ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಭೇಟಿಗೂ ಮುನ್ನ ತೃಣಮೂಲ ಸಂಸದೀಯ ಪಕ್ಷದ ಅಧ್ಯಕ್ಷೆಯಾಗಿ ಮಮತಾ ನೇಮಕ

|
Google Oneindia Kannada News

ನವದೆಹಲಿ, ಜು.23: ''ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್‌ ಸಂಸದೀಯ ಪಕ್ಷದ ಹೊಸ ಅಧ್ಯಕ್ಷರಾಗಲಿದ್ದಾರೆ,'' ಎಂದು ಸಂಸದ ಡೆರೆಕ್ ಒಬ್ರಿಯೆನ್ ಶುಕ್ರವಾರ ಪ್ರಕಟಿಸಿದರು.

ಸಂಸದ ಸುದೀಪ್ ಬಂಡೋಪಾಧ್ಯಾಯರಿಂದ ಅಧಿಕಾರ ವಹಿಸಿಕೊಂಡ ದೀದಿ ಸಂಸತ್ತಿಗೆ ಆಯ್ಕೆಯಾಗದೆ ತಮ್ಮ ಸಂಸದೀಯ ಪಕ್ಷದ ನೇತೃತ್ವ ವಹಿಸಿರುವ ಕೆಲವೇ ಕೆಲವು ರಾಜಕೀಯ ನಾಯಕರಲ್ಲಿ ಒಬ್ಬರಾಗಲಿದ್ದಾರೆ. 1998 ರಲ್ಲಿ ಸೋನಿಯಾ ಗಾಂಧಿ ಪಕ್ಷದ ಮುಖ್ಯಸ್ಥರಾದಾಗ ಕಾಂಗ್ರೆಸ್ ಸಂಸದೀಯ ಪಕ್ಷವನ್ನು ಮುನ್ನಡೆಸಿದ್ದರು.

ಪೆಗಾಸಸ್ ಬಳಸಿ ಪ್ರಶಾಂತ್ ಕಿಶೋರ್ ಮೇಲೆ ಕಣ್ಗಾವಲು: ಮಮತಾಪೆಗಾಸಸ್ ಬಳಸಿ ಪ್ರಶಾಂತ್ ಕಿಶೋರ್ ಮೇಲೆ ಕಣ್ಗಾವಲು: ಮಮತಾ

ಈ ಬಗ್ಗೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಸಂಸದ ಡೆರೆಕ್ ಒಬ್ರಿಯೆನ್, "ಮಮತಾ ಬ್ಯಾನರ್ಜಿ ನಮ್ಮ ತೃಣಮೂಲ ಸಂಸದೀಯ ಪಕ್ಷದ ಅಧ್ಯಕ್ಷರಾಗಲಿದ್ದಾರೆ. ಇದು ನಾವು ಔಪಚಾರಿಕಗೊಳಿಸುತ್ತಿರುವುದು ನಿಜ. ಮಮತಾ ಬ್ಯಾನರ್ಜಿ ಏಳು ಬಾರಿ ಸಂಸದರಾಗಿದ್ದಾರೆ. ಈಗಾಗಲೇ ಸಂಸದೀಯ ಪಕ್ಷಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇದು ಕಾರ್ಯತಂತ್ರದ ನಿರ್ಧಾರ," ಎಂದು ತಿಳಿಸಿದ್ದಾರೆ.

Mamata Banerjee Named Trinamools Parliament Chief Ahead Of Delhi Visit

ಪೆಗಾಸಸ್‌ ಬೇಹುಗಾರಿಗೆ ಹಗರಣದ ಬಗ್ಗೆ ಐಟಿ ಸಚಿವ ಅಶ್ವಿನಿ ವೈಷ್ಣವ್ ಪ್ರತಿಕ್ರಿಯೆ ನೀಡುತ್ತಿರುವ ವೇಳೆ ದಾಖಲೆಗಳನ್ನು ಕಸಿದುಕೊಂಡು ಹರಿದು ಹಾಕಿದ ತೃಣಮೂಲ ಸಂಸದ ಡಾ.ಸಂತಾನು ಸೇನ್ ರಾಜ್ಯ ಸಭೆಯಿಂದ ಅಮಾನತುಗೊಂಡ ಸುದ್ದಿಯ ನಡುವೆ ಈ ಪ್ರಕಟಣೆ ಹೊರಬಿದ್ದಿದೆ.

ಇನ್ನು ಈ ವಿಚಾರದಲ್ಲಿ ಮಾತನಾಡಿದ ತೃಣಮೂಲ ನಾಯಕ, "ನಾವು ಸಂಸತ್ತು ನಡೆಸಬೇಕೆಂದು ಬಯಸುತ್ತೇವೆ. ಎರಡು ಅಥವಾ ಮೂರು ವಿಷಯಗಳ ಬಗ್ಗೆ ಚರ್ಚಿಸಬೇಕೆಂದು ನಾವು ಬಯಸುತ್ತೇವೆ. ಪೆಗಾಸಸ್ ಸಮಸ್ಯೆಯನ್ನು ಚರ್ಚಿಸಬೇಕಾಗಿದೆ. ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ನಾವು ಬಯಸುತ್ತೇವೆ," ಎಂದು ಹೇಳಿದ್ದಾರೆ.

'ಪ್ರಧಾನಿ ಮೋದಿ ಸಮಯ ನೀಡಿದ್ದಾರೆ, ಭೇಟಿಯಾಗಲಿದ್ದೇನೆ' ಎಂದ ದೀದಿ'ಪ್ರಧಾನಿ ಮೋದಿ ಸಮಯ ನೀಡಿದ್ದಾರೆ, ಭೇಟಿಯಾಗಲಿದ್ದೇನೆ' ಎಂದ ದೀದಿ

ಡಾ. ಸೇನ್‌ರನ್ನು ಅಮಾನತುಗೊಳಿಸುವುದರಿಂದ ಪಕ್ಷವು "ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ಹೇಳಿದ ಸಂಸದರು, "ಜನರು ಅವರನ್ನು (ಬಿಜೆಪಿ) ಅಮಾನತುಗೊಳಿಸುತ್ತಾರೆ. ನಮ್ಮ ಸಹೋದ್ಯೋಗಿ ಮೊಹುವಾ (ಮೊಯಿತ್ರಾ) ಇದರ ವಿರುದ್ದ ಪ್ರಿವಿಲೇಜ್‌ ಮೋಷನ್‌ ಹೊರಡಿಸಿದ್ದಾರೆ," ಎಂದರು.

ರಾಷ್ಟ್ರೀಯ ರಾಜಕಾರಣದಲ್ಲಿ ವ್ಯಾಪಕವಾದ ಪಾತ್ರವನ್ನು ವಹಿಸಿಕೊಳ್ಳುವ ಮತ್ತು ಬಿಜೆಪಿ ವಿರುದ್ಧ ದೇಶದ ಭಿನ್ನಾಭಿಪ್ರಾಯವನ್ನು ಒಗ್ಗೂಡಿಸುವ ಪ್ರಯತ್ನದ ಅನೇಕರು ಮಾಡುತ್ತಿದ್ದಾರೆ. ಇದರ ಭಾಗವಾಗಿ ಎಂಬಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ದೆಹಲಿಗೆ ತೆರಳಿ ಹಲವು ವಿಪಕ್ಷ ನಾಯಕರನ್ನು ಭೇಟಿಯಾಗಲಿದ್ದಾರೆ.

ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ದೆಹಲಿಯಲ್ಲಿದ್ದಾರೆ. ಇನ್ನು ಬಿಜೆಪಿ ವಿರುದ್ಧ ಬಂಗಾಳ ಚುನಾವಣೆಯಲ್ಲಿ ಭಾರಿ ಜಯಗಳಿಸಿದ ನಂತರ ಇದು ಮಮತಾ ಬ್ಯಾನರ್ಜಿಯ ಮೊದಲ ಭೇಟಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯ ಜೊತೆಗೆ ಸೋನಿಯಾ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

(ಒನ್‌ಇಂಡಿಯಾ ಸುದ್ದಿ)

English summary
West Bengal Chief Minister Mamata Banerjee will be the new chairperson of the parliamentary party of the Trinamool Congress, MP Derek O'Brien announced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X