• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾರಾಷ್ಟ್ರದಲ್ಲಿ 5537 ಕೊರೊನಾ ಕೇಸ್, ದೆಹಲಿ, ತಮಿಳುನಾಡಿನಲ್ಲಿ ಎಷ್ಟು?

|

ದೆಹಲಿ, ಜುಲೈ 1: ಬುಧವಾರದ ಬೆಳಿಗ್ಗಿನ ವರದಿಯಂತೆ ಭಾರತದಲ್ಲಿ 5,85,493 ಜನರಿಗೆ ಕೊರೊನಾ ವೈರಸ್ ದೃಢಪಟ್ಟಿದೆ. ಬುಧವಾರ ಸಂಜೆ ವೇಳೆಗೆ ದೇಶದಲ್ಲಿ ಸೋಂಕಿನ ಪ್ರಮಾಣ ಮತ್ತಷ್ಟು ಏರಿಕೆಯಾಗಿದೆ.

   Health minister Sriramulu sent notice to 18 hospital which avoided Covid patient | Oneindia Kannada

   ಜುಲೈ 1ರಂದ ಸಂಜೆ ವೇಳೆಗೆ ಕರ್ನಾಟಕದಲ್ಲಿ 1272 ಮಂದಿಗೆ ಕೊವಿಡ್ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 16,514ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

   ಕರ್ನಾಟಕದಲ್ಲಿ Covid-19 ಸ್ಭೋಟ: 16514 ಮಂದಿಗೆ ಮಹಾಮಾರಿ ಅಂಟು!

   ಇನ್ನುಳಿದಂತೆ ದೇಶದ ಕೊರೊನಾ ಹಾಟ್‌ಸ್ಪಾಟ್‌ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಪಶ್ಚಿಮ ಬಂಗಾಳ, ಕೇರಳ ಸೇರಿದಂತೆ ಇತರೆ ರಾಜ್ಯಗಳಲ್ಲಿ ಇಂದು ಎಷ್ಟು ಕೇಸ್ ಪತ್ತೆಯಾಗಿದೆ. ಮುಂದಿದೆ ವಿವರ.

   ಮಹಾರಾಷ್ಟ್ರದಲ್ಲಿ 5 ಸಾವಿರ ಗಡಿ ದಾಟಿದೆ

   ಮಹಾರಾಷ್ಟ್ರದಲ್ಲಿ 5 ಸಾವಿರ ಗಡಿ ದಾಟಿದೆ

   - ಮಹಾರಾಷ್ಟ್ರದಲ್ಲಿ ಇಂದು 5537 ಮಂದಿಗೆ ಕೊರೊನಾ ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,80,298ಕ್ಕೆ ಜಿಗಿದಿದೆ. ಕಳೆದ 24 ಗಂಟೆಯಲ್ಲಿ 198 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು 8053 ಜನರು ಸಾವನ್ನಪ್ಪಿದ್ದಾರೆ.

   - ಆಂಧ್ರಪ್ರದೇಶ: ರಾಜ್ಯದಲ್ಲಿ ಹೊಸ 657 ಕೋವಿಡ್-19 ಕೇಸ್‌ಗಳು ಪತ್ತೆಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 15,000 ಗಡಿದಾಟಿದೆ.

   - ತೆಲಂಗಾಣದಲ್ಲಿ ಇಂದು 1018 ಜನರಿಗೆ ಕೊವಿಡ್ ತಗುಲಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 17,357ಕ್ಕೆ ಏರಿಕೆಯಾಗಿದೆ.

   ತಮಿಳುನಾಡಿನಲ್ಲಿ 3882 ಮಂದಿಗೆ ಕೊರೊನಾ

   ತಮಿಳುನಾಡಿನಲ್ಲಿ 3882 ಮಂದಿಗೆ ಕೊರೊನಾ

   - ತಮಿಳುನಾಡಿನಲ್ಲಿ 3882 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 94049ಕ್ಕೆ ಏರಿಕೆಯಾಗಿದೆ.

   - ಕೇರಳದಲ್ಲಿ ಒಂದೇ ದಿನ 151 ಮಂದಿಗೆ ಕೊರೊನಾ ವೈರಸ್ ಸೋಂಕು ಅಂಟಿಕೊಂಡಿರುವುದು ವೈದ್ಯಕೀಯ ತಪಾಸಣೆ ವೇಳೆ ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4593ಕ್ಕೆ ಏರಿಕೆಯಾಗಿದೆ.

   - ಮಣಿಪುರದಲ್ಲಿ ಹೊಸದಾಗಿ 26 ಜನರಿಗೆ ಕೊವಿಡ್ ಸೋಂಕು ದೃಢವಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,260ಕ್ಕೆ ಜಿಗಿದಿದೆ.

   ಲಾಕ್ ಡೌನ್ ಹೊರತಾಗಿ ಯಡಿಯೂರಪ್ಪ ಮುಂದಿರುವ '3 ಆಯ್ಕೆಗಳು'

   ದೆಹಲಿಯಲ್ಲಿ 2442 ಕೇಸ್ ಪತ್ತೆ

   ದೆಹಲಿಯಲ್ಲಿ 2442 ಕೇಸ್ ಪತ್ತೆ

   - ದೆಹಲಿಯಲ್ಲಿ 2442 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ರಾಷ್ಟ್ರರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 89802ಕ್ಕೆ ಏರಿದೆ. ಪ್ರಸ್ತುತ 27007 ಕೇಸ್ ಸಕ್ರಿಯವಾಗಿದೆ.

   - ರಾಜಸ್ಥಾನದಲ್ಲಿ ಹೊಸದಾಗಿ 298 ಮಂದಿಗೆ ಕೊವಿಡ್ ತಗುಲಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18312ಕ್ಕೆ ಏರಿದೆ.

   - ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ 611 ಮಂದಿಗೆ ಕೊರೊನಾ ವೈರಸ್ ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ 19,170ಕ್ಕೆ ಏರಿಕೆಯಾಗಿದೆ. ಈವರೆಗೂ ರಾಜ್ಯದಲ್ಲಿ 683 ಮಂದಿ ಮೃತಪಟ್ಟಿದ್ದಾರೆ.

   ಗುಜರಾತ್‌ನಲ್ಲಿ ಇಂದು ಎಷ್ಟು ಕೇಸ್?

   ಗುಜರಾತ್‌ನಲ್ಲಿ ಇಂದು ಎಷ್ಟು ಕೇಸ್?

   - ಗುಜರಾತ್‌ನಲ್ಲಿ ಇಂದು 675 ಮಂದಿಗೆ ಕೊವಿಡ್ ತಗುಲಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 33,318ಕ್ಕೆ ಜಿಗಿದಿದೆ.

   - ಜಮ್ಮು ಕಾಶ್ಮೀರದಲ್ಲಿ ಇಂದು 198 ಜನರಿಗೆ ಕೊರೊನಾ ಸೋಂಕು ಖಚಿತವಾಗಿದೆ. ಈ ಮೂಲಕ ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು ಕೇಸ್‌ನ ಸಂಖ್ಯೆ 7695ಕ್ಕೆ ಜಿಗಿದಿದೆ.

   - ಉತ್ತರಾಖಂಡದಲ್ಲಿ ಇಂದು 66 ಜನರಿಗೆ ಕೊರೊನಾ ಕೇಸ್ ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2947ಕ್ಕೆ ಏರಿಕೆಯಾಗಿದೆ.

   ಪಂಜಾಬ್‌ನಲ್ಲಿ ಎಷ್ಟು ಸೋಂಕು ವರದಿ?

   ಪಂಜಾಬ್‌ನಲ್ಲಿ ಎಷ್ಟು ಸೋಂಕು ವರದಿ?

   - ಪಂಜಾಬ್‌ನಲ್ಲಿ ಹೊಸದಾಗಿ 101 ಜನರಿಗೆ ಕೊವಿಡ್ ತಗುಲಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,668ಕ್ಕೆ ಏರಿಕೆಯಾಗಿದೆ.

   - ಹಿಮಾಚಲ ಪ್ರದೇಶದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 960ಕ್ಕೆ ಏರಿಕೆಯಾಗಿದೆ.

   - ಹರ್ಯಾಣದಲ್ಲಿ ಇಂದು 393 ಜನರಿಗೆ ಕೊವಿಡ್ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14,941ಕ್ಕೆ ಏರಿಕೆಯಾಗಿದೆ.

   English summary
   5,537 new COVID19 cases reported in Maharashtra today. Delhi records 2,442 fresh COVID-19 cases, Tamil Nadu reports 3,882 new COVID19 positive cases today.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X