ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್‌ರನ್ನು ಸೋಲಿಸಿದ ಸ್ಮೃತಿ ಇರಾನಿಗೆ ಭರ್ಜರಿ ಚಪ್ಪಾಳೆ ಸ್ವಾಗತ

|
Google Oneindia Kannada News

ನವದೆಹಲಿ, ಜೂನ್ 17: ಲೋಕಸಭೆ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸೋಲಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಸೋಮವಾರ ಆರಂಭವಾದ ಮಳೆಗಾಲದ ಅಧಿವೇಶನದಲ್ಲಿ ಪ್ರಮಾಣವಚನ ಸ್ವೀಕರಿಸಿದಾಗ ಭರ್ಜರಿ ಚಪ್ಪಾಳೆಯ ಶ್ಲಾಘನೆ ವ್ಯಕ್ತವಾಯಿತು.

ಸ್ಮೃತಿ ಅವರನ್ನು ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಿದಾಗ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಇತರೆ ಕೇಂದ್ರ ಸಚಿವರು ಮತ್ತು ಸಂಸದರು ಸೇರಿದಂತೆ ಆಡಳಿತಾರೂಢ ಎನ್‌ಡಿಎದ ಸದಸ್ಯರು ಬೆಂಚನ್ನು ಸುದೀರ್ಘ ಸಮಯ ತಟ್ಟುವ ಮೂಲಕ ಸ್ವಾಗತಿಸಿದರು.

ಗುರುವಿನ ಹೆಸರು ಬಳಕೆ: ಸಾಧ್ವಿ ಪ್ರಗ್ಯಾ ಪ್ರಮಾಣವಚನ ಸ್ವೀಕಾರಕ್ಕೆ ಅಡ್ಡಿ ಗುರುವಿನ ಹೆಸರು ಬಳಕೆ: ಸಾಧ್ವಿ ಪ್ರಗ್ಯಾ ಪ್ರಮಾಣವಚನ ಸ್ವೀಕಾರಕ್ಕೆ ಅಡ್ಡಿ

ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಸ್ಮೃತಿ ಇರಾನಿ, ಹಂಗಾಮಿ ಸ್ಪೀಕರ್ ವೀರೇಂದ್ರ ಕುಮಾರ್, ರಾಹುಲ್ ಗಾಂಧಿ ಅವರ ತಾಯಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ವಿರೋಧಪಕ್ಷದ ಸದಸ್ಯರಿಗೆ ಶುಭಾಶಯ ಕೋರಿದರು.

lok sabha Smriti irani recieves applause while taking oath

ಈ ಸಂದರ್ಭದಲ್ಲಿ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಹಾಜರಿರಲಿಲ್ಲ. ಸಚಿವೆ ಸ್ಮೃತಿ ಇರಾನಿ ಅವರು ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ 55 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸೋಲಿಸಿದ್ದರು. ಸುದೀರ್ಘ ಕಾಲದ ಗಾಂಧಿ ಕುಟುಂಬದ ಪ್ರಬಲ ಕ್ಷೇತ್ರವಾಗಿದ್ದ ಅಮೇಥಿಯಲ್ಲಿ ಮೊದಲ ಬಾರಿಗೆ ಕುಟುಂಬದ ಸದಸ್ಯರೊಬ್ಬರನ್ನು ಸೋಲಿಸುವ ಮೂಲಕ ಸ್ಮೃತಿ ಇತಿಹಾಸ ಬರೆದಿದ್ದಾರೆ.

English summary
Union Minister Smriti Irani was greeted and applaused by ruling BJP members in Lok Sabha while taking oath. She had defeated Congress President Rahul Gandhi in Amethi constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X