ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಲುಫ್ತಾನ್ಸಾ ವಿಮಾನ ರದ್ದು; ದೆಹಲಿಯಲ್ಲಿ ಪ್ರಯಾಣಿಕರ ಪರದಾಟ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 2: ಲುಫ್ತಾನ್ಸಾ ವಿಮಾನಯಾನ ಸಂಸ್ಥೆ ಪೈಲಟ್ ಮುಷ್ಕರದಿಂದಾಗಿ ಶುಕ್ರವಾರದಂದು ವಿಮಾನಗಳ ಹಾರಾಟ ರದ್ದು ಮಾಡಲಾಗಿದ್ದು, ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಪ್ರಯಾಣಿಕರು ಪರದಾಡಿದ್ದಾರೆ.

ಪೈಲಟ್‌ಗಳ ಮುಷ್ಕರದಿಂದಾಗಿ ಜರ್ಮನಿಯ ಫ್ಲ್ಯಾಗ್ ಕ್ಯಾರಿಯರ್ ಲುಫ್ತಾನ್ಸಾ ಏರ್‌ಲೈನ್ಸ್ ಜಾಗತಿಕವಾಗಿ 800 ವಿಮಾನಗಳನ್ನು ರದ್ದುಗೊಳಿಸಿದೆ, ಇದರ ಪರಿಣಾಮವಾಗಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (IGIA) T3 ಟರ್ಮಿನಲ್‌ನಲ್ಲಿ ಸುಮಾರು 700 ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ.

ಪೈಲಟ್‌ಗಳ ಮುಷ್ಕರ: ಲುಫ್ತಾನ್ಸಾ ಏರ್‌ಲೈನ್ಸ್ ಸಂಚಾರದಲ್ಲಿ ವ್ಯತ್ಯಯಪೈಲಟ್‌ಗಳ ಮುಷ್ಕರ: ಲುಫ್ತಾನ್ಸಾ ಏರ್‌ಲೈನ್ಸ್ ಸಂಚಾರದಲ್ಲಿ ವ್ಯತ್ಯಯ

ವಿಮಾನಗಳ ರದ್ದತಿಯನ್ನು ಘೋಷಿಸಿದ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3 ರ ನಿರ್ಗಮನ ಗೇಟ್ 1 ರ ಮುಂಭಾಗದ ಮುಖ್ಯ ರಸ್ತೆಯಲ್ಲಿ ಪ್ರಯಾಣಿಕರು ಮತ್ತು ಅವರ ಸಂಬಂಧಿಕರು ಶುಕ್ರವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ.

ಹಣವನ್ನು ಮರುಪಾವತಿಸಲು ಅಥವಾ ಅವರ ಪರ್ಯಾಯ ವಿಮಾನಗಳನ್ನು ನೀಡಬೇಕು ಎಂದು ಒತ್ತಾಯಿಸಿದರು. ಜನಸಂದಣಿಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಿಐಎಸ್ಎಫ್ ಮತ್ತು ಐಜಿಐ ವಿಮಾನ ನಿಲ್ದಾಣದ ಸಿಬ್ಬಂದಿ ಸಹಾಯದಿಂದ ಪರಿಸ್ಥಿತಿಯನ್ನು ನಿಭಾಯಿಸಲಾಯಿತು ಮತ್ತು ಜನರನ್ನು ಚದುರಿಸಲಾಗಿದೆ ಎಂದು ವಿಮಾನ ನಿಲ್ದಾಣದ ಪೊಲೀಸರು ತಿಳಿಸಿದ್ದಾರೆ.

Lufthansa flight cancellation: Massive crowd gathers outside Delhi Airport

ದೆಹಲಿ ವಿಮಾನ ನಿಲ್ದಾಣದಲ್ಲಿ ಮಧ್ಯರಾತ್ರಿ 12.15ಕ್ಕೆ ಮಾಹಿತಿ ಬಂದಿದ್ದು, ಡಿಪಾರ್ಚರ್ ಗೇಟ್ ನಂ. 1 ಟರ್ಮಿನಲ್ 3ರ ಮುಖ್ಯ ರಸ್ತೆಯಲ್ಲಿ ಜನ ಜಮಾಯಿಸಿದ್ದಾರೆ ಎಂದು ತಿಳಿಸಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿದಾಗ ಸುಮಾರು 150 ಮಂದಿ ಇದ್ದರು ಎಂದು ತಿಳಿದುಬಂದಿದೆ.

ಲುಫ್ತಾನ್ಸಾ ಏರ್‌ಲೈನ್ ದೆಹಲಿಯಿಂದ ಫ್ರಾಂಕ್‌ಫರ್ಟ್ ಮತ್ತು ಮ್ಯೂನಿಚ್‌ಗೆ ಎರಡು ವಿಮಾನಗಳನ್ನು ನೀಡುತ್ತದೆ. ಎರಡು ವಿಮಾನಗಳು ಶುಕ್ರವಾರ ರದ್ದುಗೊಂಡಿದೆ. ಇನ್ನು ದೆಹಲಿಯಲ್ಲಿ ವಿಮಾನಯಾನ ಸಂಸ್ಥೆಗಳಿಂದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಡಿಸಿಪಿ ಉಲ್ಲೇಖಿಸಿದ್ದಾರೆ.

ಜರ್ಮನಿಯ ವಿಮಾನಯಾನ ಸಂಸ್ಥೆ ಲುಫ್ತಾನ್ಸಾದ ಪೈಲಟ್‌ಗಳು ಮುಷ್ಕರ ಘೋಷಿಸಿದ್ದಾರೆ. ವೇತನ ವಿವಾದ, ಸಿಬ್ಬಂದಿಗಳ ಸರಣಿ ರಜೆ ಜೊತೆಗೆ ಮುಷ್ಕರದಿಂದಾಗಿ ವಿಮಾನಯಾನ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ. ಲಕ್ಷಾಂತರ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ.

ಲುಫ್ತಾನ್ಸಾ ಏರ್‌ಲೈನ್ಸ್ 800 ವಿಮಾನಗಳನ್ನು ಜಾಗತಿಕವಾಗಿ ರದ್ದುಗೊಳಿಸಿದೆ. ಇದರಿಂದ 1, 30,000 ಪ್ರಯಾಣಿಕರ ಮೇಲೆ ಪರಿಣಾಮ ಬೀರುತ್ತದೆ ಎಂದು ಲುಫ್ಥಾನ್ಸ ಏರ್‌ಲೈನ್ಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಪೈಲಟ್‌ಗಳ ಒಕ್ಕೂಟ ವೆರೆನಿಗುಂಗ್ ಕಾಕ್‌ಪಿಟ್‌ನ(VC) 5,000 ಕ್ಕೂ ಹೆಚ್ಚು ಪೈಲಟ್‌ಗಳು ಈ ವರ್ಷ 5.5% ವೇತನ ಹೆಚ್ಚಳವನ್ನು ಆಗ್ರಹಿಸಿದ್ದಾರೆ. ಆದರೆ ಸಂಸ್ಥೆ ಜೊತೆ ನಡೆದ ಸಭೆಗಳು ವಿಫಲವಾಗಿವೆ ಎಂದು ಒಕ್ಕೂಟದ ಮುಖ್ಯಸ್ಥರು ಹೇಳಿದರು. ಮುಷ್ಕರದಿಂದಾಗಿ ಪ್ರಯಾಣಿಕರ ವಿಮಾನಯಾನವಲ್ಲದೆ ಸರಕು ವಿಮಾನಗಳ ಮೇಲೂ ಪರಿಣಾಮ ಬೀರಲಿದೆ.

English summary
Lufthansa flight cancellation: Massive crowd gathers outside Delhi Airport demanding a refund. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X