ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ದೇಶಕ್ಕಾಗಿ ಮುಸ್ಲಿಮರು ಬಿಜೆಪಿಗೆ ಮತ ಹಾಕಬೇಕು'

By Srinath
|
Google Oneindia Kannada News

ನವದೆಹಲಿ, ಫೆ. 26- ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಭಾರತೀಯ ಜನತಾ ಪಕ್ಷವತಿಯಿಂದ ಈ ಹಿಂದೆ ಆಗಿರುವ ಯಾವುದೇ 'ತಪ್ಪು/ಕೊರತೆ'ಗಳಿಗೆ ಮುಸ್ಲಿಂ ಸಮುದಾಯದ ಕ್ಷಮೆಯಾಚಿಸಲು ತಾವು ಸಿದ್ಧ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಹೇಳಿದ್ದಾರೆ.

ತಪ್ಪಾಗಿದ್ದರೆ ಮುಸ್ಲಿಂ ಸಮುದಾಯದ ಕ್ಷಮೆಗೆ ಸಿದ್ದ: ಬಿಜೆಪಿ

Lok Sabha election 2014- Try us ready to apologise for mistake: BJP Rajnath Singh to Muslims

'ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಈ ಹೇಳಿಕೆ ನೀಡಿದ್ದು, ಮುಸ್ಲಿಮರ ಓಲೈಕೆಗೆ ಹೊರಟಂತಿದೆ. 'ಬಿಜೆಪಿ ಸಮಾನತೆಯಲ್ಲಿ ನಂಬಿಕೆ ಹೊಂದಿದೆ. ಈ ಹಿಂದೆ ಆಗಿರುವ ತಪ್ಪುಗಳು ಅಥವಾ ಮತ್ಯಾವುದೇ ಬಗೆಯ ಕೊರತೆಗಳಿಗೆ ಮುಸ್ಲಿಂ ಸಮುದಾಯದ ಕ್ಷಮೆ ಕೋರಲು ಪಕ್ಷ ಸಿದ್ಧವಿದೆ' ಎಂದು ರಾಜನಾಥ್ ಸಿಂಗ್ ಪ್ರಕಟಿಸಿದ್ದಾರೆ.

ಮಂಗಳವಾರ ಇಲ್ಲಿ ನಡೆದ 'Modi for PM- Mission 272 Plus, Role of Muslims' ಹೆಸರಿನ ಮುಸ್ಲಿಮರ ಸಮಾವೇಶದಲ್ಲಿ ಮಾತನಾಡಿದ ರಾಜನಾಥ್ ಸಿಂಗ್ ಈ ಮಾತು ಹೇಳಿದ್ದಾರೆ. ಮುಸ್ಲಿಂ ಸಮುದಾಯದವರು ದೇಶದ ಮತದಾರರ ಪ್ರಮಾಣದಲ್ಲಿ ಶೇ. 15 ರಷ್ಟಿದ್ದಾರೆ.

ದೇಶಕ್ಕಾಗಿ ಮುಸ್ಲಿಮರು ಬಿಜೆಪಿಗೆ ಮತ ಹಾಕಬೇಕು:
ಬಿಜೆಪಿಗೆ ಒಂದು ಅವಕಾಶ ಕೊಡಿ. ಕಾಂಗ್ರೆಸ್ ಪಕ್ಷದ ಅಪಪ್ರಚಾರಗಳಿಗೆ ಕಿವಿಗೊಡಬೇಡಿ ಎಂದೂ ಅವರು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು. 'ದಯವಿಟ್ಟು ಗಮನದಲ್ಲಿಡಿ, ಎಂದಾದರೂ, ಎಲ್ಲಾದರೂ ನಮ್ಮ ಕಡೆಯಿಂದ ಯಾವುದೇ ತಪ್ಪುಗಳು ಮತ್ತು ಕೊರತೆಗಳು ಉಂಟಾಗಿದ್ದಲ್ಲಿ ಶಿರ ಬಾಗಿ, ನಿಮ್ಮಲ್ಲಿ ಕ್ಷಮೆ ಕೋರುತ್ತೇವೆ. ಇದು ನಾನು ನಿಮಗೆ ನೀಡುವ ಆಶ್ವಾಸನೆ' ಎಂದು ಅವರು ಹೇಳಿದರು.

ಬಿಜೆಪಿ ಮುಸ್ಲಿಮರ ವಿರೋಧಿಯಲ್ಲ. ಪಕ್ಷದ ವಿರುದ್ಧದ ಅಪಪ್ರಚಾರಗಳನ್ನು ಮುಸ್ಲಿಂ ಸಮುದಾಯ ನಂಬಬಾರದು. ದೇಶಕ್ಕೋಸ್ಕರ ಈ ಬಾರಿ ಮುಸ್ಲಿಮರು ಬಿಜೆಪಿಗೆ ಮತ ಹಾಕಬೇಕು ಎಂದು ಅವರು ಮನವಿ ಮಾಡಿಕೊಂಡರು.

'ನಮಗೊಂದು ಅವಕಾಶ ಕೊಟ್ಟು ನೋಡಿ. ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡದೇ ಇದ್ದಲ್ಲಿ ಮತ್ತೆ ನಮ್ಮತ್ತ ನೋಡಬೇಡಿ. ಮುಸ್ಲಿಮರು ಒಂದು ಸರಕಾರ ರಚನೆಗಷ್ಟೇ ಮತ ಹಾಕಬಾರದು. ಒಂದು ಪ್ರಬಲ ರಾಷ್ಟ್ರಕ್ಕಾಗಿ ಮತ ನೀಡಬೇಕು. ಅಲ್ಲಿ ಸಹೋದರತ್ವ ಮತ್ತು ಮಾನವತೆ ಮನೆ ಮಾಡಿರುತ್ತದೆ' ಎಂದು ರಾಜನಾಥ್ ಸಿಂಗ್ ತಿಳಿಸಿದರು.

English summary
Lok Sabha polls 2014: Try us ready to apologise for mistake: BJP Rajnath Singh to Muslims. The BJP has said it was ready to apologise to Muslims for any mistake. 'Try us once. We don't come up to your expectations, don't look at us ever again' he said at an election agenda meeting titled, Modi for PM- Mission 272 Plus, Role of Muslims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X