ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭಾ ಚುನಾವಣೆ: ಜನ ಸಂಪರ್ಕಕ್ಕಾಗಿ ಬಿಜೆಪಿಯಿಂದ ಪಾದಯಾತ್ರೆಯ ತಂತ್ರ

By ವಿನೋದ್ ಕುಮಾರ್ ಶುಕ್ಲಾ
|
Google Oneindia Kannada News

ನವದೆಹಲಿ, ನವೆಂಬರ್ 28: 2019 ರ ಲೋಕಸಭಾ ಚುನಾವಣೆಗೆ ಇಂದಿನಿಂದಲೇ ತಯಾರಿ ಆರಂಭಿಸಿರುವ ಬಿಜೆಪಿ ಜನಸಂಪರ್ಕಕ್ಕಾಗಿ ಪಾದಯಾತ್ರೆಯ ತಂತ್ರವನ್ನು ಅನುಸರಿಸಲು ನಿರ್ಧರಿಸಿದೆ.

ಲೋಕಸಭೆ ಚುನಾವಣೆ : ಕರ್ನಾಟಕ ಬಿಜೆಪಿಯಿಂದ ಪ್ರಭಾರಿಗಳ ನೇಮಕ ಲೋಕಸಭೆ ಚುನಾವಣೆ : ಕರ್ನಾಟಕ ಬಿಜೆಪಿಯಿಂದ ಪ್ರಭಾರಿಗಳ ನೇಮಕ

ಪಕ್ಷದ ಪ್ರತಿ ಮಂಡಲ ವಿಭಾಗದಿಂದ 10 ಕಿಮೀ ದೂರದವರೆಗೆ ಪಾದಯಾತ್ರೆ ಕೈಗೊಳ್ಳುವ ಮೂಲಕ ಆ ಭಾಗದ ಮತದಾರರನ್ನು ಸೆಳೆಯುವ ತಂತ್ರಕ್ಕೆ ಬಿಜೆಪಿ ಕೈಹಾಕಿದೆ.

ರಾಜ್ಯ ರಾಜಕಾರಣದಿಂದ ಶೋಭಾಗೆ ಮುಕ್ತಿ?ಲೋಕಸಭೆಗೆ ಬೆಂಗಳೂರಿಂದ ಸ್ಪರ್ಧೆ? ರಾಜ್ಯ ರಾಜಕಾರಣದಿಂದ ಶೋಭಾಗೆ ಮುಕ್ತಿ?ಲೋಕಸಭೆಗೆ ಬೆಂಗಳೂರಿಂದ ಸ್ಪರ್ಧೆ?

ಆಯಾ ಕ್ಷೇತ್ರದ ಮುಖಂಡರು, ಕಾರ್ಯಕರ್ತರು, ಶಾಸಕರು, ಸಂಸದರು ಸೇರಿದಂತೆ ಸುಮಾರು 50-60 ಬಿಜೆಪಿ ಸದಸ್ಯರು ಮಂಡಲ ವಿಭಾಗದಿಂದ ಪಾದಯಾತ್ರೆ ಆರಂಭಿಸುವುದು. 10 ಕಿಮೀ ದೂರದಲ್ಲಿರುವ ಒಂದು ನಿರ್ದಿಷ್ಟ ಕೇಂದ್ರಕ್ಕೆ ತಲುಪುವರೆಗೂ ಜನರಲ್ಲಿ ಕೇಂದ್ರ ಎನ್ ಡಿಎ ಸರ್ಕಾರದ ಸಾಧನೆಗಳನ್ನು, ಮತ್ತು ಮುಂಬರುವ ಚುನಾವಣೆಯ ನಂತರ ಹಾಕಿಕೊಂಡಿರುವ ಯೋಜನೆಗಳನ್ನು ಮನಮುಟ್ಟುವಂತೆ ಪರಿಚಯಿಸುವುದು.

Lok Sabha elections: BJP organise 10 KM long Padyatra from every mandal

ಈ ಯೋಜನೆ 15 ದಿನಗಳ ಕಾಲ ನಡೆಯಲಿದ್ದು, ಇದೇ ಡಿಸೆಂಬರ್ 1 ರಿಂದ 15 ರವರೆಗೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಪ್ರತಿ ಮಂಡಲದಲ್ಲೂ ಒಂದು ತಂಡವನ್ನು ರಚಿಸಿ, ಅದಕ್ಕೆ ಪ್ರತಿದಿನವೂ ಒಬ್ಬೊಬ್ಬ 'ದಿವಸ್ ಪ್ರಮುಖ್' ಎಂಬ ಹೆಸರಿನಲ್ಲಿ ಮುಖ್ಯಸ್ಥರನ್ನು ನೇಮಿಸಲಾಗುತ್ತದೆ. ಈ ಯಾತ್ರೆಗೆ ಅಗತ್ಯವಿರುವ ಎಲ್ಲಾ ತಯಾರಿಯನ್ನೂ ಬಿಜೆಪಿ ಈಗಾಗಲೇ ಮಾಡಿಕೊಂಡಿದೆ.

ರಾಜ್ಯ ರಾಜಕಾರಣದಿಂದ ಶೋಭಾಗೆ ಮುಕ್ತಿ?ಲೋಕಸಭೆಗೆ ಬೆಂಗಳೂರಿಂದ ಸ್ಪರ್ಧೆ? ರಾಜ್ಯ ರಾಜಕಾರಣದಿಂದ ಶೋಭಾಗೆ ಮುಕ್ತಿ?ಲೋಕಸಭೆಗೆ ಬೆಂಗಳೂರಿಂದ ಸ್ಪರ್ಧೆ?

ಆಯಾ ಪ್ರದೇಶದ ಬಿಜೆಪಿ ಮುಖಂಡರ ಮನೆಯಲ್ಲೇ ರಾತ್ರಿ ನಾಯಕರು ತಂಗಲಿದ್ದು, ಅಲ್ಲಿನ ಜನರಿಗೆ ಸರ್ಕಾರದ ಬಗೆಗಿರುವ ಪ್ರತಿಕ್ರಿಯೆಯನ್ನು ಕಲೆಹಾಕುವ ಕೆಲಸವನ್ನೂ ಮಾಡುತ್ತಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಈ ಪಾದಯಾತ್ರೆ ಫಲನೀಡುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

English summary
The Bharatiya Janata Party (BJP) wants to keep its workers motivated till at least 2019 Lok Sabha elections. So in one such move, the party will be organising around 10-lilometre-long padyatra from every mandal to another important designated location in the city to connect with the people,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X