ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಳೆ 2 ನೇ ಹಂತದ ಮತದಾನ, ಕರ್ನಾಟಕವೂ ರೆಡಿ: ತಿಳಿಯಬೇಕಾದ ಕೆಲ ಸಂಗತಿ

|
Google Oneindia Kannada News

Recommended Video

Lok Sabha Elections 2019: ಕರ್ನಾಟಕದಲ್ಲಿ ನಡೆಯಲಿರುವ ಮೊದಲನೇ ಹಂತದ ಚುನಾವಣೆ ಬಗ್ಗೆ ತಿಳಿಯಲೇಬೇಕಾದ ಸಂಗತಿಗಳು

ನವದೆಹಲಿ, ಏಪ್ರಿಲ್ 17: ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಬಾರಿಗೆ ಮತದಾನದ ಹಕ್ಕು ಪಡೆದು, ಮತ ಚಲಾಯಿಸುತ್ತಿರುವವರು ಜವಾಬ್ದಾರಿಯುತ ಪ್ರಜೆಯಾಗಲು ಕಾತರದಿಂದ ಕಾಯುತ್ತಿದ್ದಾರೆ!

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಲೋಕಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ಏಪ್ರಿಲ್ 18 ರಂದು ನಡೆಯಲಿದ್ದು, ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಹುಡುಕಿರಿಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಹುಡುಕಿರಿ

ಕೇಂದ್ರಾಡಳಿತ ಪ್ರದೇಶಗಳೂ ಸೇರಿದಂತೆ ಒಟ್ಟು 12 ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ತ್ರಿಪುರ ರಾಜ್ಯದ ಏಕೈಕ ಕ್ಷೇತ್ರಕ್ಕೆ ಏಪ್ರಿಲ್ 18 ರಂದು ನಡೆಯಬೇಕಿದ್ದ ಚುನಾವಣೆಯನ್ನು ಚುನಾವಣಾ ಆಯೋಗ ಮುಂದೂಡಿರುವ ಕಾರಣ ಆ ರಾಜ್ಯದಲ್ಲಿ ಏಪ್ರಿಲ್ 23 ರಂದು ಚುನಾವಣೆ ನಡೆಯಲಿದೆ.

ಲೋಕಸಭೆ ಚುನಾವಣೆ: ಮೊದಲ ಹಂತದ ಮತದಾನ ಯಶಸ್ವಿಲೋಕಸಭೆ ಚುನಾವಣೆ: ಮೊದಲ ಹಂತದ ಮತದಾನ ಯಶಸ್ವಿ

ಉಳಿದಂತೆ 12 ರಾಜ್ಯಗಳ ಒಟ್ಟು 95 ಲೋಕಸಬಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಅಸ್ಸಾಂ, ಬಿಹಾರ, ಛತ್ತೀಸ್ ಗಢ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಹಾರಾಷ್ಟ್ರ, ಮಣಿಪುರ, ಒಡಿಶಾ, ಪಾಂಡಿಚೇರಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಮತದಾರರು ಮತದಾನ ಮಾಡುವ ಮೂಲಕ ತಮ್ಮ ಅಮೂಲ್ಯ ಹಕ್ಕನ್ನು ಚಲಾಯಿಸಲಿದ್ದಾರೆ. ಈ ಮೇಲಿನ ಎಲ್ಲಾ ರಾಜ್ಯಗಳಲ್ಲೂ ಒಂದಕ್ಕಿಂತ ಹೆಚ್ಚು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಚುನಾವಣೆ ಸಮಯ ಸಾಲುಸಾಲು ರಜಾ : ಮತ ಹಾಕದೆ ಮಾಡಬೇಡಿ ಮಜಾಚುನಾವಣೆ ಸಮಯ ಸಾಲುಸಾಲು ರಜಾ : ಮತ ಹಾಕದೆ ಮಾಡಬೇಡಿ ಮಜಾ

ತಮಿಳುನಾಡಿನಲ್ಲಿ ಏಪ್ರಿಲ್ 18 ರಂದೇ ಚುನಾವಣೆ ನಡೆಯಲಿದ್ದು, ಕೇವಲ ಒಂದೇ ಹಂತದಲ್ಲಿ ನಡೆಯಲಿದೆ. ಇಲ್ಲಿನ ಒಟ್ಟು 39 ಲೋಕಸಭಾ ಚುನಾವಣೆಗಳ ಪೈಕಿ ವೆಲ್ಲೂರು ಕ್ಷೇತ್ರದ ಚುನಾವನೆಯನ್ನು ಮುಂದೂಡಲಾಗಿದ್ದು, 38 ಕ್ಷೇತ್ರಗಳಿಗೆ ಗುರುವಾರ ಚುನಾವಣೆ ನಡೆಯಲಿದೆ.

ಮಾರ್ಚ್ 10 ರಂದು ಲೋಕಸಭೆ ಚುನಾವಣೆಯನ್ನು ಚುನಾವಣಾ ಆಯೋಗ ಘೋಷಿಸಿತ್ತು. ಅಂದಿನಿಂದಲೂ ನೀತಿಸಂಹಿತೆ ಜಾರಿಯಲ್ಲಿದೆ. ಮೇ 23 ರಂದು ಫಲಿತಾಂಶ ಹೊರಬೀಳಲಿದ್ದು, ಏಪ್ರಿಲ್ 11 ರಿಂದ 19 ರವರೆಗೆ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

17ನೇ ಲೋಕಸಭೆ ಚುನಾವಣೆ ಏ.11 ರಂದು 91 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆದಿತ್ತು.

ಯಾವ್ಯಾವ ರಾಜ್ಯಗಳಲ್ಲಿ ಚುನಾವಣೆ?

ಯಾವ್ಯಾವ ರಾಜ್ಯಗಳಲ್ಲಿ ಚುನಾವಣೆ?

ಅಸ್ಸಾಂ ರಾಜ್ಯದ 5 ಕ್ಷೇತ್ರ, ಬಿಹಾರದ 5, ಛತ್ತೀಸ್ ಗಢದ 3, ಜಮ್ಮು ಮತ್ತು ಕಾಶ್ಮೀರದ 2, ಕರ್ನಾಟಕದ 14, ಮಹಾರಾಷ್ಟ್ರದ 10, ಮಣಿಪುರದ 1, ಒಡಿಶಾದ 5, ಪಾಂಡಿಚೇರಿಯ 1, ತಮಿಳುನಾಡಿನ 38, ಉತ್ತರ ಪ್ರದೇಶದ 8 ಪಶ್ಚಿಮ ಬಂಗಾಳದ 3 ಕ್ಷೇತ್ರಗಳಲ್ಲಿ ಗುರುವಾರ ಮತದಾನ ನಡೆಯಲಿದೆ.

ಮಹತ್ವದ ದಿನಾಂಕ

ಮಹತ್ವದ ದಿನಾಂಕ

ಚುನಾವಣೆ ದಿನಾಂಕ ಘೋಷಣೆಯಾದ ದಿನ: ಮಾರ್ಚ್ 10
ಅಧಿಸೂಚನೆ: ಮಾರ್ಚ್ 19
ನಾಮಪತ್ರ ಸಲ್ಲಿಸಲು ಕೊನೇ ದಿನ: ಮಾರ್ಚ್ 26
ನಾಮಪತ್ರ ಪರಿಶೀಲನೆ: ಮಾರ್ಚ್ 27
ಚುನಾವಣೆ ದಿನಾಂಕ: ಏಪ್ರಿಲ್ 18
ಫಲಿತಾಂಶ: ಮೇ 23 (ಮಂಗಳವಾರ)

2019ರ ಲೋಕಸಭಾ ಚುನಾವಣೆಯ ನೀವು ತಿಳಿಯಲೇ ಬೇಕಾದ 7 ವಿಶೇಷತೆಗಳು!2019ರ ಲೋಕಸಭಾ ಚುನಾವಣೆಯ ನೀವು ತಿಳಿಯಲೇ ಬೇಕಾದ 7 ವಿಶೇಷತೆಗಳು!

ಕರ್ನಾಟಕದಲ್ಲಿ ಎಲ್ಲೆಲ್ಲಿ?

ಕರ್ನಾಟಕದಲ್ಲಿ ಎಲ್ಲೆಲ್ಲಿ?

ಕರ್ನಾಟಕದಲ್ಲಿ ಗುರುವಾರ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಉಡುಪಿ ಚಿಕ್ಕಮಗಳೂರು, ಮೈಸೂರು-ಕೊಡಗು, ಚಿತ್ರದುರ್ಗ, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ತುಮಕೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿ ಒಟ್ಟು 14(28) ಲೋಕಸಭಾ ಕ್ಷೇತ್ರಗಳಿಗೆ ನಾಳೆ ಚುನಾವಣೆ ನಡೆಯಲಿದ್ದು, ಮಿಕ್ಕ 14 ಕ್ಷೇತ್ರಗಳಿಗೆ ಮೇ 23 ರಂದು ಚುನಾವಣೆ ನಡೆಯಲಿದೆ.

ಲೋಕಸಭೆ ಚುನಾವಣೆ 2019ರ ಮಾಹಿತಿ ಅಂಕಿ- ಅಂಶಗಳಲ್ಲಿಲೋಕಸಭೆ ಚುನಾವಣೆ 2019ರ ಮಾಹಿತಿ ಅಂಕಿ- ಅಂಶಗಳಲ್ಲಿ

ವೆಲ್ಲೂರು ಚುನಾವಣೆ ರದ್ದು, ತರಿಪುರ ಚುನಾವಣೆ ಮುಂದಕ್ಕೆ

ವೆಲ್ಲೂರು ಚುನಾವಣೆ ರದ್ದು, ತರಿಪುರ ಚುನಾವಣೆ ಮುಂದಕ್ಕೆ

ಏಪ್ರಿಲ್ 18 ರಂದು ನಡೆಯಬೇಕಿದ್ದ ತಮಿಳುನಾಡಿನ ವೆಲ್ಲೂರು ಕ್ಷೇತ್ರದ ಚುನಾವಣೆಯನ್ನು ಅಭ್ಯರ್ಥಿ ಬಳಿ ಅಕ್ರಮ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವೇ ರದ್ದುಗೊಳಿಸಿದೆ. ಇತ್ತ ಈಶಾನ್ಯ ರಾಜ್ಯ ತ್ರಿಪುರದಲ್ಲಿ ಕಾನೂನು ಸುವ್ಯವಸ್ಥೆಯ ಸಮಸ್ಯೆಯ ಕಾರಣ ತ್ರಿಪುರ ಪೂರ್ವ ಕ್ಷೇತ್ರದ ಚುನಾವಣೆಯನ್ನು ಏ.18 ರ ಬದಲು ಏ.23 ಕ್ಕೆ ಮುಂದೂಡಲಾಗಿದೆ.

ಕರ್ನಾಟಕದಲ್ಲಿ ಎರಡು ಹಂತದ ಚುನಾವಣೆ; ಯಾವ ಕ್ಷೇತ್ರದಲ್ಲಿ ಯಾವಾಗ?ಕರ್ನಾಟಕದಲ್ಲಿ ಎರಡು ಹಂತದ ಚುನಾವಣೆ; ಯಾವ ಕ್ಷೇತ್ರದಲ್ಲಿ ಯಾವಾಗ?

English summary
Lok Sabha elections 2019: Nation awaited for 2nd phase of voting in 12 states and 95 constituencies on April 18. Results will be declared on May 23rd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X