ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ಲೋಕ ಚುನಾವಣೆಯಲ್ಲಿ ಇವರೇ ನಿರ್ಣಾಯಕರು!

By Srinath
|
Google Oneindia Kannada News

ನವದೆಹಲಿ, ಅ.21: ಮುಂದಿನ ವರ್ಷ ಜರುಗಲಿರುವ ಲೋಕಸಭೆ ಚುನಾವಣೆಯತ್ತ ಪ್ರಮುಖ ರಾಜಕೀಯ ಪಕ್ಷಗಳು ಅದಾಗಲೇ ಮುಖಮಾಡಿದ್ದಾರೆ. ಮೊದಲ ಬಾರಿಗೆ ಈ ಚುನಾವಣೆ ಭಾರಿ ಜಿದ್ದಾಜಿದ್ದಿಯಿಂದ ನಡೆಯುವ ಎಲ್ಲ ಸೂಚನೆಗಳೂ ಇವೆ. ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಈ ಚುನಾವಣೆ ವಿಶೇಷ ಮನ್ನಣೆ ಗಳಿಸಿದೆ. ದೇಶದ ರಾಜಕೀಯ ವ್ಯವಸ್ಥೆಯ ದಿಕ್ಕುದೆಸೆಯನ್ನು ಬದಲಾಯಿಸಬಲ್ಲದು ಎನ್ನುತ್ತಾರೆ ರಾಜಕೀಯ ಪಂಡಿತರು.

ಇದು ರಾಜಕೀಯ ಪಕ್ಷಗಳ ರಾಜಕೀಯದ ಮಟ್ಟಿಗೆ ಹೇಳಬಹುದಾದರೂ ಈ ಚುನಾವಣೆಯ ದಿಕ್ಕುದೆಸೆಯನ್ನು/ ಫಲಿತಾಂಶನ್ನೇ ಬದಲಿಸಲು ಒಂದು ವರ್ಗ ಸಿದ್ಧವಾಗಿದೆ. ಈ ವರ್ಗ ವಹಿಸಬಹುದಾದ ಪಾತ್ರ ನಿರ್ಣಾಯಕವೆನಿಸಲಿದೆ.

ಏನಪ್ಪಾ ಅಂದರೆ 2014 ರ ಚುನಾವಣೆ ವೇಳೆಗೆ ಮೊದಲ ಬಾರಿಗೆ 12 ಕೋಟಿ ಯುವ ಮತದಾರರು ಮತ ಚಲಾಯಿಸುವ ಹಕ್ಕನ್ನು ಪಡೆಯಲಿದ್ದಾರೆ. ಜತೆಗೆ ಚುನಾವಣೆಯೊಂದರಲ್ಲಿ ಒಮ್ಮೆಗೇ ಇಷ್ಟೊಂದು ಭಾರಿ ಸಂಖ್ಯೆಯಲ್ಲಿ ಮತದಾರರು ಕಾಣಿಸಿಕೊಂಡಿರುವುದು ಇದೇ ಮೊದಲು. 2011ರ ಜನಗಣತಿ ಪ್ರಕಾರ ಈ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

ಈ ಯುವಜನತೆ ಮತದಾನಕ್ಕಾಗಿ ತಪ್ಪದೇ ನೋಂದಾವಣೆ ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸುವ ಮಹತ್ತರ ಜವಾಬ್ದಾರಿ ಚುನಾವಣೆ ಆಯೋಗದ ಮೇಲಿದೆ. ಅಲ್ಲಿಂದ ಮುಂದಕ್ಕೆ ಮತಗಟ್ಟೆವರೆಗೂ ಬಂದು ಮತ ಚಲಾಯಿಸುವುದು ಬಿಡುವುದು ಅವರಿಗೇ ಬಿಟ್ಟ ವಿಚಾರ. ಆದರೆ ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬಂತೆ ಈ ಯುವ ಮತದಾರರು ತಮ್ಮ ಹಿರಿಯರನ್ನು ನೋಡಿ ಅವರಂತೆ ಮತಗಟ್ಟೆಯಿಂದ ದೂರವುಳಿದರೆ ಅದು ನಾಡಿನ ದೌಭಾಗ್ಯವೇ ಸರಿ.

ಯಾವು ಪಕ್ಷವೂ 12 ಕೋಟಿಗಿಂತ ಹೆಚ್ಚು ಮತ ಗಳಿಸಿಲ್ಲ!

ಯಾವು ಪಕ್ಷವೂ 12 ಕೋಟಿಗಿಂತ ಹೆಚ್ಚು ಮತ ಗಳಿಸಿಲ್ಲ!

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ 2009ರ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಒಂದು ಪಕ್ಷವೂ 12 ಕೋಟಿಗಿಂತ ಹೆಚ್ಚು ಮತ ಗಳಿಸಿರಲಿಲ್ಲ. ಹಾಗಾಗಿ ಈ ಯುವ ಮತದಾರರ ಕೋಟೆ ಏನಿದೆ ಅದು ಮಹತ್ತರ ಪಾತ್ರ ವಹಿಸಲಿದೆ. ಇವರೆಲ್ಲರೂ ಚುನಾವಣಾ ಆಯೋಗದಲ್ಲಿ ಈಗಿನಿಂದಲೇ ನೋಂದಾವಣೆ ಮಾಡಿಸಿಕೊಂಡು, ಮತ ಚಲಾಯಿಸಲು ಮುಂದೆ ಬರಬೇಕು. (ಚಿತ್ರ-india.blogs.nytimes.com)

ಕೋಟಿಗಿಂತ ಹೆಚ್ಚು ಮತ ಪಡೆದ ಪಕ್ಷಗಳು 4ಕ್ಕಿಂತ ಹೆಚ್ಚಿಲ್ಲ

ಕೋಟಿಗಿಂತ ಹೆಚ್ಚು ಮತ ಪಡೆದ ಪಕ್ಷಗಳು 4ಕ್ಕಿಂತ ಹೆಚ್ಚಿಲ್ಲ

ಅಂದಹಾಗೆ, 2009ರ ಲೋಕಸಭೆ ಚುನಾವಣೆಯಲ್ಲಿ Congress ಪಕ್ಷಕ್ಕೆ 11.9 ಕೋಟಿ ಮತಗಳು ಬಿದ್ದಿದ್ದವು. BJPಗೆ 7.8 ಕೋಟಿ ಮತಗಳು, BSPಗೆ 2.6 ಕೋಟಿ ಮತಗಳು ಮತ್ತು CPM 2.2 ಕೋಟಿ ಮತಗಳು. ಈ ನಾಲ್ಕು ಪಕ್ಷಗಳು ಬಿಟ್ಟರೆ ಉಳಿದ ಯಾವುದೇ ಪಕ್ಷವೂ ಕೋಟಿಗಿಂತ ಹೆಚ್ಚು ಮತ ಪಡೆದಿಲ್ಲ! (ಚಿತ್ರ- www.hindustantimes.com )

ಈಗಿರುವ ಅರ್ಹ ಮತದಾರರ ಸಂಖ್ಯೆ 79 ಕೋಟಿ

ಈಗಿರುವ ಅರ್ಹ ಮತದಾರರ ಸಂಖ್ಯೆ 79 ಕೋಟಿ

ಚುನಾವಣೆ ಆಯೋಗದ ಪ್ರಕಾರ ಇಡೀ ಭಾರತದಲ್ಲಿ ಸದ್ಯಕ್ಕೆ ಒಟ್ಟು 79 ಕೋಟಿ ಮಂದಿ ಅರ್ಹ ಮತದಾರರು ಇದ್ದಾರೆ. (ಚಿತ್ರ- indiatoday.intoday.in)

First-time voters ಉತ್ತರ ಪ್ರದೇಶದಲ್ಲಿ ಗರಿಷ್ಠ

First-time voters ಉತ್ತರ ಪ್ರದೇಶದಲ್ಲಿ ಗರಿಷ್ಠ

2014 ರ ಚುನಾವಣೆ ವೇಳೆಗೆ ಮೊದಲ ಬಾರಿಗೆ ಮತ ಚಲಾಯಿಸುವ ಹಕ್ಕು ಪಡೆಯಲಿರುವ ಯುವ ಮತದಾರರು ಉತ್ತರ ಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ವರ್ಷ ದಾಟಿದ ಚೊಚ್ಚಲ ಮತದಾರರ ಸಂಖ್ಯೆ 2.3 ಕೋಟಿ. ಈ ರಾಜ್ಯದಲ್ಲಿ ಈಗಾಗಲೇ 12.9 ಕೋಟಿ ಮತದಾರರು ಇದ್ದಾರೆ.

ಮುಂದೆಯೂ ಉ.ಪ್ರದೇಶ, ಬಿಹಾರ ಯುವಕರದ್ದೇ ಪ್ರಾಬಲ್ಯ

ಮುಂದೆಯೂ ಉ.ಪ್ರದೇಶ, ಬಿಹಾರ ಯುವಕರದ್ದೇ ಪ್ರಾಬಲ್ಯ

ಸರದಿಯಲ್ಲಿ ಮುಂದಿನ ಸ್ಥಾನದಲ್ಲಿ ಮಹಾರಾಷ್ಟ್ರದ ಮಂದಿಯಿದ್ದಾರೆ. ಇಲ್ಲಿರುವ ಸಂಭಾವ್ಯ ಚೊಚ್ಚಲ ಮತದಾರರ ಸಂಖ್ಯೆ 1.05 ಕೋಟಿ. ಅಂದರೆ ಈಗಿರುವ ಒಟ್ಟು ಮತದಾರ ಪೈಕಿ ಶೇ. 13.2ರಷ್ಟು ಮಂದಿ. ಬಿಹಾರ 3ನೇ ಸ್ಥಾನದಲ್ಲಿದೆ. 95 ಲಕ್ಷ ಯುವ ಮತದಾರರು ಮತ ಚಲಾಯಿಸಲು ಸಿದ್ಧರಾಗಿದ್ದಾರೆ. ಪಶ್ಚಿಮ ಬಂಗಾಲ ನಂತರದ ಸ್ಥಾನದಲ್ಲಿದೆ.
2011ರ census ಪ್ರಕಾರ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಜನನ ಪ್ರಮಾಣ ಹೆಚ್ಚಾಗಿರುವುದರಿಂದ ಮುಂದೆಯೂ ಈ ರಾಜ್ಯಗಳಿಂದಲೇ ಚೊಚ್ಚಲ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಭವವಾಗಲಿದ್ದಾರೆ.

ದಕ್ಷಿಣದ ಕಡೆ ಮುಖ ಮಾಡಿದರೆ

ದಕ್ಷಿಣದ ಕಡೆ ಮುಖ ಮಾಡಿದರೆ

ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಚೊಚ್ಚಲ ಮತದಾರರು ಇರುವುದು ಆಂಧ್ರ ಪ್ರದೇಶದಲ್ಲಿ. ಇಲ್ಲಿ 80 ಲಕ್ಷಕ್ಕೂ ಹೆಚ್ಚು ಯುವ ಜನತೆ ಮತ ಚಲಾಯಿಸಲು ಅರ್ಹತೆ ಪಡೆಯಬಹುದಾಗಿದೆ. ನಂತರದ ಸ್ಥಾನದಲ್ಲಿ ತಮಿಳುನಾಡು ಇದ್ದು, 62 ಲಕ್ಷ ಮಂದಿ ಇಲ್ಲಿ ಮೊದಲ ಬಾರಿಗೆ ಮತ ಚಲಾಯಿಸಬಹುದಾಗಿದೆ.
ನಂತರದ ಸ್ಥಾನಗಳಲ್ಲಿ ಕರ್ನಾಟಕ ಮತ್ತು ಕೇರಳ ಇವೆ. ಕರ್ನಾಟಕದಲ್ಲಿ 58 ಲಕ್ಷ ಮಂದಿ ಮತ್ತು ಕೇರಳದಲ್ಲಿ 26 ಲಕ್ಷ ಮಂದಿ ಚೊಚ್ಚಲ ಮತದಾರರು ಇದ್ದಾರೆ. (ಚಿತ್ರ ಕೃಪೆ- indiatoday.intoday.in)

English summary
Lok Sabha polls 2014 first-time voters to cross 12 crore. To put that in perspective, no single party garnered more than 12 crore votes in the 2009 polls, showing how significant this segment can be if all of them register to vote. Uttar Pradesh will have the highest potential first-time voters with 2.3 crore young people crossing 18 in time for the polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X