ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ಸರಕುಗಳು ಪರಿಸರ ವಿನಾಶಕಾರಿಗಳಂತೆ!

By Vanitha
|
Google Oneindia Kannada News

ನವದೆಹಲಿ, ಸೆಪ್ಟೆಂಬರ್, 30 : ಚೀನಾ ದೇಶದಿಂದ ಉತ್ಪಾದನೆಯಾಗುವ ಸರಕುಗಳು ಪರಿಸರ ಸ್ನೇಹಿಯಲ್ಲ. ಇವು ಅತ್ಯಂತ ವಿಷಕಾರಿಯಾದವುಗಳು ಎಂದು ಸಂಶೋಧನಾ ವರದಿಯೊಂದು ಹೇಳಿದೆ.

ಅಭಿವೃದ್ದಿ ಹೊಂದಿರುವ ದೇಶಗಳ ಸಾಲಿನಲ್ಲಿ ನಿಂತ ಚೀನಾದ ಉತ್ಪಾದನಾ ಸರಕುಗಳು ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ಅಧಿಕವಾಗಿ ಒಳಗೊಂಡಿದೆ. ಪರಿಸರ ನಾಶಕ್ಕೆ ಕಾರಣವಾಗುವ ಎಲ್ಲಾ ಗುಣಗಳು ಇದರಲ್ಲಿದೆ ಎಂಬ ಅಂಶ ಕ್ಯಾಲೀಫೋರ್ನಿಯಾ ಸಂಶೋಧಕರು ಕೈಗೊಂಡ ಅಧ್ಯಯನದಿಂದ ತಿಳಿದು ಬಂದಿದೆ.[ಆರ್ಥಿಕ ಅಭಿವೃದ್ಧಿ ದರ: ಚೀನಾ ಹಿಂದಿಕ್ಕಿದ ಭಾರತ]

Made in China' products are harmful for environment: Study

ಚೀನಾ ದೇಶದ ವಸ್ತುಗಳಿಗೆ ಭಾರೀ ಬೇಡಿಕೆ ಇದೆ . ಆದರೆ ಇಲ್ಲಿರುವ ಕಳಪೆ ಕೈಗಾರಿಕೆಗಳಿಂದಾಗಿ ಈ ದೇಶದ ಸರಕುಗಳು ಪರಿಸರ ಸ್ನೇಹಿ ಎಂಬ ಹೆಸರಿನಿಂದ ದೂರ ಉಳಿದಿದೆ. ಸ್ಟೀಲ್ ಗಿರಣಿಗಳು, ಮಿನರಲ್ ಸಂಸ್ಕಾರಕಗಳು, ಪೆಟ್ರೋಕೆಮಿಕಲ್ ಪ್ಲಾಟ್ಸ್, ನಿಂಗ್ಸಿಯಾ ಇನ್ನಿತರ ಹಳೆಯ ಕೈಗಾರಿಕಾ ಘಟಕಗಳೇ ಪರಿಸರ ವಿರೋಧಿ ರಾಸಾಯನಿಕ ಉತ್ಪತ್ತಿಗೆ ಮುಖ್ಯ ಕಾರಣ ಎಂದು ಭೌಗೋಳಿಕ ಶಾಸ್ತ್ರದ ಪ್ರಾಧ್ಯಾಪಕ ಹಾಗೂ ಸಹ ಲೇಖಕರಾದ ಕ್ಲೌಸ್ ಹ್ಯೂಬೇಕ್ ಹೇಳಿದ್ದಾರೆ.

ಈ ಸಂಶೋಧನೆಯ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಿದ ಡೇವಿಸ್ ಮತ್ತು ಅವರ ಸಹೋದ್ಯೋಗಿಗಳು 'ಅಭಿವೃದ್ಧಿ ಹೊಂದಿದ ದೇಶಗಳು ಹೆಚ್ಚಾದ ಕಾರ್ಬನ್ ಮಾಲಿನ್ಯವನ್ನು ನಿವಾರಣೆ ಮಾಡಿಕೊಂಡಲ್ಲಿ ಉತ್ಪಾದನಾ ಪ್ರಕ್ರಿಯೆಯನ್ನು ಉತ್ತಮಗೊಳಿಸಲು ಸಹಾಯಕವಾಗಲಿದೆ' ಎಂದು ಸಲಹೆ ನೀಡಿದ್ದಾರೆ.

English summary
Goods made in China may cost us less but they are actually bad for the environment and harm it.These products are associated with significantly higher carbon dioxide (CO2) emissions.Goods made in China may cost us less but they are actually bad for the environment and harm it.These products are associated with significantly higher carbon dioxide (CO2) emissions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X