ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈನಿಕರ ಜೀವಕ್ಕೆ ಬೆಲೆ ಇಲ್ಲವೇ? ಕೇಂದ್ರಕ್ಕೆ ಮುಲಾಯಂ ಪ್ರಶ್ನೆ

|
Google Oneindia Kannada News

ಜನವರಿ, ನವದೆಹಲಿ 03: ಕೇಂದ್ರ ಸರ್ಕಾರಕ್ಕೆ ರಾಷ್ಟ್ರದ ಭದ್ರತೆಯ ಬಗ್ಗೆ ಕಾಳಜಿ ಇಲ್ಲವೇ ಎಂದು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಲೋಕಸಭೆಯಲ್ಲಿ ಪ್ರಶ್ನಿಸಿದ್ದಾರೆ.

ಪುಲ್ವಾಮದಲ್ಲಿ ಸಿಆರ್‍‍ಪಿಎಫ್ ಕ್ಯಾಂಪ್ ಮೇಲೆ ಉಗ್ರರ ದಾಳಿ, 4 ಸೈನಿಕರು ಬಲಿಪುಲ್ವಾಮದಲ್ಲಿ ಸಿಆರ್‍‍ಪಿಎಫ್ ಕ್ಯಾಂಪ್ ಮೇಲೆ ಉಗ್ರರ ದಾಳಿ, 4 ಸೈನಿಕರು ಬಲಿ

ಇತ್ತೀಚೆಗೆ ಸಿಆರ್ ಪಿಎಫ್ ಯೋಧರ ಮೇಲೆ ನಡೆದ ದಾಳಿಯ ಕುರಿತು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, 'ಗಡಿಯಲ್ಲಿ ನಮ್ಮ ಸೈನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಾವು ಜಗತ್ತಿನಲ್ಲಿ ಸ್ಪರ್ಧಾತ್ಮಕ ಭದ್ರಾತಾ ವ್ಯವಸ್ಥೆ ಪಡೆದಿದ್ದೇವಾದರೂ ಇಂಥ ಘಟನೆಗಳು ಏಕೆ ನಡೆಯುತ್ತಿವೆ? ನಿಜಕ್ಕೂ ಇದು ದುರದೃಷ್ಟದ ಸಂಗತಿ. ನಾನು ಯಾರನ್ನೂ ದೂರುತ್ತಿಲ್ಲ, ಯಾರ ಮೇಲೂ ಆರೋಪ ಮಾಡುತ್ತಿಲ್ಲ. ಪ್ರಶ್ನಿಸುತ್ತಿದ್ದೇನಷ್ಟೆ' ಎಂದು ಅವರು ಹೇಳಿದರು.

LS: Mulayam pulls up Centre over national security issue

ಸರ್ಕಾರ, ಸೇನೆಗೆ ಯಾವುದೇ ಸ್ವಾತಂತ್ರ್ಯ ನೀಡಿಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ. ನಮ್ಮ ಸೈನಿಕರು ಗಡಿಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವುದು, ವಿಶ್ವ ಮಟ್ಟದಲ್ಲಿ ನಮಗೆ ನಾಚಿಕೆಯ ವಿಷಯ" ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಸೈನಿಕರು ಸಾಯದಿರೋ ದೇಶ ಇದ್ಯಾ?: ಬಿಜೆಪಿ ಸಂಸದನ ಅಸಂಬದ್ಧ ಹೇಳಿಕೆಸೈನಿಕರು ಸಾಯದಿರೋ ದೇಶ ಇದ್ಯಾ?: ಬಿಜೆಪಿ ಸಂಸದನ ಅಸಂಬದ್ಧ ಹೇಳಿಕೆ

2017 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆ ಸಮಸ್ಯೆಯಿಂದಾಗಿ ನಾಗರಿಕರು ಮತ್ತು ಸೈನಿಕರು ಸೇರಿದಂತೆ ಒಟ್ಟು 400 ಜನ ಮೃತರಾಗಿದ್ದಾರೆ. ಇತ್ತೀಚೆಗೆ ತಾನೇ ಪಾಕಿಸ್ತಾನ ಕದನ ವಿರಾಮ ಉಲ್ಲಘಿಸಿ ಸಿಆರ್ ಪಿಎಫ್ ಶಿಬಿರದ ಮೇಲೆ ದಾಳಿ ನಡೆಸಿದ ಪರಿಣಾಮ ಐವರು ಸೈನಿಕರು ಪ್ರಾಣ ಕಳೆದುಕೊಂಡಿದ್ದರು.

English summary
Samajwadi Party patriarch Mulayam Singh Yadav on Wednesday drew the Lok Sabha's attention on the issue of national security and questioned the Centre for its inability to tackle the tense situation in the border areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X