ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹುಮತ ಸರ್ಕಾರ, ಬಹುಸಂಖ್ಯಾತರ ಸರ್ಕಾರ ಆಗಿಬಿಡುತ್ತದೆ:ಪ್ರಣಬ್ ಮುಖರ್ಜಿ

|
Google Oneindia Kannada News

ನವದೆಹಲಿ, ಡಿಸೆಂಬರ್ 17: 'ಜನಪ್ರಿಯ ಸರ್ಕಾರ' ಅಥವಾ ಭಾರಿ ಬಹುಮತದ ಸರ್ಕಾರದ ವಿರುದ್ಧ ಮಾಜಿ ರಾಷ್ಟ್ರಪತಿ, ಭಾರತ ರತ್ನ ಪುರಸ್ಕೃತ ಪ್ರಣಬ್ ಮುಖರ್ಜಿ ಎಚ್ಚರಿಕೆ ನೀಡಿದ್ದಾರೆ.

ಜನರು ಬಹುಮತ ನೀಡುವುದು ಸ್ಥಿರ ಸರ್ಕಾರ ರಚಿಸಲೆಂದೇ ವಿನಃ ಬಹುಸಂಖ್ಯಾತರ ದೇಶ ನಿರ್ಮಿಸಲಿ ಎಂದಲ್ಲ ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಣಬ್ ಮುಖರ್ಜಿ, ಪರೋಕ್ಷವಾಗಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Majoritarian Government Will Become Majority Peoples Government: Pranav Mukharji

ಹೆಚ್ಚು ಬಹುಮತ ಇಲ್ಲದ ಸರ್ಕಾರವು ಬಹುಸಂಖ್ಯಾತರ ಸರ್ಕಾರ ಆಗಲಾರದು, ಆದರೆ ಹೆಚ್ಚು ಬಹುಮತ ಪಡೆದ ಸರ್ಕಾರವು ಬಹುಸಂಖ್ಯಾತರ ಸರ್ಕಾರ ಆಗಿಬಿಡುತ್ತದೆ ಎಂದು ಪ್ರಣಬ್ ಮುಖರ್ಜಿ ಹೇಳಿದರು.

ಇದೇ ಸಮಯದಲ್ಲಿ ಪ್ರಣಬ್ ಅವರು, ಐದುನೂರು ಲೋಕಸಭೆ ಸ್ಥಾನಗಳ ಬದಲಾಗಿ ಸಾವಿರ ಲೋಕಸಭೆ ಸ್ಥಾನಗಳು ಇರಬೇಕಿತ್ತು ಎಂದು ಸಹ ಪ್ರತಿಪಾದಿಸಿದರು.

English summary
Former president Pranav Mukharji warned against mejority government, or populist government. He says majoritarian government will become majority peoples government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X