ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ಬಹುಮತ ಸಿಗೋದು ಡೌಟು ಎಂದ ಬಿಜೆಪಿಯ ಪ್ರಮುಖ ನಾಯಕ

|
Google Oneindia Kannada News

ನವದೆಹಲಿ, ಮೇ 06: ಲೋಕಸಭಾ ಚುನಾವಣೆಯಲ್ಲಿ ಬಹುಮತ ಸಿಗಬೇಕೆಂದರೆ ಮೈತ್ರಿ ಮಾಡಿಕೊಳ್ಳುವುದು ಬಿಜೆಪಿಗೆ ಅನಿವಾರ್ಯವಾಗಬಹುದು ಎಂದು ಬಿಜೆಪಿ ನಾಯಕ ರಾಮ್ ಮಾಧವ್ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಅವರು, "ಅಕಸ್ಮಾತ್ 271 ಕ್ಷೇತ್ರಗಳಲ್ಲಿ ಗೆದ್ದರೆ ನಾವು ನಿಜಕ್ಕೂ ಸಂತಸ ಪಡುತ್ತೇವೆ. ಇಲ್ಲವೆಂದರೂ ನಾವು ಎನ್ ಡಿಎ ಜೊತೆ ಸೇರಿ ಆಡಳಿತ ನಡೆಸುತ್ತೇವೆ" ಎಂದು ರಾಮ್ ಮಾಧವ್ ಹೇಳಿದರು.

ಬೆಟ್ಟಿಂಗ್ ಬಜಾರಿನಲ್ಲಿ ತ್ರಿಶತಕ ಬಾರಿಸಿದ ಬಿಜೆಪಿ, ಕೈ ಥಕ ಥಕ!ಬೆಟ್ಟಿಂಗ್ ಬಜಾರಿನಲ್ಲಿ ತ್ರಿಶತಕ ಬಾರಿಸಿದ ಬಿಜೆಪಿ, ಕೈ ಥಕ ಥಕ!

2014 ರ ಚುನಾವಣೆಯಲ್ಲಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ ಬಿಜೆಪಿ ಈ ಬಾರಿ ಹಲವು ಕ್ಷೇತ್ರಗಳಲ್ಲಿ ಸೋಲಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಆದರೂ ಸರ್ಕಾರದ ಪರ ಅಲೆ ಇರುವುದರಿಂದ ಬಿಜೆಪಿ, ಎನ್ ಡಿಎ ಮೈತ್ರಿ ಕೂಟದ ಇತರ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸಲಿದೆ ಎಂದು ಅವರು ಹೇಳಿದ್ದಾರೆ.

LS polls: BJP may need other parties for majority: Ram Madhav

ಸಮೀಕ್ಷೆಗಳ ಸರಾಸರಿ: ಎನ್ ಡಿಎ 274, ಯುಪಿಎ 140, ಇತರರು 129ಸಮೀಕ್ಷೆಗಳ ಸರಾಸರಿ: ಎನ್ ಡಿಎ 274, ಯುಪಿಎ 140, ಇತರರು 129

ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು, '2014 ರಲ್ಲಿ ಮೋದಿ ಅಲೆ ಇತ್ತು. ಈ ಬಾರಿ ಮೋದಿ ಸುನಾಮಿ ಇದೆ. ಬಿಜೆಪಿಗೆ ಒಂದು ಮತ ಹಾಕಿದರೆ, ಉಗ್ರ ಶಿಬಿರದ ಮೇಲೆ ಸಾವಿರ ಕೆಜಿ ಬಾಂಬ್ ಹಾಕಿದಂತೆ' ಎಂಬ ಹೇಳಿಕೆ ನೀಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

English summary
BJP may need other parties for majority after Lok Sabha elections 2019 results, BJP national general secretary Ram Madhav said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X