ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲೇಜ್ ಕ್ಯಾಂಪಸ್ಸುಗಳಲ್ಲಿ ಇನ್ಮುಂದೆ ಮೋದಿ ಕೆಫೆ

By Srinath
|
Google Oneindia Kannada News

ನವದೆಹಲಿ, ಫೆ.7- ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಚಹಾ ರಾಜಕೀಯ ಈಗ ಮತ್ತೊಂದು ಮಜಲು ತಲುಪುತ್ತಿದೆ. ಬಿಜೆಪಿ ಸಭೆಗಳಲ್ಲಿ ಸಾಂಕೇತಿಕವಾಗಿ ಬಿಸಿ ಬಿಸಿ ಚಹಾ ಮಾರಾಟವಾಗುತ್ತಿರುವ ಸಂದರ್ಭದಲ್ಲೇ ಬಿಸಿ ರಕ್ತದ ಯುವಕರನ್ನು ಪಕ್ಷದತ್ತ ಸೆಳೆಯಲು ಬಿಜೆಪಿಯು ಇನ್ಮುಂದೆ ಕಾಲೇಜುಗಳಲ್ಲಿ 'ಮೋದಿ ಕೆಫೆ'ಗಳನ್ನು ತೆರೆಯಲು ನಿರ್ಧರಿಸಿದೆ.

'A lot can happen over a cup of coffee' ಎಂಬ ಜಾಣ್ನುಡಿಗೆ ತಕ್ಕಂತೆ ದೇಶಾದ್ಯಂತ 537 ಜಿಲ್ಲೆಗಳಲ್ಲಿ 2,730 ಶೈಕ್ಷಣಿಕ ಸಂಸ್ಥೆಗಳಲ್ಲಿ 'Modi Cafe' ಸ್ಥಾಪಿಸಲು ಪಕ್ಷ ಮುಂದಾಗಿದೆ.

lok-sabha-polls-narendra-modi-cafe-in-college-campuse-to-attract-youth
ಬಿಜೆಪಿಯ ಯುವ ಘಟಕವು ಒಟ್ಟು 10,200 ಕಾಲೇಜು ಕ್ಯಾಂಪಸ್ಸುಗಳನ್ನು ಈ ಕಾರ್ಯಾರ್ಥವಾಗಿ ಗುರುತಿಸಿದೆ. ಈ campus ambassador ಗಳು ದೇಶಾದ್ಯಂತ ಮೋದಿ ಕೆಫೆಗಳನ್ನು ತೆರೆದು ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಮತ ಯಾಚಿಸಲಿದ್ದಾರೆ ಎಂದು Bhartiya Janta Yuva Morcha ತಿಳಿಸಿದೆ.

ಅಂದಹಾಗೆ ಫೆಬ್ರವರಿ 10ರಿಂದ ಈ ಮೋದಿ ಕೆಫೆಗಳು ಆಯಾ ಕಾಲೇಜುಗಳ ಆವರಣಗಳಲ್ಲಿ ಕಾರ್ಯಾರಂಭಿಸಲಿವೆ. ಮೋದಿ ಅವರ ರಾಜಕೀಯ ನಿಲುವು- ನೀತಿಗಳು ಇಲ್ಲಿನ ಚರ್ಚಾ ವಿಷಯಗಳಾಗಲಿವೆ ಎಂದು ಭಾರತೀಯ ಜನತಾ ಯುವ ಮೋರ್ಚಾ (BJYM) ಪ್ರಕಟಣೆಯಲ್ಲಿ ತಿಳಿಸಿದೆ.

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಂತಲೇ ಅಲ್ಲ. ಬಿಜೆಪಿಯೇತರ ಸರಕಾರವಿರುವ ರಾಜ್ಯಗಳಲ್ಲಿಯೂ ಮೋದಿ ಕೆಫೆಗೆ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಇಂತಹ ಚರ್ಚಾ ವೇದಿಕೆಗಳಿಂದ ಪಕ್ಷಕ್ಕೆ ಉ್ತತಮ ಫಲಿತಾಂಶ ದಕ್ಕಲಿದೆ ಎಂದು BJYM ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ 2,130 ಮೋದಿ ಕೆಫೆ ರಾಯಭಾರಿಗಳು ಆಯ್ಕೆಗೊಂಡಿದ್ದಾರೆ. ಗುಜರಾತಿನಲ್ಲಿ 1001, ಹರ್ಯಾಣಾದಲ್ಲಿ 976, ಮಹಾರಾಷ್ಟ್ರ 766, ಪಶ್ಚಿಮ ಬಂಗಾಲ 234 ಮತ್ತು ಆಂಧ್ರಪ್ರದೇಶದಲ್ಲಿ 350 ರಾಯಭಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಅನುರಾಗ್ ತಿಳಿಸಿದ್ದಾರೆ.

English summary
Lok Sabha polls 2014- Narendra Modi Cafe in college campuses to woo youth. To encourage youths to support Narendra Modi, BJP's youth wing has selected 10,220 "campus ambassadors" who will start 'Modi Cafe' in their respective colleges across the country to seek votes for the BJP's prime ministerial candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X