ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಡೆ ಮಡೆ ಸ್ನಾನ: ಹೈ ಆದೇಶಕ್ಕೆ ಸುಪ್ರೀಂ ಮಧ್ಯಂತರ ತಡೆ

By Kiran B Hegde
|
Google Oneindia Kannada News

ನವದೆಹಲಿ, ಡಿ. 12: ಮಡೆ ಮಡೆ ಸ್ನಾನ ಆಚರಣೆಗೆ ಹಸಿರು ನಿಶಾನೆ ತೋರಿಸಿ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಹೈ ಕೋರ್ಟ್ ಇದೇ ವರ್ಷ ನವೆಂಬರ್ 19ರಂದು ಮಡೆ ಮಡೆ ಸ್ನಾನಕ್ಕೆ ಹಸಿರು ನಿಶಾನೆ ತೋರಿ ಆದೇಶ ನೀಡಿತ್ತು. ಇದಕ್ಕೂ ಮೊದಲು ಮಡೆ ಮಡೆ ಸ್ನಾನವನ್ನು ಹೈ ಕೋರ್ಟ್ ನಿಷೇಧಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. [ಮಡೆ ಸ್ನಾನಕ್ಕೆ ಹೈ ಕೋರ್ಟ್ ಗ್ರೀನ್ ಸಿಗ್ನಲ್]

made

ಮಡೆಸ್ನಾನ ಪದ್ದತಿ ಸುಮಾರು 400 ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದು ಕುಕ್ಕೇ ಅಥವಾ ಉಡುಪಿ ದೇವಾಲಯದ ಸೇವಾಪಟ್ಟಿಯಲ್ಲಿರದ ಸೇವೆ. ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರೂ ಈ ಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂಬ ವಾದಕ್ಕೆ ಮನ್ನಣೆ ನೀಡಿದ್ದ ಹೈಕೋರ್ಟ್ ನಿಷೇಧ ತೆರವುಗೊಳಿಸಿತ್ತು. [ನಮ್ಮದು ಒತ್ತಾಯದ ಬೇಡಿಕೆಯಲ್ಲ, ಕಳಕಳಿಯ ಮನವಿ]

ಪ್ರತಿವಾದಿಗಳಿಗೆ ನೋಟಿಸ್: ಇದರಿಂದ ಅನಿವಾರ್ಯವಾಗಿ ಮಡೆ ಮಡೆ ಸ್ನಾನ ವಿರೋಧಿ ಗುಂಪು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಮಡೆ ಮಡೆ 500 ವರ್ಷಗಳಿಂದ ನಡೆಯುತ್ತಿದೆ ಎಂಬ ಕಾರಣದಿಂದ ಮುಂದುವರಿಸುವುದು ಸಾಧ್ಯವಿಲ್ಲ ಎಂದು ಹೇಳಿದೆ. [ಮಡೆಸ್ನಾನ : ಸುಪ್ರೀಂ ಕೋರ್ಟ್ ತೀರ್ಪು]

ಅಸ್ಪ್ರಶ್ಯತೆಯೂ ಸಾವಿರಾರು ವರ್ಷಗಳಿಂದ ಜಾರಿಯಲ್ಲಿದೆ. ಹಾಗೆಂದು ಅದನ್ನೂ ಮುಂದುವರಿಸಬೇಕೇ ಎಂದು ಸುಪ್ರೀಂ ಕೋರ್ಟ್ ಮಧ್ಯಂತರ ತಡೆಯಾಜ್ಞೆಯಲ್ಲಿ ಪ್ರಶ್ನಿಸಿದೆ. ಅಲ್ಲದೆ, ಮಡೆ ಮಡೆ ಸ್ನಾನ ಪ್ರಕರಣದ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. [ಮಡೆಸ್ನಾನದಲ್ಲಿ ಬ್ರಾಹ್ಮಣರೂ ಇದ್ರು]

English summary
Supreme Court has given interim stay order to order of High Court regarding Made Snana ritual. Karnataka High court had given green signal to Made Made snana on November 19. Earlier Supreme Court had issued stay order to controversial Made Snana in Kukke Subramanya temple in Dakshina Kannada district of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X