ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇವಲ ಒಂದೇ ಒಂದು ಕೊರೊನಾ ಪ್ರಕರಣ ಹೊಂದಿರುವ ಭಾರತದ 3 ರಾಜ್ಯಗಳು

|
Google Oneindia Kannada News

ನವ ದೆಹಲಿ, ಏಪ್ರಿಲ್ 14: ಕೊರೊನಾ ವೈರಸ್‌ ಭಾರತದಲ್ಲಿ ಎಲ್ಲ ರಾಜ್ಯಗಳಿಗೂ ಹಬ್ಬಿದೆ. ಕೆಲವು ರಾಜ್ಯಗಳ ಪರಿಸ್ಥಿತಿ ತೀರ ಹದಗೆಟ್ಟಿದೆ. ಮಹಾರಾಷ್ಟ್ರ ಕೊರೊನಾ ಹೊಡೆತಕ್ಕೆ ತತ್ತರಿಸಿದೆ.

ಕೆಲವು ರಾಜ್ಯಗಳಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ ಸಾವಿರ ದಾಟಿದೆ. ಇಡೀ ದೇಶವನ್ನು ಲಾಕ್‌ಡೌನ್ ಮಾಡಿ, ಬೇಕಾದ ಕ್ರಮಗಳನ್ನು ಕೈಗೊಂಡರೂ, ಕೆಲವು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೊರೊನಾ ಹಬ್ಬುವಿಕೆಯನ್ನು ತಡೆಯಲು ಹಲವು ರಾಜ್ಯಗಳು ಹೋಾಟ ಮುಂದುವರೆಸಿವೆ. ಆದರೂ, ಭಾರತದಲ್ಲಿ ಈಗ ಸೋಂಕಿತರ ಸಂಖ್ಯೆ 10 ಸಾವಿರ ದಾಟಿದೆ.

ಕೊರೊನಾ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿಡಿಯೋ ಸಂದೇಶ ಕೊರೊನಾ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿಡಿಯೋ ಸಂದೇಶ

ಒಂದು ಕಡೆ ಭಾರತದಲ್ಲಿ ಕೊರೊನಾ ವೈರಸ್ ಹೆಚ್ಚಾಗುತ್ತಿದ್ದರೂ, ಮತ್ತೊಂದು ಕಡೆ ಕೆಲವು ರಾಜ್ಯಗಳು ಕೊರೊನಾ ವೈರಸ್‌ವನ್ನು ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದೆ. ಭಾರತದ ಮೂರು ರಾಜ್ಯಗಳು ಕೇವಲ ಒಬ್ಬ ಸೋಂಕಿತನನ್ನು ಮಾತ್ರ ಹೊಂದಿದೆ. ಇನ್ನು ಎರಡು ರಾಜ್ಯಗಳಲ್ಲಿ ಕೇವಲ ಇಬ್ಬರು ಸೋಂಕಿತರು ಮಾತ್ರ ಇದ್ದಾರೆ.

ಮೂರು ರಾಜ್ಯಗಳಲ್ಲಿ ಒಬ್ಬನೇ ಸೋಂಕಿತ

ಮೂರು ರಾಜ್ಯಗಳಲ್ಲಿ ಒಬ್ಬನೇ ಸೋಂಕಿತ

ನಾಗಾಲ್ಯಾಂಡ್, ಮಿಝೋರಾಂ, ಹಾಗೂ ಅರುಣಾಚಲ ಪ್ರದೇಶ ಅತಿ ಕಡಿಮೆ ಸೋಂಕಿತರನ್ನು ಹೊಂದಿರುವ ಭಾರತದ ರಾಜ್ಯಗಳಾಗಿವೆ. ಈ ಮೂರು ರಾಜ್ಯಗಳಲ್ಲಿ ಕೇವಲ ತಲಾ ಒಂದು ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ದೃಢವಾಗಿದೆ. ಮೂರೂ ರಾಜ್ಯದಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಸೋಂಕು ಇದೆ. ಆ ವ್ಯಕ್ತಿಯಿಂದ ಬೇರೆಯವರಿಗೆ ಸೋಂಕು ಹರಡದಂತೆ ಕಡಿವಾಣ ಹಾಕಲಾಗಿದೆ. ಈ ರಾಜ್ಯಗಳು ಕೊರೊನಾ ನಿಯಂತ್ರಣ ಮಾಡುವಲ್ಲಿ ಗೆದ್ದಿವೆ.

ಎರಡು ರಾಜ್ಯದಲ್ಲಿ ಇಬ್ಬರಿಗೆ ಪಾಸಿಟಿವ್

ಎರಡು ರಾಜ್ಯದಲ್ಲಿ ಇಬ್ಬರಿಗೆ ಪಾಸಿಟಿವ್

ನಾಗಾಲ್ಯಾಂಡ್, ಮಿಝೋರಾಂ, ಹಾಗೂ ಅರುಣಾಚಲ ಪ್ರದೇಶದ ನಂತರದ ಸ್ಥಾನದಲ್ಲಿ ಮಣಿಪುರ ಹಾಗೂ ತ್ರಿಪುರ ರಾಜ್ಯಗಳು ಇವೆ. ಈ ಎರಡು ರಾಜ್ಯಗಳಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ಕೊರೊನಾ ಕಡಿಮೆ ಇರುವ ಈ ರಾಜ್ಯಗಳ ಜನ ಸಂಖ್ಯೆಯೂ ಕಡಿಮೆ ಇದೆ. ಮಣಿಪುರದಲ್ಲಿ 27.2 ಲಕ್ಷ ಹಾಗೂ ತ್ರಿಪುರದಲ್ಲಿ 36.6 ಲಕ್ಷ ಜನರು ವಾಸ ಮಾಡುತ್ತಾರೆ.

ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಗೆ ಹೆಗಲು ಕೊಟ್ಟ ಮುಸ್ಲಿಂ ಬಾಂಧವರುಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಗೆ ಹೆಗಲು ಕೊಟ್ಟ ಮುಸ್ಲಿಂ ಬಾಂಧವರು

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣ

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣ

ಭಾರತದಲ್ಲಿ ಮಹಾರಾಷ್ಟ್ರ ಅತಿ ಹೆಚ್ಚು ಸೋಂಕಿತರನ್ನು ಹೊಂದಿದೆ. ಇಲ್ಲಿಯೇ ಬರೋಬ್ಬರಿ 2334 ಸೋಂಕಿತರು ಇದ್ದಾರೆ. ಈ ಪೈಕಿ 160 ಜನರು ಮರಣ ಹೊಂದಿದ್ದಾರೆ. 217 ಜನರು ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ದಿನೇ ದಿನೇ ಪರಿಸ್ಥಿತಿ ಹದಗೆಡುತ್ತಿದೆ. ಒಂದೇ ದಿನ ನೂರು, ಇನ್ನೂರು ಸೋಂಕಿತರು ಪತ್ತೆ ಆಗುತ್ತಿದ್ದಾರೆ.

10 ಸಾವಿರ ದಾಟಿದ ಭಾರತ

10 ಸಾವಿರ ದಾಟಿದ ಭಾರತ

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10 ಸಾವಿರ ದಾಟಿದೆ. ಮಹಾರಾಷ್ಟ್ರ ನಂತರದಲ್ಲಿ ದೆಹಲಿ, ತಮಿಳುನಾಡು, ರಾಜಸ್ಥಾನ, ಮಧ್ಯ ಪ್ರದೇಶ, ತೆಲಂಗಾಣ, ಗುಜರಾತ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ದೆಹಲಿ 1510 ಹಾಗೂ ತಮಿಳುನಾಡು 1173 ಪಾಸಿಟಿವ್ ಕೇಸ್‌ಗಳನ್ನು ಹೊಂದಿವೆ. ದೆಹಲಿಯ ನಿಜಾಮುದ್ದೀನ್ ಕಾರ್ಯಕ್ರಮ ಸೋಂಕು ಹೆಚ್ಚಾಗಲು ಪ್ರಮುಖ ಕಾರಣವಾಯ್ತು.

English summary
Lowest coronavirus cases state in india. Arunachal Pradesh, Nagaland and Mizoram are lowest cases in india.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X