ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಮೈತ್ರಿಕೂಟ ದೇಶದ ಜನತೆಗೆ ವಿರುದ್ಧ: ನರೇಂದ್ರ ಮೋದಿ

|
Google Oneindia Kannada News

ನವದೆಹಲಿ, ಜನವರಿ 19: ವಿರೋಧ ಪಕ್ಷಗಳೆಲ್ಲ ಪಶ್ಚಿಮ ಬಂಗಾಳದಲ್ಲಿ ಟಿಎಂಟಿಯ ಮೆಗಾ rallyಯಲ್ಲಿ ಶನಿವಾರ ತಮ್ಮ ಶಕ್ತಿ ಸಾಮರ್ಥ್ಯದ ಪ್ರದರ್ಶನ ಮಾಡುತ್ತಿವೆ. ಈ ಮಹಾಮೈತ್ರಿಕೂಟವು ಬಿಜೆಪಿ ಮಾತ್ರವಲ್ಲ ದೇಶದ ಜನತೆಗೆ ವಿರುದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಾಖ್ಯಾನಿಸಿದ್ದಾರೆ.

ಮಹಾಘಟಬಂಧನ Rally LIVE: ಮೋದಿ ಸರ್ಕಾರದ ವಿರುದ್ಧ ಹೂಂಕರಿಸಿದ ಮಮತಾಮಹಾಘಟಬಂಧನ Rally LIVE: ಮೋದಿ ಸರ್ಕಾರದ ವಿರುದ್ಧ ಹೂಂಕರಿಸಿದ ಮಮತಾ

ಗುಜರಾತ್‌ನ ಬುಡಕಟ್ಟು ಪಟ್ಟಣ ಸಿಲ್ವಾಸಾದಲ್ಲಿ ಮಾತನಾಡಿದ ಅವರು, ಮಹಾಮೈತ್ರಿಕೂಟವು ದೇಶವನ್ನು ಲೂಟಿ ಮಾಡುವುದನ್ನು ತಾವು ತಡೆದಿದ್ದ ಜನರ ಒಕ್ಕೂಟವಾಗಿದೆ ಎಂದು ಲೇವಡಿ ಮಾಡಿದ್ದಾರೆ.

ಮಹಾಘಟಬಂಧನಕ್ಕೆ ಎಚ್ಚರಿಕೆ ಮಾತುಗಳನ್ನು ಹೇಳಿದ ದೇವೇಗೌಡಮಹಾಘಟಬಂಧನಕ್ಕೆ ಎಚ್ಚರಿಕೆ ಮಾತುಗಳನ್ನು ಹೇಳಿದ ದೇವೇಗೌಡ

'ಕಾಂಗ್ರೆಸ್ಅನ್ನು ಟೀಕಿಸುತ್ತಿದ್ದವರು ಇಂದು ಅವರ ಜೊತೆಗೂಡಿದ್ದಾರೆ. ಈ ಮಹಾಘಟಬಂಧನವು ಬಿಜೆಪಿ ಮಾತ್ರವಲ್ಲ, ಭಾರತದ ಜನತೆಯ ವಿರುದ್ಧವೂ ಆಗಿದೆ. ಇನ್ನೂ ಅವರಲ್ಲಿ ಎಲ್ಲರೂ ವೇದಿಕೆಗೆ ಬಂದಿಲ್ಲ. ಆದರೆ, ಈಗಲೇ 'ಡೀಲ್‌ಗಳು' ಈಗಾಗಲೇ ಶುರುವಾಗಿವೆ' ಎಂದು ವಾಗ್ದಾಳಿ ನಡೆಸಿದ್ದಾರೆ.

ಪುರುಷರು, ಮಹಿಳೆಯರು ಮತ್ತು ಮೊದಲ ಬಾರಿ ಮತದಾನ ಮಾಡುತ್ತಿರುವವರು ವಿರೋಧಪಕ್ಷದ ನಾಯಕರನ್ನು ಸಮೀಪದಿಂದ ಗಮನಿಸುತ್ತಿದ್ದಾರೆ. ಅವರಿಗೆ ನಿಜವಾದ ಜಗಳ ಕಾಣಿಸುತ್ತಿದೆ.

ಸಕಾರಾತ್ಮಕ ಆಲೋಚನೆ ಮತ್ತು ನಕಾರಾತ್ಮಕ ಮನೋಭಾವಗಳ ನಡುವೆ ಈ ಕಾದಾಟ. ಅಭಿವೃದ್ಧಿ ಮತ್ತು ಭ್ರಷ್ಟಾಚಾರಗಳ ನಡುವೆ ಈ ಕಾದಾಟ. ಸಾರ್ವಜನಿಕ ಮತ್ತು ಸಾಮಾನ್ಯ ಪಕ್ಷಗಳ ನಡುವೆ ಈ ಕಾದಾಟ ಎಂದು ಮೋದಿ ಬಣ್ಣಿಸಿದ್ದಾರೆ.

Mahagathbadhan is against the people of India narendra modi at silvassa

ತಾವು ತೆಗೆದುಕೊಂಡ ಕ್ರಮಗಳ ಪರಿಣಾಮಗಳು ಕೆಲವರನ್ನು ಕೆರಳಿಸಿದೆ. ಸಾರ್ವಜನಿಕರ ಹಣವನ್ನು ಕೊಳ್ಳೆ ಹೊಡೆಯುವುದನ್ನು ನಾನು ತಡೆದಾಗ ಅವರಿಗೆ ಸಿಟ್ಟು ಬರುವುದು ಸಹಜ. ಇದರ ಪರಿಣಾಮವಾಗಿ ಅವರು ಈಗ ಮಹಾಘಟಬಂಧನ್ ಎಂಬ ಮೈತ್ರಿಕೂಟ ರಚಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಮಹಾಘಟಬಂಧನ ರ‍್ಯಾಲಿಯಲ್ಲಿ ಮೋದಿ ಮೇಲೆ ಹಾರ್ದಿಕ್ ವಾಗ್ದಾಳಿಮಹಾಘಟಬಂಧನ ರ‍್ಯಾಲಿಯಲ್ಲಿ ಮೋದಿ ಮೇಲೆ ಹಾರ್ದಿಕ್ ವಾಗ್ದಾಳಿ

ಪಶ್ಚಿಮ ಬಂಗಾಳದಲ್ಲಿ ಆಯ್ಕೆಯಾಗಿರುವ ಬಿಜೆಪಿಯ ಏಕೈಕ ಶಾಸಕ ವಿರೋಧಪಕ್ಷಗಳಿಗೆ ನಿದ್ದೆ ಇಲ್ಲದೆ ರಾತ್ರಿ ಕಳೆಯುವಂತೆ ಮಾಡಿದ್ದಾರೆ ಎಂದು ಮೋದಿ ಲೇವಡಿ ಮಾಡಿದ್ದಾರೆ.

'ಬಂಗಾಳದಲ್ಲಿ ಬಿಜೆಪಿಯ ಒಬ್ಬರೇ ಒಬ್ಬ ಶಾಸಕರಿದ್ದಾರೆ. ಆದರೆ, ಒಬ್ಬ ಶಾಸಕನ ಪಕ್ಷದ ವಿರುದ್ಧ ಸ್ಪರ್ಧಿಸಲು ಎಲ್ಲ ಪಕ್ಷಗಳೂ ಒಂದುಗೂಡಿ ಸಹಾಯ ಕೇಳುತ್ತಿವೆ. ಈ ಜನರಿಗೆ ಒಬ್ಬ ಶಾಸಕ ನಿದ್ದೆಗಳಿಲ್ಲದ ರಾತ್ರಿಯನ್ನು ನೀಡಿದ್ದಾರೆ' ಎಂದು ಮೋದಿ ಹೇಳಿದ್ದಾರೆ.

English summary
Prime Minister Narendra Modi on Saturday said that, those who used to criticise Congress have come together and made Mahagathbandhan, This grand alliance is not against BJP, but it is against the people of India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X