ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ರಿವಳಿ ತಲಾಖ್ ಮಸೂದೆ : ಧ್ವನಿ ಮತದ ಮೂಲಕ ಅಂಗೀಕಾರ

|
Google Oneindia Kannada News

ನವದೆಹಲಿ, ಡಿಸೆಂಬರ್ 27: ಮುಸ್ಲಿಂ ಮಹಿಳೆಯರ ಸ್ವಾತಂತ್ರ್ಯ ಕಸಿವ 'ತ್ರಿವಳಿ ತಲಾಖ್' ಪದ್ಧತಿಯ ನಿರ್ಮೂಲನೆಗೆ ಮುಂದಾಗಿರುವ ಕೇಂದ್ರ ಸರ್ಕಾರ, 'ತ್ರಿವಳಿ ತಲಾಖ್ ಮಸೂದೆ ಮಂಡನೆ'ಗೆ ಮುಂದಾಗಿದೆ.

ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸುವ ಬಗ್ಗೆ ಕೇಂದ್ರ ಸರ್ಕಾರ ಮೊದಲೇ ಯೋಚಿಸಿತ್ತು. ವಿವಾದಾತ್ಮಕ ಮಸೂದೆಯ ಬಗ್ಗೆ ಇಂದು ಲೋಕಸಭೆಯಲ್ಲಿ ಚರ್ಚೆ ನಡೆಯಲಿದ್ದು, ಕಲಾಪದಲ್ಲಿ ತನ್ನ ಪ್ರತಿಯೊಬ್ಬ ಸಂಸದರೂ ಹಾಜರಿರುವಂತೆ ಬಿಜೆಪಿ ವ್ಹಿಪ್ ಜಾರಿಗೊಳಿಸಿದೆ.

ಕಳೆದ ಆಗಸ್ಟ್ ನಲ್ಲಿ ತ್ರಿವಳಿ ತಲಾಖ್ ಗೆ ಸಂಬಂಧಿಸಿದಂತೆ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ತ್ರಿವಳಿ ತಲಾಖ್ ಅಪರಾಧ ಮತ್ತು ಅಸಾಂವಿಧಾನಿಕ ಎಂಬ ಮಹತ್ವದ ತೀರ್ಪು ನೀಡಿತ್ತು.

ಏನಿದು ತ್ರಿವಳಿ ತಲಾಖ್ ಕಾಯ್ದೆ: ಪ್ರಸ್ತುತ ತಿದ್ದುಪಡಿಯಲ್ಲೇನಿದೆ?ಏನಿದು ತ್ರಿವಳಿ ತಲಾಖ್ ಕಾಯ್ದೆ: ಪ್ರಸ್ತುತ ತಿದ್ದುಪಡಿಯಲ್ಲೇನಿದೆ?

ಸೆಪ್ಟೆಂಬರ್ 19ರಂದು ತ್ರಿವಳಿ ತಲಾಖ್ ಅನ್ನು ಅಪರಾಧವೆಂದು ಘೋಷಿಸಲು ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರ್ಕಾರ ಒಪ್ಪಿತ್ತು. ತ್ರಿವಳಿ ತಲಾಖ್ ತಿದ್ದುಪಡಿ ಮಸೂದೆಗೆ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆಯಲು ಕೇಂದ್ರ ಸರ್ಕಾರ ವಿಫಲವಾಗಿತ್ತು.

Lok Sabha to take up Triple Talaq bill today: Live updates

ತ್ರಿವಳಿ ತಲಾಖ್ ಅಪರಾಧ, ಕೇಂದ್ರದಿಂದ ಸುಗ್ರೀವಾಜ್ಞೆ ತ್ರಿವಳಿ ತಲಾಖ್ ಅಪರಾಧ, ಕೇಂದ್ರದಿಂದ ಸುಗ್ರೀವಾಜ್ಞೆ

ಇಂದು ಮತ್ತೆ ಈ ಮಸೂದೆ ಕುರಿತು ಚರ್ಚೆ ನಡೆಯಲಿದ್ದು, ಈ ಕುರಿತ ಕ್ಷಣ ಕ್ಷಣದ ಮಾಹಿತಿಯನ್ನು 'ಒನ್ ಇಂಡಿಯಾ' ಕನ್ನಡ ನೀಡಲಿದೆ.

Newest FirstOldest First
7:20 PM, 27 Dec

ಧ್ವನಿ ಮತದ ಮೂಲಕ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಅಂಗೀಕಾರವಾಗಿದೆ. ತ್ರಿವಳಿ ತಲಾಖ್ ಮಸೂದೆ ಪರ 245 ಮತಗಳು ಬಿದ್ದವು, ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಆಗಬೇಕಿದೆ.
6:50 PM, 27 Dec

ತ್ರಿವಳಿ ತಲಾಖ್ ಮಸೂದೆಯ ಚರ್ಚೆಯ ನಡುವೆಯೇ ಕಾಂಗ್ರೆಸ್ ಮತ್ತು ಎಐಎಡಿಎಂಕೆ ಸದಸ್ಯರು ಕಲಾಪದಿಂದ ಹೊರ ಹೋಗಿದ್ದಾರೆ
5:57 PM, 27 Dec

ಶಬರಿಮಲೆ ತೀರ್ಪು ಧಾರ್ಮಿಕ ಸ್ವಾತಂತ್ರ್ಯದ ಹರಣವಾಗುವುದಾದರೆ, ನಂಬಿಕೆಯ ಹರಣವಾಗುವುದಾದರೆ, ತ್ರಿವಳಿ ತಲಾಖ್ ವಿರುದ್ಧದ ತೀರ್ಪು ನಮ್ಮ ಧಾರ್ಮಿಕ ಭಾವನೆಯ ಹರಣ ಮಾಡಿದಂತೆ ಆಗುವುದಿಲ್ಲವೇ?- ಅಸಾದುದ್ದಿನ್ ಓವೈಸಿ, ಸಂಸದ
5:55 PM, 27 Dec

ಸಲಿಂಗಕಾಮ, ವ್ಯಭಿಚಾರವನ್ನು ಅಪರಾಧವಲ್ಲ ಎಂದಿರುವವರು ತ್ರಿವಳಿ ತಲಾಖ್ ಅನ್ನು ಹೇಗೆ ಅಪರಾಧವೆನ್ನುತ್ತೀರಿ?- ಅಸಾದುದ್ದಿನ್ ಓವೈಸಿ, ಎಐಎಂಐಎಂ ಸಂಸದ
5:25 PM, 27 Dec

ಈ ಕಾನೂನಿನಿಂದ ಮೂರು ವರ್ಷಗಳ ಜೈಲು ಸಜೆಯನ್ನು ವಾಪಸ್ ಪಡೆಯಿರಿ- ಧರ್ಮೇಂದ್ರ ಯಾದವ್, ಎಸ್ಪಿ ಸಂಸದ
5:04 PM, 27 Dec

ಇದು ನ್ಯಾಯದ ವಿಷಯ, ರಾಜಕೀಯದ ವಿಷಯವಲ್ಲ- ಸ್ಮೃತಿ ಇರಾನಿ, ಕೇಂದ್ರ ಸಚಿವೆ
5:03 PM, 27 Dec

ವರದಕ್ಷಿಣೆಯನ್ನು ಅಪರಾಧ ಎನ್ನುವುದಾದರೆ, ಇದನ್ನೂ ಅಪರಾಧ ಎಂದು ಏಕೆ ಕರೆಯಬಾರದು- ಸ್ಮೃತಿ ಇರಾನಿ, ಕೇಂದ್ರ ಸಚಿವೆ
Advertisement
4:33 PM, 27 Dec

ಜಮ್ಮು ಕಾಶ್ಮೀರವನ್ನು ತ್ರಿವಳಿ ತಲಾಖ್ ನಿಂದ ಏಕೆ ದೂರವಿಟ್ಟಿದ್ದೀರಿ? - ಅರವಿಂದ್ ಗಣಪತ್ ಸಾವಂತ್, ಶಿವಸೇನಾ ಸಂಸದ
4:25 PM, 27 Dec

ಯಾವ ಧರ್ಮದಲ್ಲೂ ವಿಚ್ಛೇದನವನ್ನು ಅಪರಾಧ ಎಂದು ಪರಿಗಣಿಸಿಲ್ಲ. ಮತ್ತು ಜೈಲಿನಲ್ಲಿರುವ ಪತಿ ಜೀವನಾಂಶವನ್ನು ಕೊಡುವುದು ಹೇಗೆ ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕು- ಜಯದೇವ್ ಗಲ್ಲಾ, ಟಿಡಿಪಿ ಸಂಸದ
4:19 PM, 27 Dec

ಮಸೂದೆಗೆ ಸಂಬಮಧಿಸಿದ ಕೆಲವು ವಿರೋಧಗಳನ್ನು ಗಮನಿಸಿ, ಹೊಸ ಕಾಯ್ದೆಯನ್ನು ನಾವು ಜಾರಿಗೆ ತರುತ್ತೇವೆ- ಮುಕ್ತಾರ್ ಅಬ್ಬಾಸ್ ನಖ್ವಿ, ಅಲ್ಪಸಂಖ್ಯಾತ ಖಾತೆ ಸಚಿವ
4:17 PM, 27 Dec

ತ್ರಿವಳಿ ತಲಾಖ್ ಕಾಯ್ದೆಯನ್ವಯ ಪತಿಯನ್ನು ಜೈಗೆ ಕಳಿಸಬಹುದು. ಆದರೆ ಸಂತ್ರಸ್ಥೆ ಮತ್ತು ಮಕ್ಕಳ ಬದುಕನ್ನು ನಿರ್ವಹಿಸುವ ಕೆಲಸವೂ ಅವನ ಮೇಲಿರುವಾಗ ಜೈಲಿನಲ್ಲಿದ್ದುಕೊಂಡು ಆತ ಹೇಗೆ ಆ ಕೆಲಸ ಮಾಡಬೇಕು?- ಬಿಜೆಡಿ ಸಂಸದ ರವೀಂದ್ರ ಕುಮಾರ್ ಜೆನಾ
3:45 PM, 27 Dec

ಪ್ರಧಾನಿ ಮೋದಿ ಮತ್ತು ರವಿಶಂಕರ್ ಪ್ರಸಾದ್ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಏಕೆಂದರೆ ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣೆಗೆ ಈ ಸರ್ಕಾರ ಬದ್ಧವಾಗಿದೆ- ಮುಕ್ತಾರ್ ಅಬ್ಬಾಸ್ ನಖ್ವಿ, ಬಿಜೆಪಿ ಸಂಸದ
Advertisement
3:41 PM, 27 Dec

ಮಹಿಳೆಯರ ಹಕ್ಕನ್ನು ರಕ್ಷಿಸುವುದು ನಮ್ಮ ಹೊಣೆ ನಿಜ. ತ್ರಿವಳಿ ತಲಾಖ್ ಅನ್ನು ಅಪರಾಧವನ್ನಾಗಿ ಪರಿಗಣಿಸುವ ಬಗ್ಗೆ ನಮ್ಮ ಒಪ್ಪಿಗೆಯಿಲ್ಲ- ಸುದೀಪ್ ಬಂಡೋಪಾಧ್ಯಾಯ, ಕೋಲ್ಕತ್ತಾ ಸಂಸದ
3:39 PM, 27 Dec

ಮುಸ್ಲಿಂ ಮಹಿಳೆಯರನ್ನು ಇಂಥ ವಿಚ್ಛೇದನ ಪದ್ಧತಿಯಿಂದ ರಕ್ಷಿಸುವ ಅಗತ್ಯವಿದೆ ಎಂಬುದರಲ್ಲಿ ಅನುಮಾನವಿಲ್ಲ. ಕೇವಲ ಮದುವೆಯಾದ ಮಹಿಳೆಯರ ಬಗ್ಗೆ ಮಾತ್ರವಲ್ಲ, ಅವಿವಾಹಿತ ಮಹಿಳೆಯರ ಹಕ್ಕಿನ ರಕ್ಷಣೆಯೂ ನಮ್ಮ ಹೊಣೆ-ಸುದೀಪ್ ಬಂಡೋಪಾಧ್ಯಾಯ, ಕೋಲ್ಕತ್ತಾ ಸಂಸದ
3:30 PM, 27 Dec

"ಈ ಮಸೂದೆಗೆ ಖಂಡಿತ ನಮ್ಮ ಬೆಂಬಲವಿಲ್ಲ. ಕೇಂದ್ರ ಸರ್ಕಾರ ವಿಪಕ್ಷಗಳ ಭಾವನೆಯನ್ನೂ, ಮುಸ್ಲಿಮರ ಧಾರ್ಮಿಕ ಭಾವನೆಯನ್ನೂ ಅರ್ಥಮಾಡಿಕೊಳ್ಳುತ್ತಿಲ್ಲ" ಎ ಅನ್ವರ್ ರಾಜಾ, ಎಐಎಡಿಎಂಕೆ ರಾಮನಾಥಪುರಂ ಸಂಸದ
3:28 PM, 27 Dec

"ಈ ಮಸೂದೆ ಮುಸ್ಲಿಂ ಪುರುಷರ ಮೇಲೆ ದೌರ್ಜನ್ಯ ಎಸಗುತ್ತದೆ ಮತ್ತು ಕುಟುಂಬವನ್ನು ನಾಶ ಮಾಡುತ್ತದೆ. ಭಾರತದಲ್ಲಿ ಎಲ್ಲರಿಗೂ ತಮಗೆ ಇಷ್ಟವಾದ ಧಾರ್ಮಿಕ ಪದ್ಧತಿಯನ್ನು ಅನುಸರಿಸುವ ಅಧಿಕಾರವಿದೆ. ಈ ಮಸೂದೆ ಮಂಡನೆ ಮಾಡುವುದರಿಂದ ವ್ಯಕ್ತಿಯ ಧಾರ್ಮಿಕ ಸ್ವಾತಂತ್ರ್ಯ ಕಸಿದಂತಾಗುತ್ತದೆ "- ಎ ಅನ್ವರ್ ರಾಜಾ, ಎಐಎಡಿಎಂಕೆ ರಾಮನಾಥಪುರಂ ಸಂಸದ
3:23 PM, 27 Dec

'ಈ ಮಸೂದೆ ಮನೆ ಮತ್ತು ಕುಟುಂಬವನ್ನು ನಾಶ ಮಾಡುತ್ತಿದೆ. ಅಪರಾಧ ಎಂದು ಪರಿಗಣಿಸಿದರೆ ಆ ಕುಟುಂಬವನ್ನು ನೋಡಿಕೊಳ್ಳುವವರು ಯಾರು?' ಎ ಅನ್ವರ್ ರಾಜಾ, ಎಐಎಡಿಎಂಕೆ ರಾಮನಾಥಪುರಂ ಸಂಸದ
3:22 PM, 27 Dec

'ಕೇವಲ ಮುಸ್ಲಿಂ ಪುರುಷರನ್ನಷ್ಟೇ ಗುರಿಯಾಗಿರಿಸಿರುವ ಈ ಸೂದೆ ಬಗ್ಗೆ ನಮ್ಮ ವಿರೋಧವಿದೆ. ಇದನ್ನು ಅಪರಾಧ ಎಂದು ಪರಿಗಣಿಸಿ ಮೂರು ವರ್ಷಗಳ ಶಿಕ್ಷೆ ನೀಡುವ ಕ್ರಮವನ್ನೂ ನಾವು ವಿರೋಧಿಸುತ್ತೇವೆ'- ಎ ಅನ್ವರ್ ರಾಜಾ, ಎಐಎಡಿಎಂಕೆ ರಾಮನಾಥಪುರಂ ಸಂಸದ
3:15 PM, 27 Dec

‌ಕುರಾನ್ ಸಾಲುಗಳನ್ನು ಉಲ್ಲೇಖಿಸಿ, ತ್ರಿವಳಿ ತಲಾಖ್ ಮಸೂದೆ ಮಂಡನೆಯ ಅಗತ್ಯ ವಿವರಿಸಿದ ಸಂಸದೆ ಮೀನಾಕ್ಷಿ ಲೇಖಿ
3:07 PM, 27 Dec

ಸುಪ್ರೀಂ ಕೋರ್ಟ್ ಹೇಳಿದೆ 'ಘನತೆಯಿಂದ ಬದುಕುವುದು ಪ್ರತಿಯೊಬ್ಬರ ಹಕ್ಕು' ಎಂದು. ಆದ್ದರಿಂದ ದೇಶದ ಸಂಸತ್ತು ಆ ನಿಟ್ಟಿನಲ್ಲಿ ಕಾನೂನು ರಚಿಸುತ್ತಿದೆ- ಮೀನಾಕ್ಷಿ ಲೇಖಿ, ಬಿಜೆಪಿ ಸಂಸದೆ
3:00 PM, 27 Dec

ಮಹಿಳೆಯ ಸಬಲೀಕರಣಕ್ಕಾಗಿ ನಮ್ಮ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಲು ನನಗೆ ಹೆಮ್ಮೆ ಎನ್ನಿಸುತ್ತದೆ- ಮೀನಾಕ್ಷಿ ಲೇಖಿ, ಬಿಜೆಪಿ ಸಂಸದೆ
2:58 PM, 27 Dec

ನಾವು ಮದುವೆಯ ಮಾತನಾಡುತ್ತಿದ್ದೇವೆ, ಕಾಂಗ್ರೆಸ್ ವಿಚ್ಛೇದನದ ಮಾತನಾಡುತ್ತದೆ. ಬಟ್ಟೆ ಬದಲಿಸಿದಂತೆ ಪತ್ನಿಯನ್ನು ಬದಲಿಸುವ ಪದ್ಧತಿಯನ್ನು ಹೇಗೆ ಬೆಂಬಲಿಸುತ್ತೀರಿ? -ಮೀನಾಕ್ಷಿ ಲೇಖಿ, ಬಿಜೆಪಿ ಸಂಸದೆ
2:55 PM, 27 Dec

ನಮ್ಮ ದೇಶದಲ್ಲಿರುವುದು ಏಕರೂಪ ನಾಗರಿಕ ಸಂಹಿತೆಯೇ ಹೊರತು ಏಕರೂಪ ಧಾರ್ಮಿಕ ಸಂಹಿತೆಯಲ್ಲ- ಮೀನಾಕ್ಷಿ ಲೇಖಿ
2:54 PM, 27 Dec

ಮಹಿಳೆಯರಿಗೆ ಸಂಬಂಧಿಸಿದಂತೆ ಯಾವುದೇ ಮಸೂದೆ ಮಂಡನೆಯಾಗಬೇಕು ಎಂದರೆ ಅದು ಮಹಿಳೆ ಮತ್ತು ಪುರುಷರ ನಡುವಿನ ಯುದ್ಧವಲ್ಲ, ಅದಕ್ಕೆ ಪುರುಷರ ಬೆಂಬಲವೂ ಅಗತ್ಯ- ಮೀನಾಕ್ಷಿ ಲೇಖಿ, ಬಿಜೆಪಿ ಸಂಸದೆ
2:49 PM, 27 Dec

ಇದು ಮುಸ್ಲಿಂ ಮಹಿಳೆಯರ ಸಬಲೀಕರಣದ ಮಸೂದೆಯಲ್ಲ, ಮುಸ್ಲಿಂ ಪುರುಷರ ವಿರುದ್ಧ ಕಾನೂನು ಸಮರ ಮಾಡುವ ಮಸೂದೆ- ಸುಷ್ಮಿತಾ ದೇವ್, ಸಂಸದೆ
2:47 PM, 27 Dec

ಮುಸ್ಲಿಂ ಮಹಿಳೆಯರ ಸಬಲೀಕರಣಕ್ಕೇನಾದರೂ ಅತ್ಯುತ್ತಮ ಕಾನೂನು ತಂದಿದ್ದರೆ ಅದು ರಾಜೀವ್ ಗಾಂಧಿ ಸರ್ಕಾರ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ- ಸುಷ್ಮಿತಾ ದೇವ್, ಸಂಸದೆ
2:43 PM, 27 Dec

ತ್ರಿವಳಿ ತಲಾಖ್ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಯಾವ ಪುಟದಲ್ಲೂ ತಲಾಖ್ ಅನ್ನು ಅಪರಾಧವೆಂದು ಪರಿಗಣಿಸುವ ಬಗ್ಗೆ ಉಲ್ಲೇಖಿಸಲಾಗಿಲ್ಲ- ಸುಷ್ಮಿತಾ ದೇವ್, ಕಾಂಗ್ರೆಸ್ ಸಂಸದೆ
2:39 PM, 27 Dec

ವರದಕ್ಷಿಣೆ ಕೇಳುವವರನ್ನು ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ಎಸಗುವವರನ್ನು ಬಂಧಿಸಿ, ಶಿಕ್ಷೆ ನೀಡುವಂತೆಯೇ ಇದಕ್ಕೂ ನೀಡಬೇಕು. ಈ ವಿಷಯದಲ್ಲಿ ಮಾತ್ರ ಲೋಕಸಭೆ ಏಕೆ ವಿರುದ್ಧ ನಿಲ್ಲಬೇಕು?- ರವಿಶಂಕರ್ ಪ್ರಸಾದ್, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ
2:35 PM, 27 Dec

ಮಸೂದೆಯ ವಿರುದ್ಧ ದನಿ ಎತ್ತಿದ ಎನ್ ಸಿಪಿ, ಎಎಪಿ ಮತ್ತು ಎಐಎಂಐಎಂ
2:30 PM, 27 Dec

20 ಇಸ್ಲಾಮಿಕ್ ರಾಷ್ಟ್ರಗಳೇ ತ್ರಿವಳಿ ತಲಾಖ್ ಅನ್ನು ನಿಷೇಧಿಸಿವೆ. ಅಂದಮೇಲೆ ಜಾತ್ಯಾತೀತ ಭಾರತದಲ್ಲೇಕೆ ಆ ಪದ್ಧತಿ ಇನ್ನೂ ಇದೆ? ಇದು ರಾಜಕೀಯದ ಹೊರತಾಗಿ ಮಂಡನೆಯಾಗಬೇಕು- ರವಿಶಂಕರ್ ಪ್ರಸಾದ್, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ
READ MORE

English summary
Revised bill to make instant Triple Talaq a punishable offence is expected to be passed by the Lok Sabha today in winter session. Here are the LIVE updates in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X