ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛೆ, ಛೆ, ಈ ಬಾರಿನೂ ರಮ್ಯಾ ಮತಹಾಕಿಲ್ವಂತೆ, ಸರೀನಾ ನೀವೇ ಹೇಳಿ!?

|
Google Oneindia Kannada News

Recommended Video

ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಈ ಬಾರಿ ಕೂಡ ಮತ ಚಲಾಯಿಸಲಿಲ್ಲ | Lok Sabha Elections 2019

"Every vote matters" ಎಂದು ಏಪ್ರಿಲ್ 17 ರಂದು ನಟಿ, ಕಾಂಗ್ರೆಸ್ ನ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿದ್ದು ನೋಡಿ, 'ಸದ್ಯ, ಈ ಬಾರಿನಾದ್ರೂ ಮಾಜಿ ಸಂಸದೆ ವೋಟ್ ಮಾಡ್ತಾರೆ' ಎಂದುಕೊಂಡಿದ್ದ ಜನರಿಗೆ ಭಾರೀ ನಿರಾಸೆಯಾಗಿದೆ. ಮಾಡಿದ್ದು ಟ್ವೀಟ್ ಅಷ್ಟೆ, ವೋಟ್ ಅಲ್ಲ!

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹೌದು, ಈ ಬಾರಿಯೂ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಮತ ಚಲಾಯಿಸಿಲ್ಲ. ಮಂಡ್ಯದಲ್ಲಿ ಮತದಾನದ ಹಕ್ಕು ಪಡೆದಿದ್ದ ರಮ್ಯಾ, ಗುರುವಾರ ನಡೆದ ಮೊದಲ ಹಂತದ ಚುನಾವಣೆಗೆ ಬಂದು ಮತ ಚಲಾಯಿಸಲೇ ಇಲ್ಲ!

ಪ್ರಚಾರದ ತಲೆಬಿಸಿಯಲ್ಲಿ ಮತ ಹಾಕುವುದನ್ನೇ ಮರೆತ ವಿ ಎಸ್ ಉಗ್ರಪ್ಪ!ಪ್ರಚಾರದ ತಲೆಬಿಸಿಯಲ್ಲಿ ಮತ ಹಾಕುವುದನ್ನೇ ಮರೆತ ವಿ ಎಸ್ ಉಗ್ರಪ್ಪ!

ರಮ್ಯಾ ಅವರು ಇದೇ ಮೊದಲೇನಲ್ಲ, ಮಂಡ್ಯ ಉಪಚುನಾವಣೆ ಸಮಯದಲ್ಲಿ, ಕಳೆದ ಬಾರಿಯ ವಿಧಾನಸಭೆ ಚುನಾವಣೆಯ ಸಮಯದಲ್ಲೂ ದೆಹಲಿಯಿಂದ ಈಚೆ ಬರುವ ಯೋಚನೆಯನ್ನೇ ಮಾಡಲಿಲ್ಲ. 'ಕಾಂಗ್ರೆಸ್ ನ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆಯಾಗಿ, ಉಪದೇಶ ಮಾಡುವುದರಲ್ಲಿ ಎತ್ತಿದ ಕೈ ಎನ್ನಿಸಿರುವ ರಮ್ಯಾ, ಈಗ ತಾವೇ ಮತ ಚಲಾಯಿಸದಿರೋದು ಸರೀನಾ?' ಹಾಗಂತ ಅವರ ಅಭಿಮಾನಿಗಳು, ಜನರು ಪ್ರಶ್ನಿಸುತ್ತಿದ್ದಾರೆ.

ರಮ್ಯಾ ಅವರ ನಡೆಯನ್ನು ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರೂ ಲೇವಡಿ ಮಾಡಿದ್ದಾರೆ.

ರಮ್ಯಾ ಹ್ಯಾಟ್ರಿಕ್ ಸಾಧನೆ!

ಕೊನೆಗೂ ಮತದಾನಕ್ಕೆ ಬರದೆ ವೋಟಿಂಗ್ ಗೆ ಗೈರಾಗಿ ಹ್ಯಾಟ್ರಿಕ್ ಸಾಧಿಸಿದ ನಟಿ ರಮ್ಯ!! ಇವರು ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಪ್ರಮುಖರು! ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಟ್ವೀಟ್ ಮಾಡಿ ಲೇವಡಿ ಮಾಡಿದ್ದಾರೆ.

ಬಿಟ್ಟಿ ಉಪದೇಶ ಬಿಡಿ

ತಾವು ಹಾಕಿದ್ರಾ ಓಟ್...ಬಿಟ್ಟಿ ಉಪದೇಶ ನೀಡುವುದು ಬಿಟ್ಟು ತಮ್ಮ ಸ್ವ ಕ್ಷೇತ್ರವಾದ ಮಂಡ್ಯಕ್ಕೆ ಬಂದು ಮತ ಚಲಾಯಿಸಿ ತದನಂತರ ಮತ ಚಲಾವಣೆಯ ಜನಜಾಗೃತಿ ಮೂಡಿಸಿ.-ರಾಘವೇಂದ್ರ ಅಮೀನ್

ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.77.25 ದಾಖಲೆ ಮತದಾನಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.77.25 ದಾಖಲೆ ಮತದಾನ

ಹೇಳೋದು ವೇದಾಂತ, ತಿನ್ನೋದು...

ತಿನ್ನೋದು ಬದನೆಕಾಯಿ....ಹೇಳೋದು ವೇದಾಂತ ಮೊದ್ಲು ನೀನು ಬಂದು ವೋಟ್ ಮಾಡೋದು ಕಲಿ ಆಮೇಲೆ ಬೇರೆ ಅವ್ರಿಗೆ ಹೇಳುವಂತೆ....ಅಂತ ನಮ್ಮ ರಕ್ಷಣಾ ಸಚಿವರೇ ಬಂದು ವೋಟ್ ಹಾಕಿ ಹೋಗಿದ್ದಾರೆ ನಿಂಗೆ ಏನು ದಾಡಿ ಬಂದು ವೋಟ್ ಹಾಕಕ್ಕೆ? - ಹೇಮಂತ್

ಕಾಂಗ್ರೆಸ್ ಮೇಲೆ ನಿಮಗೂ ನಂಬಿಕೆ ಇಲ್ಲವೇ?

ನೀವು ಕೊನೆಯ ಬಾರಿ ಮತ ಚಲಾಯಿಸಿದ್ದು ಯಾವಾಗ? ನೀವು ಜನರ ಬಳಿ ಕಾಂಗ್ರೆಸ್ಸಿಗೆ ಮತಚಲಾಯಿಸಿ ಎಂದು ಕೇಳುತ್ತಿದ್ದೀರಿ. ಆದರೆ ನೀವೇ ಮತ ಚಲಾಯಿಸಿಲ್ಲ. ಅಂದ್ರೆ ಕಾಂಗ್ರೆಸ್ ಈ ದೇಶಕ್ಕೆ ಒಳಿತನ್ನು ಮಾಡುತ್ತದೆ ಎಂಬ ನಂಬಿಕೆ ನಿಮಗೂ ಇಲ್ಲವೆಂದರ್ಥವಲ್ಲವೇ? - ಸಂಜೀವ್ ಪ್ರಕಾಶ್

English summary
Ramya alias Divya Spandana who is also Congress' Social media head has not cast her vote in Mandya thursday. This was for the 3rd time she missed it. Social media people criticising her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X