಿಗೆ ಮಮತಾ ಬ್ಯಾನರ್ಜಿಯಿಂದ ಮಹಾಮಂಗಳಾರತಿ!

ಈ ಮೂಲಕ ತಾವು ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗುವ ಎಲ್ಲಾ ಸೂಚನೆಯನ್ನೂ ದೀದಿ ನೀಡಿದ್ದಾರೆ.

Mamata Banerjee releases TMC Manifesto, focuses on national issues

ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದೂ ಮಮತಾ ಬ್ಯಾನರ್ಜಿ ಅವರ ಪ್ರಣಾಳಿಕೆಯ ಅಗ್ರ ಸಾಲಿನಲ್ಲಿದೆ.

ತಾವು ಅಧಿಕಾರಕ್ಕೆ ಬಂದರೆ ಅಪನಗದೀಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವುದಾಗಿ ಅವರು ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.

'ಮಿಷನ್ ಶಕ್ತಿ' ಘೋಷಣೆ ಬಗ್ಗೆ ಮಮತಾ ಬ್ಯಾನರ್ಜಿ ಕಿಡಿಕಿಡಿ'ಮಿಷನ್ ಶಕ್ತಿ' ಘೋಷಣೆ ಬಗ್ಗೆ ಮಮತಾ ಬ್ಯಾನರ್ಜಿ ಕಿಡಿಕಿಡಿ

ಜಮ್ಮು-ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಿ, ಕಣಿವೆಯಲ್ಲಿ ಶಾಂತಿ ನೆಲೆಗೊಳಿಸುವಂತೆ ಮಾಡುವ ಸಾಲೂ ಪ್ರಣಾಳಿಕೆಯಲ್ಲಿದೆ.

ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಎಲ್ಲ ಮತಕ್ಷೇತ್ರಗಳನ್ನೂ ಅತೀ ಸೂಕ್ಷ ಎಂದು ಘೋಷಿಸಲಾಗಿದ್ದು, ಏಪ್ರಿಲ್ 11 ರಿಂದ ಮೇ 19 ರವರೆಗೆ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೇ.23 ರಂದು ಫಲಿತಾಂಶ ಹಿರಬೀಳಲಿದೆ.

English summary
West Bengal CM and Mamata Banerjee releases manifesto of her party. She concentrates on national issues more than state issues in manifesto. This will be a clear indication of her interest in National politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X