ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು ಪೆಟ್ರೋಲ್ ಬಂಕ್ ಗಳಲ್ಲಿ ಸಿಲಿಂಡರ್ ಲಭ್ಯ

|
Google Oneindia Kannada News

veerappa moily
ನವದೆಹಲಿ, ಅ.3 : ಸಾರ್ವಜನಿಕರಿಗೆ ಇನ್ನುಮುಂದೆ ಐದು ಕೆಜಿ ಎಲ್‌ಪಿಜಿ ಸಿಲಿಂಡರ್ ಗಳು ಪೆಟ್ರೋಲ್ ಬಂಕ್ ಗಳಲ್ಲಿ ದೊರೆಯಲಿವೆ. ಬೆಂಗಳೂರು ಸೇರಿದಂತೆ ದೇಶದ ನಾಲ್ಕು ನಗರಗಳಲ್ಲಿ ಈ ವ್ಯವಸ್ಥೆ ಅಕ್ಟೋಬರ್ 5 ರಿಂದ ಆರಂಭವಾಗಲಿದೆ.

ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯ್ಲಿ ಅ.5ರಂದು ಈ ಸೇವೆಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರು, ದೆಹಲಿ, ಮುಂಬೈ, ಕೊಲ್ಕತಾ ಹಾಗೂ ಚೆನ್ನೈನಲ್ಲಿ ಐದು ಕೆಜಿ ಎಲ್‌ಪಿಜಿ ಸಿಲಿಂಡರ್ ಪೆಟ್ರೋಲ್ ಬಂಕ್ ಗಳಲ್ಲಿ ದೊರೆಯಲಿದೆ.

ಆಗಾಗ ಊರು ಬದಲಿಸುವ ಗ್ರಾಹಕರಿಗೆ ಅನುಕೂಲವಾಗಲು ಮತ್ತು ಸುಲಭವಾಗಿ ಸಾಗಣೆ ಮಾಡಲು ಐದು ಕೆಜಿ ಸಿಲಿಂಡರ್ ಮಾರಾಟ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಕ್ರಮೇಣ ಎಲ್ಲಾ ನಗರ, ಪಟ್ಟಣಗಳಿಗೆ ಈ ಸೇವೆ ವಿಸ್ತರಿಸಲು ಪೆಟ್ರೋಲಿಯಂ ಇಲಾಖೆ ನಿರ್ಧರಿಸಿದೆ.

ಈ ಸಿಲಿಂಡರ್ ಗಳ ದರ 370 ರಿಂದ 400 ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಸಿಲಿಂಡರ್ ಗಳಿಗೆ ಸರ್ಕಾರದ ಸಬ್ಸಿಡಿ ಇರುವುದಿಲ್ಲ. ಮಾರುಕಟ್ಟೆ ದರವನ್ನೇ ನಿಗದಿ ಮಾಡಲಾಗುತ್ತದೆ. ಪೆಟ್ರೋಲ್ ಬೆಲೆಯಂತೆ ಈ ಸಿಲಿಂಡರ್ ಬೆಲೆಯೂ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಏರಿಳಿಯುತ್ತದೆ.

ಗುರುತಿನ ಚೀಟಿ ಬೇಕು : ಐದು ಕೆಜಿ ಸಿಲಿಂಡರ್ ಖರೀಸಿದಿಸಲು ಗ್ರಾಹಕರು ಗುರುತಿನ ಚೀಟಿ ತೋರಿಸುವುದು ಕಡ್ಡಾಯ. ಮತದಾರರ ಚೀಟಿ, ಡಿಎಲ್, ಪಾನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಎಂಪ್ಲಾಯೀ ಐಡಿ, ಪಾಸ್ ಪೋರ್ಟ್ ಸೇರಿದಂತೆ ಯಾವುದಾದರೂ ಗುರುತಿನ ಚೀಟಿಯನ್ನು ಒದಗಿಸಬೇಕು.

ಗ್ರಾಹಕರಿಗೆ ಮೊದಲು ಖರೀದಿಸುವ ವೇಳೆ ಸಿಲಿಂಡರ್ ಬಳಕೆ ಕುರಿತಂತೆ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ. ಸಾರ್ವಜನಿಕರಿಗೆ ಅನುಕೂಲವಾಗಲು ಹೆಚ್ಚು ಹೊತ್ತು ಈ ಪೆಟ್ರೋಲ್ ಬಂಕ್ ಗಳು ತೆರೆದಿರುತ್ತವೆ. ಸಿಲಿಂಡರ್ ಖರೀದಿಸುವವರು ಆರಂಭದಲ್ಲಿ ಡೊಮೆಸ್ಟಿಕ್ ಪ್ರೆಶರ್ ರೆಗ್ಯುಲೆಟರ್ ಕೊಳ್ಳಬಹುದು. ಇಲ್ಲವೇ ಬರೀ ಸಿಲಿಂಡರ್ ಖರೀದಿಸಬಹುದಾಗಿದೆ.

English summary
Migrant workers, students and those with transferable jobs wanting to get cooking gas need not wait for a permanent connection. They can now get cooking gas cylinders from the nearest petrol pump that sells it. Bangalore and other four city's of country will get this facility from October 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X