ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ನಾಯ್ಡು-ರಾಹುಲ್ ಭೇಟಿ: ಚುನಾವಣೋತ್ತರ ಸನ್ನಿವೇಶದ ಬಗ್ಗೆ ಚರ್ಚೆ

|
Google Oneindia Kannada News

ನವದೆಹಲಿ, ಮೇ 18: ಆಂಧ್ರಪ್ರದೇಶ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರು ದೆಹಲಿಯಲ್ಲಿ ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಢಿ ಆವರನ್ನು ಭೇಟಿ ಮಾಡಿದ್ದು, ಚುನಾವಣೋತ್ತರ ಸನ್ನಿವೇಶದ ಕುರಿತು ಮಾತುಕತೆ ನಡೆಸಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಚುನಾವಣಾ ಫಲಿತಾಂಶದ ನಂತರ ಅತಂತ್ರ ಲೋಕಸಭೆ ತಲೆದೋರಿದರೆ, ಅಥವಾ ಕಾಂಗ್ರೆಸ್ ನೇತೃತ್ವದ ಸಂಭಾವ್ಯ ಘಟಬಂಧನ ಅಲ್ಪ ಮತಕ್ಕೆ ಕುಸಿದರೆ ಏನು ಮಾಡಬೇಕು ಎಂಬ ಬಗ್ಗೆ ಉಭಯ ನಾಯಕರೂ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ಮಾಸ್ಟರ್ ಪ್ಲಾನ್: ಮಮತಾ ರಾಜ್ಯ ಬಿಟ್ಟು ಪ್ರಚಾರಕ್ಕೆ ಹೋಗಲೇ ಆಗಿಲ್ಲ?ಬಿಜೆಪಿ ಮಾಸ್ಟರ್ ಪ್ಲಾನ್: ಮಮತಾ ರಾಜ್ಯ ಬಿಟ್ಟು ಪ್ರಚಾರಕ್ಕೆ ಹೋಗಲೇ ಆಗಿಲ್ಲ?

ಬಿಜೆಪಿಯನ್ನು ಹೊರಗಿಟ್ಟು ಬೇರೆ ಯಾವುದೇ ಪಕ್ಷವನ್ನೂ ಮಹಾಘಟಬಂಧನಕ್ಕೆ ಸ್ವಾಗತಿಸಲು ನಾನು ಸಿದ್ಧ, ನಾನೇ ಮುಂದಾಳತ್ವ ವಹಿಸಿ ಈ ಕೆಲಸ ಮಾಡುತ್ತೇನೆ ಎಂದು ಸ್ವತಃ ನಾಯ್ಡು ಹೇಳಿದ್ದಾರೆ ಎನ್ನಲಾಗಿದೆ.

LS polls: Chandrababu Naidu meets Rahul Gandhi in Delhi

ರಾಹುಲ್ ಭೇಟಿಯ ನಂತರ 69 ವರ್ಷ ವಯಸ್ಸಿನ ನಾಯ್ಡು ಅವರು ಉತ್ತರ ಪ್ರದೇಶದ ಲಕ್ನೋಕ್ಕೆ ತೆರಳಿದ್ದು, ಅಲ್ಲಿ ಬಿಎಸ್ಪಿ ನಾಯಕಿ ಮಾಯಾವತಿ ಮತ್ತು ಎಸ್ಪಿ ನಾಯಕ ಅಖಿಲೇಶ್ ಯಾದವ್ ಅವರನ್ನೂ ಭೇಟಿ ಮಾಡಿದ್ದಾರೆ. ಜೊತೆಗೆ ಎನ್ ಸಿಪಿ ಮುಖಂಡ ಶರದ್ ಪವಾರ್ ಅವರನ್ನೂ ನಾಯ್ಡು ಭೇಟಿ ಮಾಡಿ,ಮಾತುಕತೆ ನಡೆಸಿದ್ದಾರೆ.

ಪಶ್ಚಿಮ ಬಂಗಾಲದಲ್ಲಿ ಇದೇಕೆ ಹಿಂದೂಗಳ ಮೇಲೆ ಈ ಪರಿಯ ದಾಳಿ? ಪಶ್ಚಿಮ ಬಂಗಾಲದಲ್ಲಿ ಇದೇಕೆ ಹಿಂದೂಗಳ ಮೇಲೆ ಈ ಪರಿಯ ದಾಳಿ?

ಈಗಾಗಲೇ ಅವರು ಸಿಪಿಐಎಂ ನಾಯಕ ಸೀತಾರಾಮ್ ಯಚೂರಿ ಮತ್ತು ಎಎಪಿ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಮಹಾಘಟಬಂಧನಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

English summary
Lok Sabha elections 2019: Andhra Pradesh CM and TDP leader meets Congress president Rahul Gandhi in his residence in Delhi. Both leaders discussed about post poll scenario, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X