ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ: ಬಿಜೆಪಿಗೆ ಹೈಯೆಸ್ಟ್- ಕಾಂಗ್ರೆಸ್ಸಿಗೆ ಲೋಯೆಷ್ಟು?

By Srinath
|
Google Oneindia Kannada News

ಬೆಂಗಳೂರು, ಮೇ 19: ಹದಿನಾರನೆಯ ಲೋಕಸಭೆ ಚುನಾವಣೆ ಫಲಿತಾಂಶ ಬಂದಾಗಿ ಬಿಜೆಪಿ ಜಯಭೇರಿ ಬಾರಿಸಿ, ಕಾಂಗ್ರೆಸ್ ಪಕ್ಷ ಅಧೋಗತಿಗೆ ಇಳಿದಿದೆ. ಈ ಮಧ್ಯೆ 'ಮಳೆ ನಿಂತರೂ ಹನಿಯಾಗುತ್ತಿದೆ' ಎಂಬಂತೆ ಫಲಿತಾಂಶ ಕುರಿತಾದ ಅಂಕಿ-ಸಂಖ್ಯೆ, ಮಾಹಿತಿಗಳ ಮಹಾಪೂರವೇ ಹರಿದುಬರುತ್ತಿದೆ. ಇಲ್ಲೊಂದಿಷ್ಟು ಇಂಟರೆಸ್ಟಿಂಗ್ ಮಾಹಿತಿ ನಿಮಗಾಗಿ...

ದೊಡ್ಡಪಕ್ಷವಾಗಿ ಅಧಿಕಾರ ಹಿಡಿದಿರುವ ಬಿಜೆಪಿ ಒಟ್ಟಾರೆ ಮತ ಗಳಿಕೆಯಲ್ಲಿ ಎಲ್ಲಾ ಪಕ್ಷಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದಿದೆ. 543 ಲೋಕಸಭಾ ಕ್ಷೇತ್ರಗಳಲ್ಲಿ 282 ಸ್ಥಾನಗಳನ್ನು ಪಡೆದಿರುವ ಬಿಜೆಪಿ ಮತಗಳಿಕೆಯಲ್ಲಿ ಶೇ. 31ರಷ್ಟು (17,16.57,54,931) ಮತ ಪಡೆದಿದೆ. ಈವರೆಗೂ ನಡೆದ ಲೋಕಸಭೆ ಚುನಾವಣೆಯಲ್ಲಿ ಇದು ಕಮಲ ಪಕ್ಷದ ಅತಿದೊಡ್ಡ ಸಾಧನೆಯಾಗಿದೆ.

Lok Sabha election 2014 Results- Vote share BJP highest- Congress lowest

ಅದೇ ಕಾಂಗ್ರೆಸ್ 44 ಕ್ಷೇತ್ರಗಳಲ್ಲಿ ಗೆದ್ದು, ಎರಡನೇ ಸ್ಥಾನ ಪಡೆದಿದೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಶೇ. 19.3 (10,69,38,242) ಮತ ಪಡೆದಿದೆ. ಅದು ಪಕ್ಷದ ಇತಿಹಾಸದಲ್ಲೇ ಅತ್ಯಂತ ಕಡಿಮೆ ಮತಗಳನ್ನು ಪಡೆದಿದೆ. 1984ರಲ್ಲಿ ಇಂದಿರಾ ಹತ್ಯೆ ಅನುಕಂಪದಲೆಯಲ್ಲಿ 414 ಸ್ಥಾನಗಳನ್ನು ಪಡೆದು ಶೇ. 41ರಷ್ಟು ಮತದಾನ ಪಡೆದಿರುವುದು ಕಾಂಗ್ರೆಸ್ಸಿನ ಇದುವರೆಗಿನ ಗರಿಷ್ಠ ಸಾಧನೆಯಾಗಿದೆ.

ಆಶ್ಚರ್ಯದ ಸಂಗತಿಯೆಂದರೆ ಈ ಬಾರಿಯ ಚುನಾವಣೆಯಲ್ಲಿ ಒಂದೂ ಸ್ಥಾನವನ್ನು ಪಡೆಯದಿದ್ದರೂ ಮಾಯಾವತಿಯ ಬಿಎಸ್‌ಪಿ ಪಕ್ಷ ಶೇಕಡವಾರು ಮತಗಳಿಕೆಯಲ್ಲಿ ಮೂರನೇ ಸ್ಥಾನ ಪಡೆದಿದೆ. ಸ್ಥಾನ ಗಳಿಕೆಯಲ್ಲಿ ಸೊನ್ನೆ ಪಡೆದಿದ್ದರೂ ಬಿಎಸ್‌ಪಿ ಶೇಕಡ 4.1 ರಷ್ಟು ( 2,29,46,182) ಮತಗಳನ್ನು ಗಳಿಸಿದೆ. (ಲೋಕಸಭಾ ಫಲಿತಾಂಶ ವೀಕ್ಷಣೆ)

ಇನ್ನು ಎಡರಂಗದ ಭದ್ರಕೋಟೆಯಾಗಿದ್ದ ಪಶ್ಚಿಮ ಬಂಗಾಳವನ್ನು ಧೂಳೀಪಟ ಮಾಡಿರುವು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ರಾಷ್ಟ್ರದಲ್ಲೇ ಒಟ್ಟಾರೆ ಮತ ಗಳಿಕೆಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. 34 ಲೋಕಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಟಿಎಂಸಿ ಒಟ್ಟಾರೆ ಮತಗಳಿಕೆಯಲ್ಲಿ ಶೇ. 3.8 (2,12,59,641) ಮತ ಗಳಿಸಿದೆ.

ಉತ್ತರ ಪ್ರದೇಶದಲ್ಲಿ ಮೋದಿ ಅಬ್ಬರಕ್ಕೆ ಸಿಲುಕಿ ಪತರಗುಟ್ಟಿರುವ ಮುಲಾಯಂಸಿಂಗ್ ಅವರ ಸಮಾಜವಾದಿ ಪಕ್ಷ ಮತ ಗಳಿಕೆಯಲ್ಲಿ 5ನೇ ಸ್ಥಾನ ಪಡೆದಿದೆ. ಈ ಬಾರಿಯ ಚುನಾವಣೆಯಲ್ಲಿ ಎಸ್‌ಪಿ ಕೇವಲ 5 ಕ್ಷೇತ್ರಗಳನ್ನು ಗೆದ್ದು, ಶೇ. 3.4 ರಷ್ಟು (1,86,72,916) ಮತಗಳನ್ನು ಪಡೆದಿದೆ.

ಕುತೂಹಲದ ಸಂಗತಿಯೆಂದರೆ ತಮಿಳುನಾಡಿನಲ್ಲಿ ಕರುಣಾನಿಧಿ ಕುಟುಂಬವನ್ನು ನಿರ್ನಾಮ ಮಾಡಲು ಹೊರಟಿರುವ ಜಯಲಲಿತಾ ಸಾರಥ್ಯದ ಎಐಎಡಿಎಂಕೆ ಪಕ್ಷ 37 ಸ್ಥಾನಗಳನ್ನು ಪಡೆದಿದೆ. ಮತ ಗಳಿಕೆಯಲ್ಲಿ ಶೇ. 3.3 ರಷ್ಟು (1,81,15,825) ಮತ ಪಡೆದಿದೆ.

ಸಿಪಿಎಂ (ಮಾರ್ಕಿಸ್ಟ್) 9 ಸ್ಥಾನ ಪಡೆದು ಶೇ. 3.2 (1,79,86,773) ಮತ ಪಡೆದರೆ, ಐಎನ್‌ಡಿ ಮೂರು ಸ್ಥಾನ ಶೇ. 2.5 (1,40,94,545) ಮತ ಗಳಿಸಿದೆ.
ಆಂಧ್ರಪ್ರದೇಶದಲ್ಲಿ ಟಿಡಿಪಿ 16 ಸ್ಥಾನ ಪಡೆದು ಶೇ.2.5 (1,39,91,280) ಮತ ಗಳಿಸಿದೆ. ವೈಎಸ್‌ಆರ್ ಕಾಂಗ್ರೆಸ್ 9 ಸ್ಥಾನ ಪಡೆದು ಶೇ. 2.5 (1,39,91,280), ಶಿವಸೇನೆ 18 ಸ್ಥಾನ ಶೇ. 1.19 (1,02,62,982) ಮತ ಪಡೆದಿದೆ.

ಶೂನ್ಯ ಸಂಪಾದಿಸಿರುವ ಡಿಎಂಕೆ ಶೇ. 1.7 (96,36,430), ಬಿಜೆಡಿ 20 ಸ್ಥಾನ ಶೇ. 1.7 (94,91,497), ಎನ್‌ಸಿಪಿ 6 ಸ್ಥಾನ ಶೇ. 2 (1,13,25,635), ಆಮ್ ಆದ್ಮಿ ಪಕ್ಷ 4ಸ್ಥಾನ ಶೇ. 2 (1,13,25,635), ಆರ್‌ಜೆಡಿ 4 ಸ್ಥಾನ ಶೇ. 1.6 (67,36,490), ಜೆಡಿಯು 2 ಸ್ಥಾನ ಶೇ. 1.1 (59,92,196), ಸಿಪಿಐ ಒಂದು ಸ್ಥಾನ ಗಳಿಸಿದ್ದು ಶೇ. 0.8 (43,27,298) ಮತಗಳನ್ನು ಗಳಿಸಿದೆ. ಜೆಡಿಎಸ್ 2 ಸ್ಥಾನ ಶೇ. 0.7 (37,31,481) ಮತ ಪಡೆದರೆ, ನೋಟಾ ಶೇ. 1.1 (6,00,0197) ಮತ ಗಳಿಸಿದೆ.

English summary
Lok Sabha election 2014 Results- Vote share BJP highest- Congress lowest. In 543 seat capacity Lok Sabha BJP's vote share (with 282 seats) 31% (17,16.57,54,931). Congress's vote share (with 44 seats) 19.3 % (10,69,38,242)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X