ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಸ್ಕ್ ಕಡ್ಡಾಯ, ರಸ್ತೆಯಲ್ಲಿ ಉಗುಳಿದರೆ ದಂಡ, ಗುಟ್ಕಾ ಬ್ಯಾನ್

|
Google Oneindia Kannada News

ನವ ದೆಹಲಿ, ಏಪ್ರಿಲ್ 16: ದೇಶದಲ್ಲಿ ಲಾಕ್‌ಡೌನ್ ಮೇ 3ರವರೆಗೆ ಮುಂದುವರೆಸಲಾಗಿದ್ದು, ಆ ಸಮಯದಲ್ಲಿ ಜನರಿಗೆ ಕೆಲವು ಮಾರ್ಗ ಸೂಚಿಗಳನ್ನು ಗೃಹ ಸಚಿವಾಲಯ ನೀಡಿದೆ. ದೇಶಾದ್ಯಂತ ಕೋವಿಡ್ -19 ಹರಡುವುದನ್ನು ನಿಯಂತ್ರಿಸಲು ವಿಪತ್ತು ನಿರ್ವಹಣಾ ಕಾಯ್ದೆ 2005ರ ಪ್ರಕಾರ ಕಠಿಣ ಪ್ರೋಟೋಕಾಲ್‌ಗಳನ್ನು ದೇಶಾದ್ಯಂತ ಜಾರಿಗೆ ತರಲಾಗಿದೆ.

Recommended Video

ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟ ಕಮಿಷನರ್ ಭಾಸ್ಕರ್ ರಾವ್ | Bhaskar Rao | Bengaluru | Oneindia kannada

ಗೃಹ ಸಚಿವಾಲಯದ ಕೆಲವು ಪ್ರಮುಖ ಮಾರ್ಗಸೂಚಿ ಅಂಶಗಳು ಹೀಗಿವೆ.

ಲಾಕ್‌ಡೌನ್ 2: ಯಾವ ಯಾವ ಚಟುವಟಿಕೆಗಳಿಗೆ ಅವಕಾಶ ಇದೆ?ಲಾಕ್‌ಡೌನ್ 2: ಯಾವ ಯಾವ ಚಟುವಟಿಕೆಗಳಿಗೆ ಅವಕಾಶ ಇದೆ?

1.ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ದಂಡ ಹಾಕಲಾಗುತ್ತದೆ
2.ಕೆಲಸದ ಸ್ಥಳದಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಕಡ್ಡಾಯ
3.ಗುಟ್ಕಾ, ತಂಬಾಕು ಹಾಗೂ ಆಲ್ಕೋಹಾಲ್ ಬ್ಯಾನ್

Major Points From The Ministry Of Home Affairs To Be Strictly Followed

4.ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಯಾವುದೇ ಸಂಸ್ಥೆಯಲ್ಲಿ ಐದಕ್ಕಿಂತ ಹೆಚ್ಚು ಜನರು ಒಂದೇ ಕಡೆ ಇರಲು ಅನುಮತಿ ಇಲ್ಲ. ಜಿಲ್ಲಾಧಿಕಾರಿಗಳು ಮದುವೆ ಮತ್ತು ಅಂತ್ಯಕ್ರಿಯೆಯಂತಹ ಘಟನೆಗಳನ್ನು ನಿಯಂತ್ರಿಸಲಿದ್ದಾರೆ.
5.ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳ ನೌಕರರು ಸಂಪರ್ಕ ಪತ್ತೆಹಚ್ಚುವಿಕೆ ಅಪ್ಲಿಕೇಶನ್ ಆದ ಆರೋಗ್ಯ ಸೇತು ಅಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು
6.ಕಂಪನಿಗಳಲ್ಲಿ ಹೆಚ್ಚು ಮಂದಿಯನ್ನು ಸೇರಿಸಿಕೊಂಡು ಮೀಟಿಂಗ್ ಮಾಡುವಂತಿಲ್ಲ
7.ಕೆಲಸ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ
8.ಲಿಫ್ಟ್‌ ಗಳ ಬದಲಿಗೆ ಮೆಟ್ಟಿಲುಗಳನ್ನು ಹೆಚ್ಚಾಗಿ ಬಳಸಬೇಕು
9.ಆಫೀಸ್‌ಗಳಲ್ಲಿ ಶಿಫ್ಟ್‌ ಸರಿಯಾದ ಪಾಲನೆ, ಕ್ಯಾಂಟೀನ್ ಗಳಲ್ಲಿ ಸಾಮಾಜಿಕ ಅಂತರ
10.65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು ಮತ್ತು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪೋಷಕರು ಮನೆಯಿಂದ ಕೆಲಸವನ್ನು ಮಾಡಬೇಕು

English summary
The Ministry of Home Affairs has issued guidelines on how the lockdown until May 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X