ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುವಿನ ಹೆಸರು ಬಳಕೆ: ಸಾಧ್ವಿ ಪ್ರಗ್ಯಾ ಪ್ರಮಾಣವಚನ ಸ್ವೀಕಾರಕ್ಕೆ ಅಡ್ಡಿ

|
Google Oneindia Kannada News

ನವದೆಹಲಿ, ಜೂನ್ 17: ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್ ಅವರನ್ನು ಸೋಲಿಸಿ ಆಯ್ಕೆಯಾಗಿರುವ ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರು ಸೋಮವಾರ ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ವಿರೋಧಪಕ್ಷಗಳ ಸಂಸದರು ಗದ್ದಲವೆಬ್ಬಿಸಿದರು.

ಸಾಧ್ವಿ ಅವರು ಪ್ರಮಾಣ ವಚನ ಸ್ವೀಕರಿಸುವ ಪತ್ರದಲ್ಲಿ ನಮೂದಿಸದೆ ಇರುವ ತಮ್ಮ ಗುರುವಿನ ಹೆಸರನ್ನು ಉಲ್ಲೇಖಿಸಿದ್ದಕ್ಕೆ ತೀವ್ರ ಆಕ್ಷೇಪ ಎದುರಾಯಿತು.

ಪ.ಬಂಗಾಳದ ಬಿಜೆಪಿ ಸಂಸದನ ಪ್ರಮಾಣವಚನದ ವೇಳೆ ಮೊಳಗಿದ ಜೈಶ್ರೀರಾಂ ಘೋಷಣೆ ಪ.ಬಂಗಾಳದ ಬಿಜೆಪಿ ಸಂಸದನ ಪ್ರಮಾಣವಚನದ ವೇಳೆ ಮೊಳಗಿದ ಜೈಶ್ರೀರಾಂ ಘೋಷಣೆ

ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಪ್ರಗ್ಯಾ, 'ನಾನು.. ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಪೂರ್ಣ್ ಚೇತಾನಂದ್ ಅವಧೇಶಾನಂದ್ ಗಿರಿ' ಎಂದು ಆರಂಭಿಸಿದರು. ಆಗ ಅವರು ಪ್ರಮಾಣವಚನ ಸ್ವೀಕಾರದ ಪದಗಳನ್ನು ಪ್ರಗ್ಯಾ ಬದಲಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

lok sabha sadhvi pragya singh oath taking ruckus swami avdheshanand

ಪ್ರಗ್ಯಾ ಅವರು ಚುನಾವಣಾ ಅಫಿಡವಿಟ್‌ನಲ್ಲಿ ಸಲ್ಲಿಸಿದ ದಾಖಲೆಗಳಲ್ಲಿ ಅವರ ಗುರು ಸ್ವಾಮಿ ಅವಧೇಶಾನಂದ ಗಿರಿ ಅವರ ಹೆಸರು ನಮೂದಾಗಿಲ್ಲ ಮತ್ತು ಹೀಗೆ ಹೆಸರು ಬಳಸಿಕೊಳ್ಳುವುದಕ್ಕೆ ನಿಯಮಗಳ ಅಡಿ ಅವಕಾಶವಿಲ್ಲ ಎಂದು ಹೇಳಿದರು.

ದಾಖಲೆಗಳನ್ನು ಪರಿಶೀಲಿಸಲು ಪಡೆದುಕೊಂಡು ಅದಕ್ಕೆ ಅನುಗುಣವಾಗಿ ಗಣನೆಗೆ ತೆಗೆದುಕೊಳ್ಳುವುದಾಗಿ ಹಂಗಾಮಿ ಸ್ಪೀಕರ್ ವೀರೇಂದ್ರ ಕುಮಾರ್ ಹೇಳಿದರು.

ಪಂಚೆ, ಶಲ್ಯ ತೊಟ್ಟು ಸಂಸತ್ ಪ್ರವೇಶಿಸಿದ ತೇಜಸ್ವಿ ಸೂರ್ಯಪಂಚೆ, ಶಲ್ಯ ತೊಟ್ಟು ಸಂಸತ್ ಪ್ರವೇಶಿಸಿದ ತೇಜಸ್ವಿ ಸೂರ್ಯ

ಈ ಗದ್ದಲದ ನಡುವೆಯೇ ಲೋಕಸಭೆಯ ಅಧಿಕಾರಿಗಳು ಪ್ರಮಾಣ ವಚನದಲ್ಲಿ ತಮ್ಮ ತಂದೆಯ ಹೆಸರನ್ನು ಸೇರಿಸುವಂತೆ ಪ್ರಗ್ಯಾ ಸಿಂಗ್ ಅವರಿಗೆ ಸೂಚಿಸಿದರು. ಕಡತ ಪರಿಶೀಲಿಸಿದ ಸ್ಪೀಕರ್, ಚುನಾವಣಾ ಆಯೋಗ ನೀಡಿದ ವಿಜಯ ಪ್ರಮಾಣಪತ್ರವನ್ನು ಒದಗಿಸುವಂತೆ ನಿರ್ದೇಶಿಸಿದರು. ಎರಡು ಬಾರಿ ತಡೆವೊಡ್ಡಿದ ಬಳಿಕ ಸಾಧ್ವಿ ಪ್ರಗ್ಯಾ ಮೂರನೇ ಪ್ರಯತ್ನದಲ್ಲಿ ಕೊನೆಗೂ ಪ್ರಮಾಣವಚನ ಸ್ವೀಕರಿಸಿದರು.

English summary
Lok Sabha witnessed ruckus after Sadhvi Pragya Singh Thakoor mentioned her guru Swami Avdheshanand giri name while taking her oath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X