ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ಸಿಎಂ ರಾಜೀನಾಮೆ, ಮೂರೇ ದಿನಕ್ಕೆ ಉರುಳಿದ ಮಹಾರಾಷ್ಟ್ರ ಸರ್ಕಾರ

|
Google Oneindia Kannada News

ನವದೆಹಲಿ, ನವೆಂಬರ್ 27: ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಅಂತಿಮ ಹಂತಕ್ಕೆ ಬಂದು ನಿಂತಿದೆ. ಬುಧವಾರ ಸಂಜೆ 5ಗಂಟೆಯೊಳಗೆ ಬಿಜೆಪಿ-ಎನ್‌ಸಿಪಿ ಸರ್ಕಾರ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಈ ಮೂಲಕ ಆತುರಾತರವಾಗಿ ರಚಿಸಲ್ಪಟ್ಟ ಸರ್ಕಾರದ ಅಳಿವು-ಉಳಿವು ತೀರ್ಮಾನವಾಗಲಿದೆ.

ಮಹಾರಾಷ್ಟ್ರ ಸರ್ಕಾರ ರಚನೆಯು ಅಸಾಂವಿಧಾನಿಕ ಎಂದು ಎನ್‌ಸಿಪಿ-ಕಾಂಗ್ರೆಸ್-ಶಿವಸೇನೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಶನಿವಾರ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ, ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು.

ಮಹಾರಾಷ್ಟ್ರ ರಾಜಕೀಯ; 52 ಶಾಸಕರು ಎನ್‌ಸಿಪಿ ಜೊತೆ! ಮಹಾರಾಷ್ಟ್ರ ರಾಜಕೀಯ; 52 ಶಾಸಕರು ಎನ್‌ಸಿಪಿ ಜೊತೆ!

ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ತ್ರಿ ಸದಸ್ಯ ಪೀಠ ನವೆಂಬರ್ 27ರಂದು ಸಂಜೆ 5 ಗಂಟೆಯೊಳಗೆ ಸರ್ಕಾರ ಬಹುಮತ ಸಾಬೀತು ಮಾಡಬೇಕು ಎಂದು ಆದೇಶ ನೀಡಿದೆ.

ಶನಿವಾರ ಮುಂಜಾನೆ ದಿಢೀರ್ ಆಗಿ ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ರಚನೆ ಮಾಡಲಾಗಿತ್ತು. ಬಿಜೆಪಿ ಸದನದಲ್ಲಿ 105 ಸದಸ್ಯ ಬಲ ಹೊಂದಿದೆ. 6 ಪಕ್ಷೇತರರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಎನ್‌ಸಿಪಿಯ ಎಷ್ಟು ಶಾಸಕರು ಬೆಂಬಲ ನೀಡಲಿದ್ದಾರೆ? ಎಂದು ಕಾದು ನೋಡಬೇಕಿದೆ.

Maharashtra Government Formation Supreme Court Verdict Live Updates

ಮಹಾರಾಷ್ಟ್ರ ರಾಜಕಾರಣ ಮತ್ತು ಸುಪ್ರೀಂಕೋರ್ಟ್‌ನ ವಿಚಾರಣೆಯ ಕ್ಷಣ-ಕ್ಷಣದ ಮಾಹಿತಿ ಒನ್‌ ಇಂಡಿಯಾ ಕನ್ನಡದಲ್ಲಿ.

Newest FirstOldest First
6:40 PM, 26 Nov

ಮೂರು ಪಕ್ಷಗಳು ನಮ್ಮ ನಾಯಕನನ್ನಾಗಿ ಉದ್ಧವ್ ಠಾಕ್ರೆ ಅವರನ್ನು ಆಯ್ಕೆ ಮಾಡಿದ ನಂತರ ನಾವು ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ, ನಿನ್ನೆಯವರೆಗೆ ಬಿಜೆಪಿ ಹೇಳುತ್ತಿತ್ತು ಅವರ ಬಳಿ ಸಂಖ್ಯೆ ಇದೆ ಎಂದು, ಇಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ ಅವರಿಗೆ ಸತ್ಯದ ಅರಿವಾಗಿ ಫಡ್ನವೀಸ್ ರಾಜೀನಾಮೆ ನೀಡಿದ್ದಾರೆ- ನವಾಬ್ ಮಲ್ಲಿಕ್, ಎನ್‌ಸಿಪಿ ಮುಖಂಡ
6:15 PM, 26 Nov

ಬಿಜೆಪಿ ಶಾಸಕ ಕಾಳಿದಾಸ ಕಾಲಂಬ್ಕರ್ ಅವರು ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿದ್ದಾರೆ. ನಾಳೆ ಶಾಸಕರ ಪ್ರಮಾಣ ವಚನ ಕಾರ್ಯ ಜರುಗಿಸಲು ಸುಪ್ರೀಂಕೋರ್ಟ್ ಆದೇಶದಂತೆ ಈ ನೇಮಕ ಆಗಿದೆ. ಎಂಟು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಕಾಳಿದಾಸ ಕಾಲಂಬ್ಕರ್ ಅವರು ಹಿರಿಯ ಶಾಸಕರಾಗಿದ್ದಾರೆ.
4:55 PM, 26 Nov

ಮುಂದಿನ ಐದು ವರ್ಷಗಳ ಕಾಲ ಉದ್ಧವ್ ಠಾಕ್ರೆ ಸಿಎಂ ಆಗಿರಲಿದ್ದಾರೆ ಎಂದು ಶಿವಸೇನೆ ಹೇಳಿದೆ.
4:42 PM, 26 Nov

ಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ ಸಲ್ಲಿಸಿದ್ದು, ಮುಂದಿನ ಸಿಎಂ ಆಯ್ಕೆ ಆಗುವವರೆಗೆ ಹಂಗಾಮಿ ಸಿಎಂ ಆಗಿ ಮುಂದುವರೆಯಲಿದ್ದಾರೆ.
4:18 PM, 26 Nov

ಶನಿವಾರ (ನವೆಂಬರ್ 23) ಕ್ಕೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದ ದೇವೇಂದ್ರ ಫಡ್ನವೀಸ್ ಅವರು ಮೂರನೇ ದಿನವಾದ ಇಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆ ಮೂಲಕ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಕೇವಲ ಎರಡೇ ದಿನಕ್ಕೆ ಉರುಳಿದೆ.
4:10 PM, 26 Nov

ಸುದ್ದಿಗೋಷ್ಠಿ ಮುಗಿಸಿ ರಾಜಭವನ ತಲುಪಿದ ಸಿಎಂ ದೇವೇಂದ್ರ ಫಡ್ನವೀಸ್, ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ.
4:03 PM, 26 Nov

ಅಜಿತ್ ಪವಾರ್ ಜೊತೆ ಸೇರಿ ಸರ್ಕಾರ ರಚಿಸುವ ನಿರ್ಣಯ ನಮ್ಮದೇ (ಮಹಾರಾಷ್ಟ್ರ ರಾಜ್ಯ ಬಿಜೆಪಿ) ಆಗಿತ್ತು. ಇದರಲ್ಲಿ ಕೇಂದ್ರ ಬಿಜೆಪಿ (ಅಮಿತ್ ಶಾ) ಭಾಗಿ ಆಗಿರಲಿಲ್ಲ. ನಿರ್ಣಯ ತೆಗೆದುಕೊಂಡ ನಂತರ ನಿರ್ಣಯದ ಬಗ್ಗೆ ಕೇಂದ್ರ ಬಿಜೆಪಿಗೆ ಮಾಹಿತಿ ನೀಡಲಾಗಿತ್ತು- ದೇವೇಂದ್ರ ಫಡ್ನವೀಸ್
Advertisement
3:57 PM, 26 Nov

ನಾವು ಜಾಗೃತ ವಿಪಕ್ಷವಾಗಿ ಕಾರ್ಯನಿರ್ವಹಿಸುತ್ತೇವೆ. ಜನರ ದನಿ ಆಗುತ್ತೇವೆ, ಸರ್ಕಾರ ತನ್ನ ಹಾದಿ ತಪ್ಪದಂತೆ ನೋಡಿಕೊಳ್ಳುತ್ತೇವೆ, ಮಹಾರಾಷ್ಟ್ರ ಜನರ ಆಸೆ, ಕನಸುಗಳಿಗಾಗಿ ನಾವು ಹೋರಾಟ ಮಾಡುತ್ತಲೇ ಇರುತ್ತೇವೆ- ದೇವೇಂದ್ರ ಫಡ್ನವೀಸ್
3:57 PM, 26 Nov

ಈ ಸುದ್ದಿಗೋಷ್ಠಿ ನಂತರ ನಾನು ರಾಜ್ಯಪಾಲರ ಬಳಿಗೆ ಹೋಗುತ್ತೇನೆ. ರಾಜೀನಾಮೆ ಸಲ್ಲಿಸುತ್ತೇನೆ. ಈ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಬಹುಮತ ನೀಡಿದ್ದಕ್ಕೆ ಮಹಾರಾಷ್ಟ್ರದ ಜನರಿಗೆ ಧನ್ಯವಾದ- ದೇವೇಂದ್ರ ಫಡ್ನವೀಸ್
3:57 PM, 26 Nov

ಈ ಸರ್ಕಾರ ಮೂರು ಚಕ್ರಗಳ ವಾಹನವಿದ್ದಂತೆ. ಇದರ ಒಂದೊಂದು ಚಕ್ರ ಒಂದೊಂದು ಕಡೆ ಹೋಗುತ್ತದೆ. ಇವರೇ ಸ್ವತಃ ಹಾದಿ ತಪ್ಪಿ ಅಪಘಾತಕ್ಕೆ ಈಡಾಗುತ್ತಾರೆ- ದೇವೇಂದ್ರ ಫಡ್ನವೀಸ್
3:53 PM, 26 Nov

ನಾವು ಕುದುರೆ ವ್ಯಾಪಾರ ಮಾಡುವುದಿಲ್ಲ, ನಾವು ಯಾವುದೇ ಪಕ್ಷವನ್ನು ಒಡೆಯಲು ಸಹ ಹೋಗುವುದಿಲ್ಲ, ನಮ್ಮ ಮೇಲೆ ಕುದುರೆ ವ್ಯಾಪಾರದ ಆರೋಪ ಹೊರಿಸುವವರು ಅಧಿಕಾರಕ್ಕಾಗಿ ಏನೇನು ಮಾಡಿದ್ದಾರೆಂದು ಜನ ನೋಡಿದ್ದಾರೆ- ದೇವೇಂದ್ರ ಫಡ್ನವೀಸ್
3:52 PM, 26 Nov

ಆದರೆ ಇಂದು ಅಜಿತ್ ಪವಾರ್ ಇಂದು ನನ್ನನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದರು. ಅವರು ರಾಜೀನಾಮೆ ಸಲ್ಲಿಸಿರುವ ಕಾರಣ ಬಿಜೆಪಿಗೆ ಬಹುಮತ ಇಲ್ಲದಾಗಿದೆ- ದೇವೇಂದ್ರ ಫಡ್ನವೀಸ್
Advertisement
3:51 PM, 26 Nov

ಮೂರು ಪಕ್ಷಗಳು ಹತ್ತು ದಿನ ಚರ್ಚೆ ಮಾಡಿದರೂ ಸಹ 'ಸಾಮಾನ್ಯ ಕಾರ್ಯಕ್ರಮ' ಸಹ ಮಾಡಲು ಅವರಿಗೆ ಆಗಲಿಲ್ಲ. ಈ ನಡುವೆ ಅಜಿತ್ ಪವಾರ್ ನಮಗೆ ಬೆಂಬಲ ನೀಡುವುದಾಗಿ ಹೇಳಿದರು- ದೇವೇಂದ್ರ ಫಡ್ನವೀಸ್
3:48 PM, 26 Nov

ಸಿಎಂ ಸ್ಥಾನಕ್ಕಾಗಿ ಶಿವಸೇನಾ ಪಟ್ಟುಹಿಡಿಯಿತು. ಅವರಿಗೆ ಯಾರು ಸಿಎಂ ಪಟ್ಟ ಕೊಡುತ್ತಾರೋ ಆ ಪಕ್ಷಗಳನ್ನೇ ಶಿವಸೇನಾ ಹುಡುಕಿಕೊಂಡು ಹೊರಟಿತು- ದೇವೇಂದ್ರ ಫಡ್ನವೀಸ್
3:46 PM, 26 Nov

ಅಜಿತ್ ಪವಾರ್ ನೀಡಿದ್ದ ಶಾಸಕರ ಸಹಿಯುಳ್ಳ ಬೆಂಬಲ ಪತ್ರವನ್ನು ನಂಬಿ ಸರ್ಕಾರ ರಚನೆ ಮಾಡಿದ್ದೆವು, ಇಡೀಯ ಎನ್‌ಸಿಪಿ ಪಕ್ಷ ನಮ್ಮ ಜೊತೆ ಬರುತ್ತದೆಯೆಂದು ನಾವು ನಂಬಿದ್ದೆವು ಆದರೆ ಈಗ ಅಜಿತ್ ಪವಾರ್ ಅವರೇ ರಾಜೀನಾಮೆ ನೀಡಿದ್ದಾರೆ- ದೇವೇಂದ್ರ ಫಡ್ನವೀಸ್
3:42 PM, 26 Nov

ನಮ್ಮ ಬಳಿ ಬಹುಮತಕ್ಕೆ ಬೇಕಾಗುವಷ್ಟು ಶಾಸಕರ ಸಂಖ್ಯೆ ಇಲ್ಲ, ಹಾಗಾಗಿ ಸುದ್ದಿಗೋಷ್ಠಿ ಬಳಿಕ ನಾನು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ದೇವೇಂದ್ರ ಫಡ್ನವೀಸ್ ಹೇಳಿದರು.
3:41 PM, 26 Nov

ರಾಜೀನಾಮೆ ಕೊಡುವುದಾಗಿ ಹೇಳಿದ ದೇವೇಂದ್ರ ಫಡ್ನವೀಸ್
3:37 PM, 26 Nov

ಚುನಾವಣಾ ಪೂರ್ವ ಮೈತ್ರಿಗೆ ಜನರು ಸ್ಪಷ್ಟ ಬಹುಮತ ಕೊಟ್ಟಿದ್ದರು. ಬಿಜೆಪಿ ಆಡಳಿತ ನಡೆಸಲಿ ಎಂಬುದು ಜನರ ಬಯಕೆಯಾಗಿತ್ತು. ಆದರೆ ಸಂಖ್ಯಾಬಲ ನೋಡಿದ ನಂತರ ಶಿವಸೇನೆ 'ಬಾರ್ಗೇನ್' (ಚೌಕಾಶಿ) ಆರಂಭಿಸಿತು- ದೇವೇಂದ್ರ ಫಡ್ನವೀಸ್
3:34 PM, 26 Nov

ಮರಾಠಿಯಲ್ಲಿ ಮಾತು ಆರಂಭಿಸಿದ ಸಿಎಂ ದೇವೇಂದ್ರ ಫಡ್ನವೀಸ್, ಮರಾಠಿಯಲ್ಲಿ ಮಾತನಾಡಿದ ನಂತರ ಹಿಂದಿ, ಇಂಗ್ಲೀಷ್‌ನಲ್ಲಿಯೂ ಮಾತನಾಡುತ್ತೇನೆ ಎಂದು ಸುದ್ದಿಗಾರರಿಗೆ ಭರವಸೆ ನೀಡಿದರು.
3:29 PM, 26 Nov

ಸಿಎಂ ದೇವೇಂದ್ರ ಫಡ್ನವೀಸ್ ಅವರು ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ.
3:21 PM, 26 Nov

ಅಜಿತ್ ಪವಾರ್ ನಮ್ಮ ಕಡೆಗೆ ಬಂದಾಗಿದೆ. ನಾವು ಸರ್ಕಾರ ರಚಿಸುವುದು ಖಾಯಂ, ಉದ್ಧವ್ ಠಾಕ್ರೆ ಅವರೇ ಮೈತ್ರಿಯ ಮುಖವಾಗಿರುತ್ತಾರೆ. ಐದು ವರ್ಷ ಉದ್ಧವ್ ಠಾಕ್ರೆ ಖಾಯಂ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
2:56 PM, 26 Nov

ಸಂಜೆ 5 ಗಂಟೆಗೆ ಸಿಎಂ ದೇವೇಂದ್ರ ಫಡ್ನವೀಸ್ ಅವರು ಸುದ್ದಿಗೋಷ್ಠಿ ಕರೆದಿದ್ದು, ಸುದ್ದಿಗೋಷ್ಠಿಯ ನಂತರ ಅಥವಾ ಅದಕ್ಕೂ ಮುನ್ನಾ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ.
2:51 PM, 26 Nov

ಅಜಿತ್ ಪವಾರ್ ರಾಜೀನಾಮೆ ಮೂಲಕ ಮಹಾರಾಷ್ಟ್ರ ಸರ್ಕಾರ ಪತನ ಶುರುವಾಗಿದೆ. ನಾಳೆ ಬಹುಮತ ಸಾಬೀತಿಗೆ ಸಮಯ ನಿಗದಿ ಮಾಡಲಾಗಿದ್ದು, ಅದಕ್ಕೆ ಮುನ್ನವೇ ಅಜಿತ್ ಪವಾರ್ ರಾಜೀನಾಮೆ ಸಲ್ಲಿಸಿದ್ದಾರೆ. ಇದೇ ಸಂಜೆ ಸಿಎಂ ದೇವೇಂದ್ರ ಫಡ್ನವೀಸ್ ಸಹ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ.
2:49 PM, 26 Nov

ಇಂದು ಬೆಳಿಗ್ಗೆಯಷ್ಟೆ ಶರದ್ ಪವಾರ್ ಅವರು ಅಜಿತ್ ಪವಾರ್ ಅವರನ್ನು ಭೇಟಿ ಆಗಿ ಪಕ್ಷಕ್ಕೆ ವಾಪಸ್ಸಾಗುವಂತೆ ಮನವಿ ಮಾಡಿದ್ದರು. ಅಜಿತ್ ಪವಾರ್ ಜೊತೆಗೆ ಹದಿಮೂರು ಎನ್‌ಸಿಪಿ ಬಂಡಾಯ ಶಾಸಕರನ್ನೂ ಸಹ ಶರದ್ ಪವಾರ್ ಇಂದು ಭೇಟಿ ಆಗಿದ್ದರು.
2:38 PM, 26 Nov

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ರಾಜೀನಾಮೆ ಸಲ್ಲಿಸಿದ್ದಾರೆ. ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದ ಅಜಿತ್ ಪವಾರ್ ಮೂರೇ ದಿನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
2:20 PM, 26 Nov

ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಸಂಜೆ ಐದು ಗಂಟೆಗೆ ಎನ್‌ಸಿಪಿ-ಶಿವಸೇನಾ-ಕಾಂಗ್ರೆಸ್ ಜಂಟಿ ಸುದ್ದಿಗೋಷ್ಠಿ ಕರೆದಿವೆ. ಮತ್ತೊಂದೆಡೆ ಬಿಜೆಪಿಯು ಇಂದು ರಾತ್ರಿ 9 ಗಂಟೆಗೆ ಸಭೆ ಕರೆದಿದೆ.
11:51 AM, 26 Nov

ಡಿಸಿಎಂ ಅಜಿತ್ ಪವಾರ್ ಅವರನ್ನು ಎನ್‌ಸಿಪಿಯ ಕೆಲ ಹಿರಿಯ ಸದಸ್ಯರು ಭೇಟಿ ಆಗಿ, ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎನ್‌ಸಿಪಿ ಗೆ ವಾಪಸ್ಸಾಗುವಂತೆ ಮನವಿ ಮಾಡಿದರು. ಈ ಭೇಟಿಯ ನಂತರ ಅಜಿತ್ ಪವಾರ್ ಅವರು ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿದರು.
11:50 AM, 26 Nov

ಕೇವಲ ಮೂವತ್ತು ನಿಮಿಷದಲ್ಲಿ ನಾವು ಬಹುಮತ ಸಾಬೀತು ಮಾಡುತ್ತೇವೆ ಎಂದು ಶಿವಸೇನಾ ಮುಖ್ಯಸ್ಥ ಸಂಜಯ್ ರಾವತ್ ಹೇಳಿದ್ದಾರೆ.
11:49 AM, 26 Nov

'ನಮ್ಮ ಬಳಿ ಬಹುಮತ ಇದೆ ನಾವದನ್ನು ನಾಳೆ ವಿಧಾನಸಭೆಯಲ್ಲಿ ಸಾಬೀತು ಮಾಡುತ್ತೇವೆ. ಅಲ್ಲಿಯೇ ಎಲ್ಲರೂ ನೋಡುತ್ತಾರೆ. ರಾಜ್ಯಪಾಲರು ನಿಯಮಕ್ಕೆ ಅನುಸಾರವಾಗಿಯೇ ನಡೆದುಕೊಂಡು ನಮಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದರು ಎಂಬುದನ್ನು ಸುಪ್ರೀಂ ಆದೇಶ ಎತ್ತಿ ಹಿಡಿದಿದೆ- ಬಿಜೆಪಿ
11:44 AM, 26 Nov

ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ವಿಧಾನಸಭೆಯ ಹಿರಿಯ ಶಾಸಕರು ನಡೆಸಿಕೊಡುವಂತೆ ಸುಪ್ರೀಂಕೋರ್ಟ್ ಹೇಳಿದೆ. ಯಾರು ಹಂಗಾಮಿ ಸ್ಪೀಕರ್ ಆಗಲಿದ್ದಾರೆ ಎಂಬ ಚರ್ಚೆ ಗರಿಗೆದರಿದ್ದು, ಎಂಟು ಬಾರಿ ವಿಧಾನಸಭೆಗೆ ಆಯ್ಕೆ ಆಗಿರುವ ಕಾಂಗ್ರೆಸ್‌ನ ಬಾಲಾಸಾಹೇಬ್ ತಾರೋಟ್ ಪ್ರಸ್ತುತ ಹಿರಿಯ ಶಾಸಕರಾಗಿದ್ದಾರೆ.
READ MORE

English summary
Maharashtra Government Formation Supreme Court verdict Live Updates in Kannada. Supreme Court ordered to conduct floor test in the assembly on November 27 before 5 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X