ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭಾ ಚುನಾವಣೆ: ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

|
Google Oneindia Kannada News

ನವದೆಹಲಿ, ಮಾರ್ಚ್ 16: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ತನ್ನ 18 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕಾಂಗ್ರೆಸ್ ಬಿಡುಗಡೆ ಮಾಡಿರುವ ಮೂರನೇ ಪಟ್ಟಿಯಲ್ಲಿ ಮೇಘಾಲಯದ ತುರಾ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಮುಖುಲ್ ಸಂಗ್ಮಾ, ಅಸ್ಸಾಂನಲ್ಲಿ ಐವರು, ಮೇಘಾಲಯದಲ್ಲಿ ಇಬ್ಬರು, ಉತ್ತರ ಪ್ರದೇಶದಲ್ಲಿ ಒಬ್ಬರು, ಸಿಕ್ಕಿಂ ಮತ್ತು ನಾಗಲ್ಯಾಂಡ್ ನಲ್ಲಿ ತಲಾ ಒಬ್ಬರು, ತೆಲಂಗಾಣದಲ್ಲಿ ಎಂಟು ಮಂದಿ ಅಭ್ಯರ್ಥಿಗಳಿದ್ದಾರೆ.

ಲೋಕ ಸಮರ : ಕಾಂಗ್ರೆಸ್ 2ನೇ ಪಟ್ಟಿಯಲ್ಲಿ ಪ್ರಿಯಾ ದತ್ ಅಚ್ಚರಿಯ ಸೇರ್ಪಡೆ ಲೋಕ ಸಮರ : ಕಾಂಗ್ರೆಸ್ 2ನೇ ಪಟ್ಟಿಯಲ್ಲಿ ಪ್ರಿಯಾ ದತ್ ಅಚ್ಚರಿಯ ಸೇರ್ಪಡೆ

ಅಸ್ಸಾಂನ ಸಿಲ್ಚಾರ್ ಲೋಕಸಭೆ ಕ್ಷೇತ್ರದಿಂದ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಸುಷ್ಮಿತಾ ದೇವ್, ಕಲಿಯಾಬೊರ್ ಕ್ಷೇತ್ರದಿಂದ ಗೌರವ್ ಗೊಗೊಯ್ ಸ್ಪರ್ಧಿಸಲಿದ್ದಾರೆ. ಇವರಿಬ್ಬರೂ ಹಾಲಿ ಸಂಸದರಾಗಿದ್ದಾರೆ.

Lok Sabha polls Congress releases 3rd list of 18 candidates

ಶಿಲ್ಲಾಂಗ್ ನಿಂದ ಮಾಜಿ ಕೇಂದ್ರ ಸಚಿವ ಸಂಸದ ವಿನ್ಸೆಟ್ ಪಾಲಾ, ದಿಬ್ರುಗರ್ ನಿಂದ ಪಬನ್ ಸಿಂಗ್ ಘಟೊವರ್ ಅವರು ಆಯ್ಕೆಯಾಗಿದ್ದಾರೆ. ಉತ್ತರ ಪ್ರದೇಶ ಮೀಸಲಾತಿ ಕ್ಷೇತ್ರದಿಂದ ಬಾರಾಬಂಕಿಯಿಂದ ದಲಿತ ಮುಖಂಡ ಪಿ ಎಲ್ ಪುನಿಯಾ ಅವರ ಪುತ್ರ ತನುಜ ಪುನಿಯಾ ಸ್ಪರ್ಧೆಗಿಳಿದಿದ್ದಾರೆ.

ಕಾಂಗ್ರೆಸ್ ಇಲ್ಲಿಯವರೆಗೆ ಲೋಕಸಭೆ ಚುನಾವಣೆಗೆ 54 ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದೆ. ಕೇಂದ್ರ ಚುನಾವಣಾ ಆಯೋಗವು 2019ರ ಲೋಕಸಭಾ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದೆ. ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.

ಬಿಗ್ ಬ್ರೇಕಿಂಗ್: ಬಿಜೆಪಿ ತೊರೆಯಲು ಮುಂದಾದ ಮೂರು ಪ್ರಭಾವಿ ನಾಯಕರು,ಯಾರ್ಯಾರು?ಬಿಗ್ ಬ್ರೇಕಿಂಗ್: ಬಿಜೆಪಿ ತೊರೆಯಲು ಮುಂದಾದ ಮೂರು ಪ್ರಭಾವಿ ನಾಯಕರು,ಯಾರ್ಯಾರು?

ಏಪ್ರಿಲ್ 18 ಮತ್ತು 23ರಂದು ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿವೆ. ಏಪ್ರಿಲ್ 18 ರಂದು 14 ಸ್ಥಾನ, ಏಪ್ರಿಲ್ 23ರಂದು ಉಳಿದ 14 ಸ್ಥಾನಗಳಿಗೆ ಮತದಾನ ನಡೆಯಲಿದೆ. ಚುನಾವಣಾ ಫಲಿತಾಂಶ ಮೇ 23ರಂದು ಘೋಷಣೆಯಾಗಲಿದೆ.
ಏಪ್ರಿಲ್ 11ಕ್ಕೆ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಮೇ 23ರಂದು ಮತಗಳ ಎಣಿಕೆ ನಡೆಯಲಿದೆ.

ಲೋಕಸಭೆ ಚುನಾವಣೆ: 15 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್‌ ಲೋಕಸಭೆ ಚುನಾವಣೆ: 15 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್‌

ಎರಡನೇ ಹಂತದ ಚುನಾವಣೆ ಏಪ್ರಿಲ್‌ 18ರಂದು ನಡೆಯಲಿದೆ. 3ನೇ ಹಂತದ ಚುನಾವಣೆ ಏಪ್ರಿಲ್ 23ರಂದು ನಡೆಯಲಿದೆ. 4ನೇ ಹಂತ 29 ಏಪ್ರಿಲ್, 5ನೇ ಹಂತ ಮೇ6ರಂದು, ಮೇ 12ಕ್ಕೆ 6ನೇ ಹಂತ, 7ನೇ ಹಂತದ ಚುನಾವಣೆ ಮೇ 19ರಂದು ನಡೆಯಲಿದೆ. ಮೊದಲ ಹಂತದಲ್ಲಿ 20 ರಾಜ್ಯಗಳ 91 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

English summary
The Congress late on Friday night released the third list of 18 candidates, for the upcoming Lok Sabha polls fielding former Chief Minister of Meghalaya Mukul M Sangma from Tura parliamentary constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X