ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಸೀಟು ಹಂಚಿಕೆ: ದೆಹಲಿಯಲ್ಲಿ ದೇವೇಗೌಡ-ರಾಹುಲ್ ಗಾಂಧಿ ಭೇಟಿ

|
Google Oneindia Kannada News

Recommended Video

Lok Sabha Elections 2019: ಲೋಕಸಭೆ ಸೀಟು ಹಂಚಿಕೆ: ದೆಹಲಿಯಲ್ಲಿ ದೇವೇಗೌಡ-ರಾಹುಲ್ ಗಾಂಧಿ ಭೇಟಿ |Oneindia Kannada

ನವದೆಹಲಿ, ಮಾರ್ಚ್ 06: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಬುಧವಾರ ದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಎಚ್ ಡಿ ದೇವೇಗೌಡ ಭೇಟಿಯಾಗಿದ್ದಾರೆ.

ಕೈ-ತೆನೆ ಮೈತ್ರಿಯಾದರೆ ಮೈಸೂರಿನಿಂದ ದೇವೇಗೌಡರೇ ಅಭ್ಯರ್ಥಿ:ಜಿಟಿಡಿಕೈ-ತೆನೆ ಮೈತ್ರಿಯಾದರೆ ಮೈಸೂರಿನಿಂದ ದೇವೇಗೌಡರೇ ಅಭ್ಯರ್ಥಿ:ಜಿಟಿಡಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ದೆಹಲಿಯಲ್ಲಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ನಿವಾಸದಲ್ಲಿ ಅವರನ್ನು ಭೇಟಿಯಾಗಿದ್ದು, ಉಭಯ ನಾಯಕರೂ ಸಭೆ ನಡೆಸಲಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ದೇವೇಗೌಡರ ಹಸಿರು ನಿಶಾನೆ?ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ದೇವೇಗೌಡರ ಹಸಿರು ನಿಶಾನೆ?

ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ 12 ರಲ್ಲಿ ತಾನು ಕಣಕ್ಕಿಳಿಯುವುದಾಗಿ ಈಗಾಗಲೇ ಜೆಡಿಎಸ್ ಕಾಂಗ್ರೆಸ್ ಅನ್ನು ಒತ್ತಾಯಿಸುತ್ತಿದೆ. ಆದರೆ ಕಾಂಗ್ರೆಸ್ ಅದಕ್ಕೆ ಗ್ರೀನ್ ಸಿಗ್ನಲ್ ನೀಡುವುದು ಅನುಮಾನ.

LS polls seat sharing in Karnataka: Rahul Gandhi meets HD Deve Gowda

ಹಾಸನ, ಮಂಡ್ಯ, ಬೆಂಗಳೂರು ಉತ್ತರ, ಶಿವಮೊಗ್ಗ, ಮೈಸೂರು, ವಿಜಯಪುರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಚಿತ್ರದುರ್ಗ, ರಾಯಚೂರು ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲು ಚಿಂತಿಸಿದೆ ಎನ್ನಲಾಗಿದೆ.

ಮಂಡ್ಯದಿಂದ ಸ್ಪರ್ಧೆ: ಎಲ್ಲಾ ಸುದ್ದಿಗಳಿಗೆ ತೆರೆ ಎಳೆದ ನಿಖಿಲ್ ಕುಮಾರಸ್ವಾಮಿಮಂಡ್ಯದಿಂದ ಸ್ಪರ್ಧೆ: ಎಲ್ಲಾ ಸುದ್ದಿಗಳಿಗೆ ತೆರೆ ಎಳೆದ ನಿಖಿಲ್ ಕುಮಾರಸ್ವಾಮಿ

ಜೆಡಿಎಸ್ ಬೇಡಿಕೆಗೆ ಕಾಂಗ್ರೆಸ್ ಒಪ್ಪಿಗೆ ಸೂಚಿಸುತ್ತದಾ ಎಂಬುದು ಇಂದು ಸಂಜೆಯ ಹೊತ್ತಿಗೆ ತಿಳಿಯಲಿದೆ. ಇದರೊಟ್ಟಿಗೆ ಮಾರ್ಚ್ 10 ರಂದು ಕಾಂಗ್ರೆಸ್ ತನ್ನೆಲ್ಲ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಸಾಧದ್ಯತೆ ಇದೆ.

English summary
Congress President Rahul Gandhi meets former Prime Minister and JDS leader HD Deve Gowda in his Delhi resedence, to hold discussions on the issue of seat-sharing in Karnataka for the coming Lok Sabha Elections,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X