• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಧ್ಯರಾತ್ರಿಯಿಂದ ಮತ್ತೆ ಮೇಲೇರಿತು ಅಡುಗೆ ಇಂಧನ ದರ

|
   ಸೆಪ್ಟೆಂಬರ್ 30 ಮಧ್ಯರಾತ್ರಿಯಿಂದ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ | Oneindia Kannada

   ನವದೆಹಲಿ, ಅ.1: ಎಲ್‌ಪಿಜಿ ಸಿಲಿಂಡರ್ ದರ 2.89 ರೂಪಾಯಿ ಏರಿಕೆಯಾಗಿದ್ದು ಇದೀಗ ತೈಲ ಬೆಲೆ ಹೆಚ್ಚಳದ ನಂತರ ಸಿಲಿಂಡರ್ ಶಾಕ್ ನೀಡಿದೆ.

   ಸಬ್ಸಿಡಿ ಎಲ್‌ಪಿಜಿ ದರ 2.59 ರೂ. ಏರಿಕೆಯಾಗಿದ್ದು, ಸಬ್ಸಿಡಿ ಇಲ್ಲದೆ 59 ರೂ. ಏರಿಕೆಯಾಗಿದೆ. ತೈಲ ಬೆಲೆ ಏರಿಕೆಯಿಂದಾಗಿ ಜನರು ಕಂಗಾಲಾಗಿರುವ ಈ ಸಮಯದಲ್ಲಿ ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಳ ಜನತೆಗೆ ಮತ್ತೊಂದು ಶಾಕ್ ನೀಡಿದೆ.

   ರು. 820 ತಲುಪಿ ಸಾರ್ವಕಾಲಿಕ ಏರಿಕೆ ಕಂಡ ಸಬ್ಸಿಡಿ ರಹಿತ ಸಿಲಿಂಡರ್

   ಜಿಎಸ್ ಟಿಯಿಂದಾಗಿ ಗೃಹಬಳಕೆ ಎಲ್ ಪಿಜಿ ಗ್ರಾಹಕರಿಗೆ 2.89 ರೂಪಾಯಿಗಳಷ್ಟು ಮಾತ್ರ ಹೊರೆಯಾಗಲಿದೆ ಎಂದು ಐಒಸಿ ಹೇಳಿದೆ. ಇದೇ ವೇಳೆ ಗ್ರಾಹಕರ ಬ್ಯಾಂಕ್ ಖಾತೆಗೆ ಕಳಿಸಲಾಗುವ ಸಬ್ಸಿಡಿ ಹಣವನ್ನು 376.60 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಸೆಪ್ಟೆಂಬರ್ ನಲ್ಲಿ ಪ್ರತಿ ಸಿಲಿಂಡರ್ ಗೆ 320.49 ರೂಪಾಯಿ ಸಬ್ಸಿಡಿ ಮೊತ್ತವನ್ನು ವರ್ಗಾವಣೆ ಮಾಡಲಾಗುತ್ತಿತ್ತು.

   ದೆಹಲಿಯಲ್ಲಿ ಎಲ್ಪಿಜಿ ಬೆಲೆ ಏರಿಕೆ! ದುಬಾರಿಯಾಯ್ತು ದುನಿಯಾ

   ಸೆ.30 ರಂದು ಸಬ್ಸಿಡಿ ಸಹಿತ ಎಲ್ ಪಿಜಿ ಸಿಲಿಂಡರ್ ದರ 2.89 ರೂಪಾಯಿ ಎರಿಕೆಯಾಗಿದ್ದು ಪ್ರತಿ ಸಿಲಿಂಡರ್ ದರ 502.4 ರೂಪಾಯಿಗಳಷ್ಟಾಗಿದೆ. ಸಬ್ಸಿಡಿ ರಹಿತ ಸಿಲಿಂಡರ್ ದರ 59 ರೂಪಾಯಿ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಬೆಲೆ ಹಾಗೂ ವಿದೇಶಾಂಗ ವಿನಿಮಯ ವ್ಯತ್ಯಾಸಗಳಿಂದಾಗಿ ಬೆಲೆ ಏರಿಕೆ ಮಾಡಲಾಗಿದೆ ಎಂದು ಭಾರತೀಯ ತೈಲ ಕಾರ್ಪೊರೇಷನ್ (ಐಒಸಿ) ಹೇಳಿದೆ.

   English summary
   Central government has increased subsidised and non subsidised LPG price Rs2.89 and Rs. 59 respectively from Sunday midnight
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X